Siddaramaiah: ಗೃಹ ಲಕ್ಷ್ಮಿಯರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ, ಈ ದಿನ ಗೃಹಲಕ್ಷ್ಮಿ ಹಣ ಜಮಾ

ಗೃಹ ಲಕ್ಷ್ಮಿ ಹಣ ಜಮಾ ಆಗುವ ಬಗ್ಗೆ ಭರವಸೆ ನೀಡಿದ ಸಿದ್ದರಾಮಯ್ಯ

Siddaramaiah About Gruha Lakshmi Amount: ರಾಜ್ಯದಲ್ಲಿ ಗೃಹ ಲಕ್ಷ್ಮಿ ಹಣ ಕಳೆದ ಎರಡು ಕಂತುಗಳಿಂದ ಖಾತೆಗೆ ಜಮಾ ಆಗುತ್ತಿಲ್ಲ. ಈ ಬಗ್ಗೆ ರಾಜ್ಯದ ಗೃಹಿಣಿಯರು ಸರ್ಕಾರವನ್ನು ದೂರುತ್ತಿದ್ದಾರೆ. ಸರ್ಕಾರವು ಅದೆಷ್ಟೇ ಕ್ರಮ ಕೈಗೊಂಡಿದ್ದರು ಕೂಡ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹಾರವಾಗುತ್ತಿಲ್ಲ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಲಕ್ಷಾಂತರ ಫಲಾನುಭವಿಗಳು 2000 ರೂ.ಗಾಗಿ ಕಾಯುತ್ತಿದ್ದಾರೆ. ಈ ಹಣದ ನಿರೀಕ್ಷೆಯಲ್ಲಿದ್ದ ಗೃಹಿಣಿಯರಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಭರವಸೆ ನೀಡಿದ್ದಾರೆ.

Siddaramaiah About Gruha Lakshmi Amount
Image Credit: Hindustantimes

ಗೃಹಿಣಿಯರಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಭರವಸೆ
ಮಡಿಕೇರಿಯಲ್ಲಿ ನೆರೆ ಪರಿಸ್ಥಿತಿ ಅವಲೋಕಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಮಾಲೀಕರ ಖಾತೆಗೆ ಮೇ ವರೆಗೆ ಹಣ ಜಮೆಯಾಗಿದೆ. ಎರಡು ತಿಂಗಳ ಹಣ ಪಾವತಿ ಬಾಕಿ ಇದೆ ಎಂದರು. ರಾಜ್ಯ ಸರಕಾರದಿಂದ ಗೃಹ ಲಕ್ಷ್ಮೀ ಯೋಜನೆಯ ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ.

ಮೇ ತಿಂಗಳ ಗೃಹ ಲಕ್ಷ್ಮೀ ಯೋಜನೆ ಹಣದ ನಂತರ ಜೂನ್ ಮತ್ತು ಜುಲೈ ತಿಂಗಳ 2000 ಅನ್ನು ಒಟ್ಟಿಗೆ ಪಾವತಿಸಲು ಸೂಚಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯ 2 ತಿಂಗಳ ಬಾಕಿ ಹಣವನ್ನು ಅರ್ಹರ ಖಾತೆಗೆ ಜಮಾ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮಿ ಫಲಾನುಭವಿಗಳು ಖಾತೆಗೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

Siddaramaiah About Gruha Lakshmi Scheme
Image Credit: Hindustantimes

ಗೃಹ ಲಕ್ಷ್ಮಿ ಹಣ ಜಮಾ ಆಗಿರುವ ಬಗ್ಗೆ ಈ ರೀತಿ ಖಾತೆ ಚೆಕ್ ಮಾಡಿಕೊಳ್ಳಿ
•Google Play Store ನಿಂದ ಅಧಿಕೃತ DBT Karnataka Mobile App ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

•ನಂತರ ಅರ್ಜಿದಾರರು ತಮ್ಮ 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.

Join Nadunudi News WhatsApp Group

•ನಿಮ್ಮ ಆಧಾರ್‌ ನಲ್ಲಿರುವಂತೆ ಹೆಸರನ್ನು ನಮೂದಿಸಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ 6 ಅಂಕಿಯ OTP ಅನ್ನು ನಮೂದಿಸಬೇಕು.

•OTP ಅನ್ನು ನಮೂದಿಸಿದ ನಂತರ, ನಾಲ್ಕು (4) ಅಂಕಿಯ ಪಾಸ್‌ ವರ್ಡ್ ಅನ್ನು ರಚಿಸಿ.

•ನಂತರ ಇಲ್ಲಿ ಅರ್ಜಿದಾರರು ಅಂದರೆ ನಿಮ್ಮ ವೈಯಕ್ತಿಕ ವಿವರಗಳು ತೋರುತ್ತದೆ. ಕೊನೆಯ ಕಲಾಂ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಮತ್ತು “ಸರಿ” ಬಟನ್ ಅನ್ನು ಕ್ಲಿಕ್ ಮಾಡಿ.

•ನಂತರ “ಲಾಗಿನ್” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಈಗಾಗಲೇ ರಚಿಸಲಾದ ಪಾಸ್ವರ್ಡ್ ಅನ್ನು ಹಾಕಿ.

•ನಂತರ “ಪಾವತಿ ಸ್ಥಿತಿ” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಗೃಹ ಲಕ್ಷ್ಮಿ ಎಂಬ ಬಟನ್ ಅನ್ನು ಕ್ಲಿಕ್ ಮಾಡಿದರೆ, ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಯಾವ ದಿನಾಂಕವನ್ನು ಹಣ ಠೇವಣಿ ಮಾಡಲಾಗಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿಯುತ್ತದೆ.

Gruha Lakshmi Amount 2024
Image Credit: Karnataka Times

Join Nadunudi News WhatsApp Group