Siddaramaiah: ಗೃಹಲಕ್ಷ್ಮಿ, ಶಕ್ತಿ ಯೋಜನೆಯ ಬೆನ್ನಲ್ಲೇ ಮಹಿಳೆಯರಿಗೆ ಇನ್ನೊಂದು ಬಂಪರ್ ಯೋಜನೆ, ಸಿದ್ದರಾಮಯ್ಯ ಘೋಷಣೆ.
ಮಹಿಳೆಯರಿಗಾಗಿ ರಾಜ್ಯ ಸರ್ಕಾರದ ಇನ್ನೊಂದು ಘೋಷಣೆ.
Siddaramaiah Latest Update: ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್(Congress) ಗ್ಯಾರಂಟಿ ಯೋಜನೆಗಳು ಒಂದೊಂದು ಅನುಷ್ಠಾನಗೊಳ್ಳುತ್ತಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದು, ಇನ್ನು ಒಂದು ಯೋಜನೆ ಮಾತ್ರ ಅನುಷ್ಠಾನಕ್ಕೆ ಬರುವುದು ಬಾಕಿ.
ಇನ್ನು ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಲ್ಲಿ ಬಹುಪಾಲು ಮಹಿಳೆರಿಗೆ ಹೆಚ್ಚಿನ ಪ್ರಯೋಜನ ಲಭ್ಯವಾಗಿದೆ ಎಂದರೆ ತಪ್ಪಾಗಲಾರದು. ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಒಂದು ರೀತಿಯಲ್ಲಿ ಸಂಪೂರ್ಣವಾಗಿ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ ಇನ್ನುಳಿದ ಯೋಜನೆಗಳಿಗೂ ಮಹಿಳೆಯರು ಅರ್ಹರಾಗಿದ್ದಾರೆ.
ಗೃಹಲಕ್ಷ್ಮಿ, ಶಕ್ತಿ ಯೋಜನೆಯ ಬೆನ್ನಲ್ಲೇ ಮಹಿಳೆಯರಿಗೆ ಇನ್ನೊಂದು ಬಂಪರ್ ಯೋಜನೆ
ಸದ್ಯ ರಾಜ್ಯದಲ್ಲಿ ಮಹಿಳೆಯಾರಿಗಾಗಿ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಜಾರಿಯಲ್ಲಿದ್ದ ಸಮಯದಲ್ಲೇ ಇದೀಗ ರಾಜ್ಯವೂ ಸರ್ಕಾರ ಮಗದೊಂದು ಮಹತ್ವದ ಯೋಜನೆನ್ನು ಪರಿಚಯಿಸಲು ಮುಂದಾಗಿದೆ. ರಾಜ್ಯದ ಮಹಿಳೆಯರ ಸಬಲೀಕರಣದ ಸಲುವಾಗಿ ಬಡ್ಡಿರಹಿತ ಸಾಲವನ್ನು ನೀಡುವುದರ ಜೊತೆಗೆ ಇದೀಗ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ Siddaramaiah ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಇದೀಗ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೊಸ ಯೋಜನೆಯ ಬಗ್ಗೆ ವಿವರ ತಿಳಿಯೋಣ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಘೋಷಣೆ
“ಸ್ತ್ರೀಯರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಲಯದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಿರುತ್ತದೆ. ಇದಾಕ್ಕಾಗಿ ಸ್ತ್ರೀಯರು ಉದ್ಯಮ, ಕೈಗಾರಿಕೆ, ಸೇವಾ ವಲಯದಲ್ಲಿ ಭಾಗವಹಿಸುವುದು ಅತಿ ಮುಖ್ಯ.
ಸ್ತ್ರೀ ಸ್ವಾವಲಂಬನೆಗಾಗಿ 100 ಪೆಟ್ರೋಲ್ ಬಂಕ್ ಗಳನ್ನೂ ಸ್ತಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ನಿರ್ವಹಣೆಗೆ ವಹಿಸಲು ಕ್ರಮ ಹಾಗೂ ಪೆಟ್ರೋಲ್ ಬಂಕ್ ಗಳ ಸ್ಥಾಪನೆಗೆ ಭೂಮಿ, ತರಬೇತಿ, ಪರವಾನಗಿ ಸೇರಿದಂತೆ ಅಗತ್ಯ ಬೆಂಬಲ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದೇವೆ” ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ನ ಮೂಲಕ ಮಹಿಳೆಯರಿಗೆ ಹೊಸ ಯೋಜನೆ ಪರಿಚಯಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.