Shrirasthu Shubhamasthu: ಮಾಧವನಿಂದ ತಾಳಿ ಕಟ್ಟಿಸಿಕೊಂಡ ತುಳಸಿಗೆ ಆಘಾತ, ಧಾರಾವಾಹಿಗೆ ದೊಡ್ಡ ತಿರುವು ನೀಡಿದ ಸಮರ್ಥ್.
ಮಾಧವ ತುಳಸಿಯ ಮದುವೆ ಆದ ಬೆನ್ನಲ್ಲೇ ಧಾರಾವಾಹಿಯಲ್ಲಿ ದೊಡ್ಡ ತಿರುವು.
Shrirasthu Shubhamasthu Serial Madhava Tulsi Marriage: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಧಾರಾವಾಹಿಗಳು ಹೆಚ್ಚಿನ ಟಿಆರ್ ಪಿ ಪಡೆದುಕೊಂಡಿದೆ. ಇನ್ನು ಜಿ ಕನ್ನಡ ವಾಹಿನಲ್ಲಿ ಇತ್ತೀಚಿಗೆ ಬಿಡುಗಡೆಗೊಂಡ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬಾರಿ ಜನಪ್ರಿಯವಾಗಿದೆ. ಈ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ಹಿರಿಯ ನಟಿ ಸುಧಾರಾಣಿ ಅವರು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಸುಧಾರಾಣಿ ಅವರು ಇತ್ತೀಚಿಗೆ ಸಿನಿಮಾಗಳಲ್ಲಿ ಪೋಷಕರ ಪಾತ್ರದಲ್ಲಿ ಮಿಂಚುತ್ತಿದ್ದು ಕಿರುತೆರೆಯ ಮೂಲಕ ಮತ್ತೆ ಮುಖ್ಯ ಪಾತ್ರಕ್ಕೆ ಕಾಲಿಟ್ಟಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿ ಸುಧಾರಾಣಿ ಅವರಿಗೆ ಹೆಚ್ಚಿನ ಖ್ಯಾತಿ ನೀಡಿದೆ.
ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಾರಂಭದಲ್ಲಿ ಅತ್ತೆ ಸೊಸೆಯ ಭಾಂದವ್ಯದ ಬಗ್ಗೆ ತಿಳಿಸಿತ್ತು. ತುಳುಸಿ ಮಗನ ಮದುವೆಯ ನಂತರ ತುಳಸಿ ಹಾಗೂ ಮಾಧವನ ಸ್ನೇಹ ಸಂಭದವನ್ನು ಧಾರಾವಾಹಿಯಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಲಾಗಿತ್ತು. ಬಹಳ ವರ್ಷಗಳಿಂದ ಒಬ್ಬಂಟಿ ಜೀವನ ನಡೆಸುತ್ತಿರುವ ಮಾಧವನ ಬದುಕಿನಲ್ಲಿ ತುಳುಸಿ ಅವರು ಪರಿಚಯವಾಗುತ್ತಾರೆ. ಅನಿರೀಕ್ಷಿತ ಭೇಟಿಯಿಂದ ಉಂಟಾದ ತುಳಸಿ ಮಾಧವರ ಸ್ನೇಹಿ ಇದೀಗ ಮಹತ್ತರ ತಿರುವಿನ ಜೊತೆ ಮದುವೆಗೆ ತಲುಪಿದೆ.
ತುಳಸಿ ಮಾದವರ ಕಲ್ಯಾಣ
ಇನ್ನು ಮಾಧವನ ಮಗ ಅಭಿ ಮಾಡುವೆ ಸಿದ್ಧತೆಯಲಿ ಮನೆಯವರು ಬ್ಯುಸಿ ಆಗಿರುತ್ತಾರೆ. ಅಭಿ ಮದುವೆಗೆ ಮಾಧವನ ಬರುವಿಕೆಯನ್ನು ಮನೆಯವರು ಎದುರು ನೋಡುತ್ತಿರುತ್ತಾರೆ. ಆದರೆ ಮಾಧವ ಮತ್ತು ತುಳಸಿಯ ಮಾಡುವೆ ಆಗುತ್ತಿದೆ ಎನ್ನುವುದರ ಸಣ್ಣ ಸುಳಿವು ಕೂಡ ಯಾರಿಗೂ ಸಿಗುವುದಿಲ್ಲ. ತುಲಸು ಮಾವ ದತ್ತನ ಸಮ್ಮುಖದಲ್ಲಿ ತುಳಸಿ ಹಾಗೂ ಮಾಧವನ ಕಲ್ಯಾಣ ನಡೆಯುತ್ತದೆ. ತನ್ನ ಅತ್ತೆಯಲ್ಲಿ ತಾಯಿಯ ಪ್ರೀತಿಯನ್ನು ಕಾಣುತ್ತಿರುವ ಸಿರಿ ಕೂಡ ತುಳಸಿ ಮದುವೆಗೆ ಬೆಂಬಲ ನೀಡುತ್ತಾಳೆ.
ಇನ್ನು ತುಳಸಿಗೆ ಮದುವೆಯಾಗಲು ಸಮ್ಮತಿ ಇರುವುದಿಲ್ಲ. ಆದರೂ ಮಾವನ ಮಾತಿಗೆ ಬೆಲೆ ಕೊಟ್ಟು ತುಳಸಿ ಮದುವೆಗೆ ಒಪ್ಪಿರುತ್ತಾಳೆ. ಮಾಧವ ತುಳಸಿಗೆ ತಾಳಿ ಕಟ್ಟುವ ಸಮಯದಲ್ಲಿ, ಕಾಲುಂಗರ ಧರಿಸುವ ಸಮಯದಲ್ಲಿ, ಸಪ್ತಪದಿ ತುಳಿಯುವ ಸಮಯದಲ್ಲಿ ಕೂಡ ಬಹಳ ಮುಜುಗರಕ್ಕೊಳಗುತ್ತಾಳೆ. ಆದರೆ ದತ್ತಣ್ಣ ಸಪ್ತಪದಿಯ ಏಳು ಹೆಜ್ಜೆಯ ಅರ್ಥವನ್ನು ವಿವ್ಬಾರಿಸುತ್ತಾ ತುಳಸಿ ಮಾಧರವ ಮದುವೆಯನ್ನು ಬಹಳ ಶಾಸ್ತ್ರೋಸ್ತವಾಗಿ ನೆರವೇರಿಸುತ್ತಾನೆ.
ಮಾಧವ ತುಳಸಿ ಕುತ್ತಿಗೆಗೆ ತಾಳಿ ಕಟ್ಟಿದ ಬೆನ್ನಲ್ಲೇ ದಿಟ್ಟ ನಿರ್ಧಾರ ತಗೆದುಕೊಂಡ ಸಮರ್ಥ್
ಇನ್ನು ತುಳಸಿ ಮಗ ಸಮರ್ಥ್ ಮೊದಲಿಂದಲೂ ಇವರ ಮದುವೆಯನ್ನು ವಿರೋಧಿಸುತ್ತಾನೆ. ಹೀಗಾಗಿ ಮದುವೆಯನ್ನು ತಡೆಯಲು ಸಮರ್ಥ್ ದೇವಸ್ಥಾನಕ್ಕೆ ಆಗಮಿಸುತ್ತಾನೆ. ಆದರೆ ಸಮರ್ಥ್ ಬರುವುದರೊಳಗೆ ತುಳಸಿ ಮಾಧವನ ಕಲ್ಯಾಣ ನೆರವೇರಿರುತ್ತದೆ. ಮಾಧವ ತುಳಸಿ ಕುತ್ತಿಗೆಗೆ ತಾಳಿ ಕಟ್ಟಿದನ್ನು ನೋಡಿದ ಸಮರ್ಥ್ ಕೋಪಗೊಳ್ಳುತ್ತಾನೆ.
ತುಳಸಿ ಮೇಲೆ ಕೋಪ ಮಾಡಿಕೊಂಡ ಸಮರ್ಥ್ ನನ್ನ ನಿನ್ನ ಸಂಬಂಧ ಇಂದಿಗೆ ಮುಗಿಯಿತು ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ತುಳಸಿ ಎಷ್ಟೇ ಕರೆದರೂ ಸಮರ್ಥ್ ಬರುವುದಿಲ್ಲ. ಇನ್ನು ಎರಡು ಮನೆಯವರಿಗೂ ತಿಳಿಯದೆ ಇಬ್ಬರು ಮದುವೆಯಾಗಿದ್ದಾರೆ. ಮಾಧವನ ಮನೆಯಲ್ಲಿ ಅಭಿ ಮದುವೆಗೆ ಸಿದ್ಧತೆ ನಡೆಯುತ್ತಿದ್ದರೆ ಈ ಕಡೆ ಮಾಧವ ತುಳುಸಿ ಮದುವೆಯಾಗಿರುವುದನ್ನು ಯಾರು ಊಹೆಯು ಮಾಡಿರುವುದಿಲ್ಲ. ಇನ್ನು ಮಾಧವನ ಮನೆಯವರು ಈ ಇಬ್ಬರ ಮದುವೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.