Siddaramaiah About Bihar Election: ಇದೀಗ ಶುಕ್ರವಾರ ಪ್ರಕಟವಾದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಭಾರಿ ಸೋಲಿನ ಬಗ್ಗೆ CM ಸಿದ್ದರಾಮಯ್ಯ ಅವರು ಆರೋಪವನ್ನು ಮಾಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಹಾರ್ ಚುನಾವಣೆಯಲ್ಲಿ ಮತಗಳ್ಳತನವಾಗಿದೆ ಎಂದು ಆರೋಪವನ್ನು ಮಾಡಿದ್ದಾರೆ. ಈ ಬಗ್ಗೆ ನಾವೀಗ ಸಂಪೂರ್ಣ ವವಿವರ ತಿಳಿದುಕೊಳ್ಳೋಣ.
ಬಿಹಾರ್ ಚುನಾವಣೆ ಫಲಿತಾಂಶ 2025
ಬಿಹಾರದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು NDA ಗೆ ದೊಡ್ಡ ಗೆಲುವು ದೊರೆತಿದೆ. ಹೌದು ನಿತೀಶ್ ಕುಮಾರ್ ನೇತ್ರತ್ವದ NDA 202 ಸ್ಥಾನವನ್ನು ಗಳಿಸುವ ಮೂಲಕ ಭರ್ಜರಿ ಗೆಲುವನ್ನು ಸಾಧಿಸಿದೆ. BJP 89, JD(U) ಗೆ 85 ಸ್ಥಾನಗಳು ದೊರೆತಿವೆ. ಹಾಗೆ ಮಹಾಗಥಬಂಧನ್ ( Congress, RJD ) ಕೇವಲ 35 ಸ್ಥಾನಗಳನ್ನ ಪಡೆದುಕೊಂಡಿದೆ. ಕಾಂಗ್ರೆಸ್ 61 ಸ್ಥಾನಗಳಲ್ಲಿ ಹೋರಾಟ ಮಾಡಿದರು ಸಹ ಕೇವಲ 6 ಸ್ಥಾನಗಳನ್ನು ಪಡೆದುಕೊಂಡಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ
ಇದೀಗ ಬಿಹಾರ್ ಚುನಾವಣೆ ಬಗ್ಗೆ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ” ಕಾಂಗ್ರೆಸ್ ಪಕ್ಷ ಬಿಹಾರದಲ್ಲಿ ಯಾಕೆ ಹಿನ್ನೆಡೆಯಾಗಿದೆ ಗೊತ್ತಿಲ್ಲ, ನಾನು ಇನ್ನು ಫಲಿತಾಂಶ ನೋಡಿಲ್ಲ, ಸರಿಯಾದ ಮಾಹಿತಿ ಪಡೆದು ಮತ್ತೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಆರೋಪ
ಕಾಂಗ್ರೆಸ್ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಅವರು ವೋಟ್ ಚೋರಿ ಆರೋಪವನ್ನು ಮಾಡಿದ್ದಾರೆ. ಹೌದು ಟ್ವಿಟರ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು ಬಿಹಾರದ ಕೋಟ್ಯಂತರ ಮತದಾರರಿಗೆ ಧನ್ಯವಾದ ಹೇಳಿದ್ದಾರೆ, “ಬಿಹಾರ ಫಲಿತಾಂಶ ನಿಜಕ್ಕೂ ಆಶ್ಚರ್ಯಕರ . ನಾವು ಆರಂಭದಿಂದಲೇ ನ್ಯಾಯರಹಿತ ಚುನಾವಣೆಯಲ್ಲಿ ಗೆಲುವು ದೊರೆತಿಲ್ಲ” ಎಂದು ಬರೆದುಕೊಂಡಿದ್ದಾರೆ.
OBC ಮತಗಳು ಮತ್ತು ನಿತೀಶ್ ಕುಮಾರ್
ಇದೀಗ ಸಿದ್ದರಾಮಯ್ಯ ಅವರು JD(U) ನಾಯಕರಾಗಿರುವ ನಿತೀಶ್ ಕುಮಾರ್ ಅವರ ಪಾತ್ರ NDA ಗೆಲುವಿಗೆ ದೊಡ್ಡ ಕಾರಣವಾಗಿದೆ. ಹೌದು ನಿತೀಶ್ ಕುಮಾರ್ ಅವರು ಕೂಡ ಒಬಿಸಿ. ಹಾಗಾಗಿ ಕಾಂಗ್ರೆಸ್ OBC ಗಳ ಬೆಂಬಲವನ್ನು ಪಡೆಯಲು ವಿಫಲವಾಗಿದೆ ಎಂದಿದ್ದಾರೆ.
ಜನತೆಯ ತೀರ್ಪು
ಬಿಹಾರ್ ಚುನಾವಣೆಯಲ್ಲಿ ಉದ್ಯೋಗ, ಅಭಿವೃದ್ಧಿ, ಮತ್ತು ಕಲ್ಯಾಣ ಯೋಜನೆಗಳು NDA ಪಕ್ಷದಲ್ಲಿ ಪ್ರಮುಖ ವಿಷಯವಾಗಿದ್ದವು. ಬಿಹಾರದ ಮತದಾರರು ಅಭಿವೃದ್ಧಿ ಮತ್ತು ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡು ಮತವನ್ನು ಹಾಕಿದ್ದಾರೆ. ಆದರೆ ವಿರೋಧಪಕ್ಷ ನಾಯಕರು ಇದನ್ನು ಚೋರಿ ಎಂದು ಕರೆಯುತ್ತಿದ್ದಾರೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

