Ads By Google

Siddaramaiah Biopic: ಸಿದ್ದರಾಮಯ್ಯ ಪಾತ್ರದಲ್ಲಿ ಖ್ಯಾತ ನಟ, ಸಿನಿಮಾ ಆಗಲಿದೆ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ.

Siddaramaiah's biopic is coming and Vijay Sethupathi is said to be playing the lead actor in the film.
Ads By Google

Siddaramaiah Biopic Movie: ನಮ್ಮ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರಲಿದೆಯಂತೆ. ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಥೆ ಸಿನಿಮಾವಾಗಿ ಮೂಡಿ ಬರಲಿದೆ.

ಸಿದ್ದರಾಮಯ್ಯ ಜೀವನ ಚರಿತ್ರೆಯ ಸಿನಿಮಾವನ್ನು ಸತ್ಯ ರತ್ನಂ ಅವರು ನಿರ್ದೇಶನ ಮಾಡಲಿದ್ದಾರೆ. ಸಿದ್ದರಾಮಯ್ಯ ಬಯೋಪಿಕ್ ಲೀಡರ್ ರಾಮಯ್ಯ ಎಂದು ಹೆಸರಿಡಲಾಗಿದೆ. ಇಂದು ರಾಮ ನವಮಿಯ ದಿನ ಸಿದ್ದರಾಮಯ್ಯ ಮನೆಯ ಮುಂದೆಯೇ ಚಿತ್ರದ ಪೋಸ್ಟರ್ ಲಾಂಚ್ ಮಾಡಲಾಗಿದೆ.

Image Credit: daijiworld

ಸಿನಿಮಾದಲ್ಲಿ ಮೂಡಿ ಬರಲಿದೆ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ
ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾರೆಕ್ಟಾರ್ ಗೆ ತಮಿಳು ನಟ ವಿಜಯ್ ಸೇತುಪತಿ ಅವರನ್ನು ಅಪ್ರೋಚ್ ಮಾಡಲಾಗಿದೆ.

ವಿಜಯ್ ಕೂಡ ಈ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮುಂದಿನ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಸಹ ನಡೆಯಲಿದೆ. ಮಾರ್ಚ್ 30 ರಂದು ಸಂಜೆ ಮತ್ತೆ ಅಧಿಕೃತವಾಗಿ ಸಿದ್ದರಾಮಯ್ಯ ಅವರ ಕಡೆಯಿಂದಲೇ ಲೀಡರ್ ರಾಮಯ್ಯ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ.

Image Credit: news18

50 ಕೋಟಿ ಬಜೆಟ್ ನಲ್ಲಿ ಮೂಡಿ ಬರಲಿದೆ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ಸಿನಿಮಾ
ಈ ಸಿನಿಮಾದಲ್ಲಿ ರಾಜಕೀಯ ಜರ್ನಿ ಜೊತೆಗೆ ಲವ್ ಸ್ಟೋರಿ ಸಹ ಇರಲಿದೆ. ಸಿದ್ದರಾಮಯ್ಯ ಅವರು ಹೇಳಿದ ಕಥೆಗಳ ಜೊತೆಗೆ ಸಿನಿಮಾವನ್ನು ಕಮರ್ಷಿಯಲ್ ಆಗಿ ಮಾಡಲಾಗುತ್ತಿದೆ. 50 ಕೋಟಿ ಬಜೆಟ್ ನಲ್ಲಿ ಚಿತ್ರ ಮೂಡಿ ಬರಲಿದೆ.

ಅವರ ಕಾಲೇಜು ದಿನಗಳು, ಬಾಲ್ಯ ಜೀವನ ರಾಜಕೀಯ ಎಂಟ್ರಿ ಇವೆಲ್ಲ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಹಯಾತ್ ಫೀರ್ ನಿರ್ಮಾಣದ ಈ ಸಿನಿಮಾಗೆ ವಿಜಯ್ ಸೇತುಪತಿ (Vijay Sethupathi) ನಟಿಸುವುದು ಫಿಕ್ಸ್ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್ ನೋಡಲು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in