Shubman Gill: ಶುಬ್ಮನ್ ಗಿಲ್ ಹೇಗಿದ್ದಾರೆ…? ಅವರು ಮುಂದಿನ ಪಂದ್ಯಾವಳಿಯಲ್ಲಿ ಆಡುತ್ತಾರೆಯೇ…? ಇದು ಬಿಸಿಸಿಐ ಮಾಹಿತಿ

ಆರಂಭಿಕ ಪಂದ್ಯದಿಂದ ಹೊರಗುಳಿದ ಭಾರತದ ಯುವ ಆರಂಭಿಕ ಆಟಗಾರ

Shubman Gill Health: 2023 ರ ಐಸಿಸಿ (ICC) ಪುರುಷರ ಕ್ರಿಕೆಟ್ ವಿಶ್ವಕಪ್ (World Cup) ಕ್ರಿಕೆಟ್ ವಿಶ್ವಕಪ್ ನ 13 ನೇ ಆವೃತ್ತಿಯಾಗಿದೆ. ದೇಶದ ವಿವಿಧ ನಗರಗಳಲ್ಲಿ 46 ದಿನಗಳ ಕಾಲ ನಡೆಯುವ ವಿಶ್ವಕಪ್ ಟೂರ್ನಮೆಂಟ್ ಈಗಾಗಲೇ ಆರಂಭವಾಗಿದೆ.

ಈ ಟೂರ್ನಿ ಅಲ್ಲಿ 17 ತಂಡಗಳು ಭಾಗವಹಿಸಲಿದೆ. ನಿನ್ನೆ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜೊತೆ ಆಡಿದೆ. ಅದರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ನಿಂದ ಜಯಗಳಿಸಿಕೊಂಡಿದೆ.

Shubman Gill Latest Update
Image Credit: NDTV

ಆರಂಭಿಕ ಪಂದ್ಯದಿಂದ ಹೊರಗುಳಿದ ಭಾರತದ ಯುವ ಆರಂಭಿಕ ಆಟಗಾರ
ಏಕದಿನ ವಿಶ್ವಕಪ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಲೀಗ್ ಪಂದ್ಯವನ್ನು ಆಡಲು ಭಾರತ ತಂಡ ನಿನ್ನೆ ಚೆನ್ನೈಗೆ ಬಂದಿತ್ತು. ಆದರೆ ಭಾರತದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಡೆಂಗ್ಯೂ ಜ್ವರದಿಂದ ಆಟದಿಂದ ಹೊರಗುಳಿದಿದ್ದರು.

ಶುಭಮನ್ ಗಿಲ್ ಅವರನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿಡಲಾಗಿತ್ತು. ಆದರು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಪ್ರಾರಂಭಿಸುವ ಮೊದಲು ಶುಭಮನ್ ಗಿಲ್ ಅವರ ವೈದ್ಯಕೀಯ ವರದಿಗಾಗಿ ಬೆಳಿಗ್ಗೆ 10:00 ಗಂಟೆಯವರೆಗೆ ಕಾಯಿತು. ವೈದ್ಯರು ಆಡದಂತೆ ಸಲಹೆ ನೀಡಿದ್ದರಿಂದ ಶುಭಮನ್ ಗಿಲ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ.

Shubman Gill Health
Image Credit: Timesofindia

ಭಾರತೀಯ ಆಟಗಾರ ಶುಭಮನ್ ಗಿಲ್ ಅವರ ಆರೋಗ್ಯ ಸ್ಥಿತಿ
ಶುಭಮನ್ ಗಿಲ್ ಅವರಿಗೆ ಸ್ವಲ್ಪ ಜ್ವರವಿದ್ದು, ವೈದ್ಯರ ತೀವ್ರ ಚಿಕಿತ್ಸೆಯಿಂದ ಜ್ವರ ನಿಯಂತ್ರಣಕ್ಕೆ ಬಂದಿದೆ. ಸದ್ಯ ಅವರು ವಿಶ್ರಾಂತಿಯಲ್ಲಿದ್ದು ನಾಳೆಯಿಂದ ತಾಲೀಮು ಆರಂಭಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ನಾಳೆ ಬೆಳಗ್ಗೆ ಮತ್ತೊಮ್ಮೆ ಪರೀಕ್ಷೆ ನಡೆಸಿದ ಬಳಿಕವಷ್ಟೇ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Join Nadunudi News WhatsApp Group

Join Nadunudi News WhatsApp Group