Siddaramaiah Love Story: LLB ಮಾಡುವಾಗ ಸಿದ್ದರಾಮಯ್ಯ ಲವ್ ಮಾಡಿದ ಹುಡುಗಿ ಯಾರು…? ಲವ್ ಬಗ್ಗೆ ಸಿಎಂ ಮಾತು.
ಮಾಧ್ಯಮಗಳ ಮುಂದೆ ಸಿದ್ದರಾಮಯ್ಯ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.
Siddaramaiah LLB Love Story: ರಾಜ್ಯದ ಮುಖ್ಯಮಂತ್ರಿ Siddaramaiah ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಪಡೆದಾಗಿನಿಂದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುದರಲ್ಲಿ ಬ್ಯುಸಿ ಇದ್ದರು. ಈಗಾಗಲೇ ರಾಜ್ಯದಲ್ಲಿ ಸಿದ್ದರಾಮಯ್ಯ ಘೋಷಿಸಿರುವ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿದೆ. ಇನ್ನು ಒಂದು ಯೋಜನೆ ಅನುಷ್ಠಾನಗೊಳ್ಳುವುದು ಬಾಕಿದೆ.
ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನತೆ ಮೆಚ್ಚಿಕೊಂಡಿದೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡುತ್ತಿರುವ ಸೇವೆಗಳಿಂದಾಗಿ ಸಾಕಷ್ಟು ಜನರ ಮನ ಗೆದಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ LLB Love Story ಬಗ್ಗೆ ಮಾಹಿತಿ ಲಭಿಸಿದೆ.
Anubandha Awards 2023
ಇನ್ನು ಸಾಮಾನ್ಯವಾಗಿ TV ರಿಯಾಲಿಟಿ ಶೋ ಗಳ ಬಗ್ಗೆ ಎಲ್ಲರು ಹೆಚ್ಚಿನ ಕುತೂಹಲ ಇಟ್ಟುಕೊಂಡಿರುತ್ತಾರೆ. ಕಿರುತೆರೆಯಲ್ಲಿ ಕೂಡ ಸಾಕಷ್ಟು ಸೆಲೆಬ್ರೆಟಿಗಳು ಜನರಿಗೆ ಅಚ್ಚು ಮೆಚ್ಚಾಗಿದ್ದರೆ. ಸಿನಿಮಾ ರಂಗದ ಕಲಾವಿದರನ್ನು ಹೇಗೆ ಗುರುತಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೋ ಅದೇ ರೀತಿ ಸೀರಿಯಲ್ ಕಲಾವಿದರನ್ನು ಕೂಡ ಗುರುತಿಸಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇನ್ನು Colors Kannada Channel ನಲ್ಲಿ ಕಿರುತೆರೆಯ ಕಲಾವಿದರಿಗಾಗಿ Anubandha Awards 2023 ಮಾಡಲಾಗುತ್ತದೆ.
Anubandha Awards 2023 ರಾಜ್ಯದ ಮುಖ್ಯಮಂತ್ರಿ
ಸದ್ಯ ಈ Anubandha Awards 2023 ಬಾರಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ತಮ್ಮ ನೆಚ್ಚಿನ ಕಲಾವಿದರು ಯಾವ ಯಾವ Award ಅನ್ನು ಪಡೆಯುತ್ತಾರೆ ಎನ್ನುವುದನ್ನು ನೋಡಲೂ ಕನ್ನಡಿಗರು ಕಾಯುತ್ತಿದ್ದಾರೆ. ಈ ಬಾರಿ ವಿಶೇಷವೆಂದರೆ Anubandha Awards 2023 ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ.
ಸಿದ್ದರಾಮಯ್ಯ ಅವರು Award ಪಂಕ್ಷನ್ ಗೆ ಬಂದಿರುವ Promo ಈಗಾಗಲೇ ರಿಲೀಸ್ ಆಗಿದೆ. ಅವಾರ್ಡ್ ಪ್ರೋಗ್ರಾಮ್ ನಲ್ಲಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ವೇಳೆ ಸಿದ್ದರಾಮಯ್ಯ ಅವರ LLB ಲವ್ ಸ್ಟೋರಿ ಬಗ್ಗೆ ಪ್ರಶ್ನೆ ಎದುರಾಗಿದೆ.
ಸಿದ್ದರಾಮಯ್ಯ ಅವರ LLB ಲವ್ ಸ್ಟೋರಿ
ಕಲರ್ಸ್ ಕನ್ನಡ ನಟ ನಟಿಯರು ಸಿದ್ದರಾಮಯ್ಯ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಭಾಗ್ಯಾ ಲಕ್ಷ್ಮಿ ಧಾರಾವಾಹಿಯ ಭಾಗ್ಯ ಸಿದ್ದರಾಮಯ್ಯ ಅವರಿಗೆ ಅಡುಗೆ ಮಾಡಲು ಬರುತ್ತದಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಅನ್ನ ಮಾಡಲು ಬರುತ್ತದೆ ಎಂದು ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.
ಇನ್ನು ‘ಒಲವಿನ ನಿಲ್ದಾಣ’ ಧಾರಾವಾಹಿಯ ತಾರಿಣಿ ಕೇಳಿದ ಪ್ರಶ್ನೆ ಎಲ್ಲರಲೂ ಅಚ್ಚರಿ ಮೂಡಿಸಿದೆ. ನೀವು LLB ಓದುವಾಗ ಯಾರನ್ನಾದ್ರೂ ಲವ್ ಮಾಡಿದ್ದೀರಾ? ಎಂದು ತಾರಿಣಿ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ನಗುತ್ತಲೇ ಮೌನದಿಂದ ಸಿದ್ದರಾಮಯ್ಯ ಉತ್ತರಿಸುವುದನ್ನು ನೋಡಬಹದಾಗಿದೆ. ಇನ್ನು ಸಿದ್ದರಾಮಯ್ಯ ಅವರು ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಕಿರುತೆರೆಯಲ್ಲಿ 22 , 23 24 ರ ಸೆಪ್ಟೆಂಬರ್ ನಲ್ಲಿ Anubandha Awards 2023 ಎಲ್ಲರ ಮನೆಯಲ್ಲಿ ಪ್ರಸಾರವಾಗಲಿದೆ.