Shubman Gill About Rashmika: ರಶ್ಮಿಕಾ ಮೇಲಿನ ಪ್ರೀತಿ ಬಗ್ಗೆ ಸ್ಪಷ್ಟನೆ ನೀಡಿದ ಶುಭಮನ್ ಗಿಲ್, ಆಕೆ ನನ್ನ ಕ್ರಶ್ ಅಲ್ಲ.
Rashmika Mandanna And Shubman Gill Gossips: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಇದೀಗ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ.
ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳು ಇವೆ. ಬಹುಭಾಷಾ ನಟಿಯಾಗಿ ರಶ್ಮಿಕಾ ಮಂದಣ್ಣ ಹಲವು ಸಿನಿಮಾದಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ.
ರಶ್ಮಿಕಾ ಕಾಲಿಟ್ಟ ಅನೇಕ ಸಿನಿಮಾಗಳು ಯಶಸ್ಸು ಕಂಡಿದೆ. ಈ ಕಾರಣದಿಂದ ನಟಿ ರಶ್ಮಿಕಾ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇದೀಗ ಭಾರತದ ತಂಡದ ಯುವ ಕ್ರಿಕೆಟ್ ಆಟಗಾರ ರಶ್ಮಿಕಾ ಬಗ್ಗೆ ಮಾತನಾಡಿರುವುದು ವೈರಲ್ ಆಗುತ್ತಿದೆ.
ರಶ್ಮಿಕಾ ಮಂದಣ್ಣ ಮತ್ತು ಕ್ರಿಕೆಟಿಗ ಶುಭ್ ಮನ್ ಗಿಲ್
ಭಾರತ ತಂಡದ ಯುವ ಆಟಗಾರ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕ್ರಶ್ ಎಂದು ಹೇಳಿಕೊಂಡಿದ್ದಾರೆ ಎಂಬುದರ ಬಗ್ಗೆ ಭಾರಿ ಸುದ್ದಿಯಾಗಿತ್ತು.
ಇದೀಗ ಈ ವಿಚಾರದ ಬಗ್ಗೆ ಕ್ರಿಕೆಟಿಗ ಶುಭ್ ಮನ್ ಗಿಲ್ (Shubman Gill) ಕೋಪಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗ ಶುಭ್ ಮನ್ ಗಿಲ್ ಹಾಗು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿತ್ತು. ಅದನ್ನು ಕಂಡ ಕ್ರಿಕೆಟಿಗ ಶುಭ್ ಮನ್ ಗಿಲ್ ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ರಶ್ಮಿಕಾ ತಮ್ಮ ಕ್ರಶ್ ಅಲ್ಲ ಎಂದು ಸ್ಪಷ್ಟನೆ ನೀಡಿದ ಕ್ರಿಕೆಟಿಗ ಶುಭ್ ಮನ್ ಗಿಲ್
ನಟಿ ರಾಶ್ಮಿಕಾ ನನ್ನ ಕ್ರಶ್ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಕ್ರಶ್ ಅವಳಲ್ಲ. ಯಾವತ್ತೂ ನಾನು ಹೇಳಿಲ್ಲ, ಹೇಳುವುದು ಇಲ್ಲ.
ಇದೊಂದು ಸುಳ್ಳು ಸುದ್ದಿ ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಅವರು ರಶ್ಮಿಕಾ ತಮ್ಮ ಕ್ರಶ್ ಅಲ್ಲ ಎಂದು ಉತ್ತರಿಸಿದ್ದಾರೆ. ಯಾವ ಮಾಧ್ಯಮದಲ್ಲಿಯೂ ನಾನು ಈ ರೀತಿಯಾಗಿ ಮಾತನಾಡಿಲ್ಲ ಎಂದು ಅವರು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.