Siddaramaiah: ಚುನಾವಣೆಯ ಸಲುವಾಗಿ ತನ್ನ ಆಸ್ತಿ ವಿವರ ನೀಡಿದ ಸಿದ್ದರಾಮಯ್ಯ, ಇವರ ಒಟ್ಟು ಆಸ್ತಿ ಎಷ್ಟು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಟ್ಟು ಆಸ್ತಿಯ ವಿವರದ ಮಾಹಿತಿ.
Siddaramaiah Net Worth: ವಿಧಾನಸಭಾ ಚುನಾವಣೆ ಹತ್ತಿರ ಆಗುತ್ತಿದೆ. ಚುನಾವಣಾ ದಿನಾಂಕವೂ ಮೇ 10 ರಂದು ನಿಗದಿ ಆಗಿದೆ. ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹ ಕಾಂಗ್ರೆಸ್ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರ ಒಟ್ಟು ಆಸ್ತಿಯ ಬಗ್ಗೆ ಬಹಿರಂಗವಾಗಿದೆ.
ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಆಸ್ತಿ ಎಷ್ಟು ಅನ್ನುವುದು ಇದೀಗ ರಿವೀಲ್ ಆಗಿದೆ. ಸಿದ್ದರಾಮಯ್ಯ ಅವರಿಗಿಂತ ಅವರ ಹೆಂಡತಿಯ ಆಸ್ತಿಯ ಮೌಲ್ಯ ಹೆಚ್ಚಿದೆ ಎಂಬುದನ್ನು ತಿಳಿದು ಬಂದಿದೆ.
ಸಿದ್ದರಾಮಯ್ಯ ಅವರ ಬಳಿ ಇರುವ ಒಟ್ಟು ಆಸ್ತಿ
ಸಿದ್ದರಾಮಯ್ಯ ಅವರು ತನ್ನ ಬಳಿ 19 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರಿನಲ್ಲಿ 32.12 ಕೋಟಿ ಆಸ್ತಿ ಇರುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಸಿದ್ದರಾಮಯ್ಯ ಹೆಸರಿನಲ್ಲಿ 9.58 ಕೋಟಿ ಚರಾಸ್ತಿ ಮತ್ತು 9.43 ಕೋಟಿ ಸ್ಥಿರಾಸ್ತಿ ಇದೆಯಂತೆ. ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 11.26 ಕೋಟಿ ಚರಾಸ್ತಿ ಇದೆಯಂತೆ. 19.56 ಕೋಟಿ ಸ್ಥಿರಾಸ್ತಿ ಇದೆ ಹಾಗು 6.84 ಕೋಟಿ ರೂಪಾಯಿ ಸಾಲ ಇರುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ತನ್ನ ಒಟ್ಟು ಆಸ್ತಿಯನ್ನು ಘೋಷಣೆ ಮಾಡಿದ ಸಿದ್ದರಾಮಯ್ಯ
2018 ರಲ್ಲಿ 18.55 ಕೋಟಿ ಅಸ್ತಿ ಘೋಷಿಸಿದ್ದ ಸಿದ್ದರಾಮಯ್ಯ ಇದೀಗ 2023 ರಲ್ಲಿ 19 ಕೋಟಿ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದು, ಸೋಮಣ್ಣ ಎದುರು ಫೈಟ್ ಮಾಡಲಿದ್ದಾರೆ.