Tulasi and Madhava: ಮಾಧವನಿಗೆ ಹೆಂಡತಿಯಾದ ಬೆನ್ನಲ್ಲೇ ದೊಡ್ಡ ನಿರ್ಧಾರ ತಗೆದುಕೊಂಡ ತುಳಸಿ, ಮಾಧವನ ಮುಂದೆ ನಡೆ ಏನು…?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಇನ್ನೊಂದು ತಿರುವು, ಕಠಿಣ ನಿರ್ಧಾರ ತಗೆದುಕೊಂಡ ತುಳಸಿ.
Shreerastu Shubhamastu Serial: ಜೀ ಕನ್ನಡ ವಾಹಿನಿ ಪ್ರಸಾರ ಪಡಿಸುತ್ತಿರುವ ಎಲ್ಲ ಧಾರಾವಾಹಿಗಳು ಒಂದಿಕ್ಕಿಂತ ಒಂದು ಚೆನ್ನಾಗಿ ಮೂಡಿ ಬರುತ್ತಿವೆ. ಪ್ರತಿನಿತ್ಯ ಹೊಸ ಹೊಸ ತಿರುವುಗಳ ಜೊತೆ ಧಾರಾವಾಹಿಯ ಸಂಚಿಕೆಗಳು ಪ್ರೇಕ್ಷಕರನ್ನು ರಂಜಿಸುತ್ತಿದೆ. ಇನ್ನು ಜೀ ವಾಹಿನಿಯಲ್ಲಿ ಶ್ರೀರಸ್ತು ಶುಭಮಸ್ತು(Shreerastu Shubhamastu) ಧಾರಾವಾಹಿ ಹೆಚ್ಚಿನ ಪ್ರೇಕ್ಷರನ್ನು ಪಡೆದುಕೊಂಡು.
ಸ್ನೇಹ ಪ್ರೀತಿಯಾಗುವ ಬಹಳ ಅದ್ಭುತವಾದ ಕಥೆ ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ. ಇನ್ನು ಧಾರಾವಾಹಿಯಲ್ಲಿ ತುಳಸಿ ಮಾದವರ ಕಲ್ಯಾಣ ಆದ ಬಳಿಕ ಧಾರಾವಾಹಿಯಲ್ಲಿ ಹೆಚ್ಚು ಹೆಚ್ಚು ಟ್ವಿಸ್ಟ್ ಹುಟ್ಟಿಕೊಳ್ಳುತ್ತಿದೆ. ಇದೀಗ ತುಳಸಿ ಹಾಗು ಮಾಧವರ ನಡುವಿನ ದಾಂಪತ್ಯ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿಯೋಣ.
ದತ್ತನಿಗೆ ಅವಮಾನ ಮಾಡಿದ ಶಾರ್ವರಿ
ಇನ್ನು ಎರಡು ಮನೆಯವರಿಗೆ ತಿಳಿಸದೆ ದತ್ತ ಹಗೂ ಸಿರಿ ತುಳಸಿ ಮಾದವರ ಕಲ್ಯಾಣ ಮಾಡಿರುತ್ತಾರೆ. ಎರಡು ಮನೆಯವರು ಕೂಡ ಇವರ ಮದುವೆಯನ್ನು ಒಪ್ಪಿರುವುದಿಲ್ಲ. ಹೀಗಾಗಿ ದತ್ತನಿಗೆ ತನ್ನ ಸೊಸೆ ಮಾಧವನ ಮನೆಯಲ್ಲಿ ಸಂತೋಷವಾಗಿ ಇದ್ದಳೋ ಇಲವೋ ಎನ್ನುವ ಬಗ್ಗೆ ಚಿಂತೆಯಿರುತ್ತದೆ. ಹೀಗಾಗಿ ಸಿರಿ ತಂದೆಯ ಜೊತೆ ದತ್ತಣ್ಣ ಮಾಧವನ ಮನೆಗೆ ಹೋಗುತ್ತಾರೆ. ಅಲ್ಲಿ ತುಳಸಿಯನ್ನು ಭೇಟಿಯಾಗಲು ಹೋದಾಗ ಶಾರ್ವರಿ ಬಳಿ ಮಾತನಾಡುತ್ತಾನೆ.
ದತ್ತ ಶಾರ್ವರಿಯ ಬಳಿ ನಿಮಲ್ಲರಿಗೂ ತಿಳಿಸದೇ ತುಳಸಿ ಮಾದವರ ಕಲ್ಯಾಣ ಮಾಡಿಸಿದ್ದೇನೆ. ಅನಿವಾರ್ಯ ಪರಿಸ್ಥಿಯಲ್ಲಿ ಯಾರಿಗೂ ಹೇಳಲು ಆಗಲಿಲ್ಲ. ನನ್ನ ಸೊಸೆ ಯಾವುದೇ ತಪ್ಪು ಮಾಡಿದರು ನೀವು ಅದನ್ನು ಕ್ಷಮಿಸಿ ಎಂದು ಹೇಳುತ್ತಾರೆ. ಈ ವೇಳೆ ಶಾರ್ವರಿ ದತ್ತನಿಗೆ ಅವಮಾನ ಮಾಡುತ್ತಾಳೆ. ತುಳಸಿ ಈ ಮನೆಯಲ್ಲಿ ಸಂತೋಷವಾಗಿ ಇರುವುದಿಲ್ಲ, ಅದು ಅಸಾಧ್ಯ. ತುಳಸಿ ಮಾಧವನಿಗೆ ಮಾತ್ರ ಹೆಂಡತಿ ಈ ಮನೆಯ ಸದ್ಯಸ್ಯೆ ಆಗಲು ಸಾಧ್ಯವಿಲ್ಲ ಎನ್ನುತ್ತಾಳೆ. ಈ ಮಾತನ್ನು ಕೇಳಿ ದತ್ತನ ಬೇಸರಪಟ್ಟುಕೊಳ್ಳುತ್ತಾರೆ.
ಮಾಧವನಿಗೆ ಹೆಂಡತಿಯಾದ ಬೆನ್ನಲ್ಲೇ ದೊಡ್ಡ ನಿರ್ಧಾರ ತಗೆದುಕೊಂಡ ತುಳಸಿ
ಇನ್ನು ದತ್ತಣ್ಣ ಮನೆಯವರ ಬಳಿ ವರಮಹಾಲಕ್ಷ್ಮಿ ಹಬ್ಬಕೆ ಬರುವಂತೆ ಎಲ್ಲರಿಗೂ ಹೇಳುತ್ತಾನೆ ಆದರೆ ಶಾರ್ವರಿ ನಾವು ಯಾರು ಬರುವುದಿಲ್ಲ ಎಂದು ನೇರವಾಗಿ ಉತ್ತರಿಸುತ್ತಾಳೆ. ಇನ್ನೊಂದೆಡೆ ಮಾಧವ ತುಳಸಿಯನ್ನು ಮಾತನಾಡಿಸಲು ಪ್ರಯತ್ನಿಸುತ್ತಾನೆ.
ತುಳಸಿಗೆ ಬಟ್ಟೆ ಮಡಚಿಡಲು ಸಹಾಯ ಮಾಡಲು ಹೋಗುತ್ತಾನೆ ಆದಷ್ಟೇ ತುಳಸಿ, ನನಗೆ ನಿಮ್ಮ ಜೊತೆ ಯಾವ ಸಂಬಂಧವನ್ನು ಬೆಳೆಸಲು ಇಷ್ಟವಿಲ್ಲ. ನಮ್ಮಿಬ್ಬರ ನಡುವೆ ಸ್ನೇಹ ಸಂಬಂಧವೇ ಸಾಕು ಎಂದು ಒಂದೇ ಮಾತಿನಲ್ಲಿ ಉತ್ತರಿಸುತ್ತಾಳೆ. ತುಳಸಿಯ ಈ ನೇರ ಮಾತು ಮಾಧವನಿಗೆ ಬೇಸರ ನೀಡುತ್ತದೆ. ಇನ್ನು ಮಾಧವ ಹಾಗೂ ತುಳಸಿಯ ಮದುವೆ ಮನೆಯವರು ಒಪ್ಪುತ್ತಾರಾ ಅಥವಾ ಇಲ್ಲವಾ ಎನ್ನುವುದನ್ನು ಕಾದು ನೋಡಬೇಕಿದೆ.