ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಕರೋನಗೆ ಬಲಿ, ಶೋಕ ಸಾಗರದಲ್ಲಿ ಇಡೀ ಚಿತ್ರರಂಗ.

ದೇಶದಲ್ಲಿ ಕರೋನ ಮಹಾಮಾರಿಯ ಆರ್ಭಟ ಯಾವ ರೀತಿಯಲ್ಲಿ ಮುಂದುವರೆದಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಎಂದು ಹೇಳಬಹುದು. ಹೌದು ಲಕ್ಷ ಲಕ್ಷ ಜನರು ಕರೋನ ಸೋಂಕಿನಿಂದ ಬಳಲುತ್ತಿದ್ದು ತಮ್ಮ ಪ್ರಾಣವನ್ನ ಕಾಪಾಡಿಕೊಳ್ಳಲು ಹರಸಾಹಸವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಕರೋನ ಮಹಾಮಾರಿ ಬಹಳ ವೇಗವಾಗಿ ಹರಡುತ್ತಿದ್ದು ಹಲವು ಸೆಲೆಬ್ರಿಟಿಗಳು ಕೂಡ ಈ ಕರೋನ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ ಎಂದು ಹೇಳಬಹುದು. ಹೌದು ಈ ಬಾರಿ ಕರೋನ ಮಹಾಮಾರಿಗೆ ಹಲವು ಚಿತ್ರರಂಗದ ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸಿದ್ದು ಇಡೀ ಚಿತ್ರರಂಗವೇ ಕಣ್ಣೀರಿನಲ್ಲಿ ಮುಳುಗಿದೆ ಎಂದು ಹೇಳಬಹುದು. ಕರೋನ ಮಹಾಮಾರಿಯ ಕಾರಣ ಹಲವು ನಟರು, ನಟಿಯರು ಮತ್ತು ಇತರೆ ಸೆಲೆಬ್ರಿಟಿಗಳು ಇಹಲೋಕವನ್ನ ತ್ಯಜಿಸಿದ್ದು ಇದು ಚಿತ್ರರಂಗದ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ ಈಗ ದೇಶದ ಚಿತ್ರರಂಗದ ಇನ್ನೊಬ್ಬ ಖ್ಯಾತ ಸಂಗೀತ ನಿರ್ದೇಶಕ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇದು ಚಿತ್ರರಂಗದ ಆಘಾತಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಈ ಸಂಗೀತ ನಿರ್ದೇಶಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಬಾಲಿವುಡ್ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಂದು ಹೆಸರನ್ನ ಮಾಡಿದ್ದ ಶ್ರವಣ್ ರಾಥೋಡ್ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಶ್ರವಣ್ ರಾಥೋಡ್ ಅವರು ಕೆಲವು ಸಮಯದಿಂದ ಕರೋನ ಮಹಾಮಾರಿಯಿಂದ ಬಳಲುತ್ತಿದ್ದು ಮುಂಬೈ ನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು, ಆದರೆ ಮೊನ್ನೆ ಮುಂಬೈನ ಎಸ್‍ಎಲ್ ರೆಹಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

Shravan rathod

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶ್ರವಣ್ ಅವರು ಕೊರೆನಾ ಸೋಂಕಿಗೆ ತುತ್ತಾಗಿದ್ದರು, ರಾಥೋಡ್ ಅವರಿಗೆ ಉಸಿರಾಟದ ಸಮಸ್ಯೆ ಉಂಟಾದ ಕಾರಣ ಅವರಿಗೆ ವೆಂಟಿಲೇಟರ್ ಕೂಡ ನೀಡಲಾಗಿತ್ತು. ಹೃದಯ ಸಂಬಂಧಿ, ಮುಧುಮೇಹದಿಂದ ಬಳಲುತ್ತಿದ್ದ ಶ್ರವಣ್ ಕೊರೊನಾ ಸೋಂಕು ತಗಲುತ್ತಿದ್ದಂತೆ ಅವರ ಆರೋಗ್ಯ ಸಂಪೂರ್ಣ ಹದೆಗಟ್ಟಿತ್ತು ಎಂದು ಎಸ್‍ಎಲ್ ರೆಹಜಾ ಆಸ್ಪತ್ರೆಯ ವೈದ್ಯ ಕೀರ್ತಿ ಭೂಷಣ್ ಹೇಳಿದ್ದಾರೆ. ಇನ್ನು ಶ್ರವಣ್ ಅವರ ಸಂಪರ್ಕದಲ್ಲಿ ಇದ್ದ ಪುತ್ರ ಸಂಜೀವ್ ರಾಥೋಡ್ ವರದಿ ಸಹ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸುಮಾರು 66 ವರ್ಷ ವಯಸ್ಸಿನ ಶ್ರವಣ್ ರಾಥೋಡ್ ಅವರು ತಮ್ಮ ಇಬ್ಬರು ಮಕ್ಕಳು ಮತ್ತು ಕುಟುಂಬವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ. 90ರ ದಶಕದಲ್ಲಿ ನದೀಮ್ ಮತ್ತು ಶ್ರವಣ್ ಜೋಡಿ ಬಾಲಿವುಡ್‍ಗೆ ಸೂಪರ್ ಹಿಟ್ ಹಾಡುಗಳನ್ನ ನೀಡಿತ್ತು. ಆಶಿಕಿ, ಸಾಜನ್, ದಿಲ್ ಹೈ ಕೀ ಮಾನತಾ ನಹೀಂ, ಸಡಕ್, ಪರದೇಶ್ ಸೇರಿದಂತೆ ಹಲವು ಚಿತ್ರಗಳಿಗೆ ನದೀಮ್ ಮತ್ತು ಶ್ರವಣ್ ಸಂಗೀತವಿದೆ. ಸ್ನೇಹಿತರೆ ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Shravan rathod

Join Nadunudi News WhatsApp Group