Siddaramaiah: ಮತ್ತೆ ನೋಟ್ ಬ್ಯಾನ್ ಮಾಡಿದ್ದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಪ್ರಶ್ನೆ ಮಾಡಿದ ಸಿದ್ದರಾಮಯ್ಯ.
ದೇಶದಲ್ಲಿ 2000 ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿದ್ದಕ್ಕೆ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪ್ರಶ್ನೆ ಮಾಡಿದ್ದಾರೆ.
Siddaramaiah About ₹2000 Note Ban: ಇದೀಗ ದೇಶದಲ್ಲೆಡೆ 2000 ಮುಖಬೆಲೆಯ ನೋಟ್ ಬ್ಯಾನ್ (2000 Note Ban) ಆಗುವ ವಿಚಾರಗಳು ಸಾಕಷ್ಟು ವಿರಾಲ್ ಆಗುತ್ತಿದೆ. ಈ ಹಿಂದೆ ಮೋದಿ ಸರ್ಕಾರ 2016 ರಲ್ಲಿನೋಟ್ ಬ್ಯಾನ್ ಮಾಡಿದ್ದು ಈ ವೇಳೆ ಹೊಸ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರು.
ಇದೀಗ ಮತ್ತೊಮೆ ನೋಟ್ ಬ್ಯಾನ್ ಆಗುವ ಸೂಚನೆ ಸಿಕ್ಕಿದೆ.ಮೋದಿ ನಿರ್ಧಾರದ ವಿರುದ್ಧ ದೇಶದ ಕೆಲ ನಾಗರಿಕರು ಹಾಗು ರಾಜಕೀಯ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಇನ್ನು ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರ ಸರ್ಕಾರದ (Central Government) ವಿರುದ್ಧ ಕಿಡಿಕಾರುತ್ತಿದ್ದಾರೆ.
ಮತ್ತೆ ನೋಟ್ ಬ್ಯಾನ್ ಮಾಡಿದ್ದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ
ಬಿಜೆಪಿ (BJP) ಪಕ್ಷವನ್ನು ಟೀಕಿಸುವ ಮೂಲಕ ಕಾಂಗ್ರೆಸ್ ನಾಯಕರು ನೋಟು ಬ್ಯಾನ್ ಗೆ ಪ್ರತಿಕ್ರಿಸುತ್ತಿದ್ದಾರೆ.ಇನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಕೂಡ ನೋಟು ವಿಚಾರಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯಿಂದ ಮತ್ತೊಂದು ನೋಟ್ ಬ್ಯಾನ್ ಆಗಿದ್ದು, ಬಿಜೆಪಿಗೆ ತನ್ನ ನೀತಿಗಳ ಬಗ್ಗೆ ಸ್ಪಷ್ಟತೆಯೇ ಇಲ್ಲ. ಬ್ಯಾನ್ ಮಾಡುವ ಉದ್ದೇಶ ಇದ್ದಿದ್ದೇ ಆಗಿದ್ದರೆ ಅವರು ಅದನ್ನು 2016 ರಲ್ಲಿ ಚಲಾವಣೆಗೆ ತಂದಿದ್ದಾದರೂ ಏಕೆ” ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಹಾಗೆಯೆ ಭಾರತೀಯ ಜನತಾ ಪಕ್ಷ ತನ್ನ ವೈಫಲ್ಯದಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಹತಾಶ ಪ್ರಯತ್ನವಾಗಿ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆದುಕೊಂಡಿದೆ ಎಂದು ನೂತನ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇನ್ನು ಸಾರ್ವಜನಿಕರು ನಿಮ್ಮ ಬಳಿ ಇರುವ 2000 ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕಾಗಿ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು. 2000 ರೂ.ನೋಟುಗಳ ವಿನಿಮಯ ಹಾಗೂ ಠೇವಣಿ ಸೌಲಭ್ಯವು ಸೆಪ್ಟೆಂಬರ್ 30 ,2023 ರ ತನಕ ಲಭ್ಯವಿರುತ್ತದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.