Siddu Moolimane And Priya Achar Love Story: ಸಿದ್ದು ಪ್ರಿಯಾ ಪ್ರೀತಿ ಮನೆಯಲ್ಲಿ ಗೊತ್ತಾಗಿದ್ದು ಹೇಗೆ, ಎರಡು ಗಂಟೆ ಮಾತುಕತೆ ಇಲ್ಲ.

Siddu Moolimane And Priya Achar Love Story: ಜೀ ಕನ್ನಡ (Zee Kannada)ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯ ಖ್ಯಾತ ನಟಿ ಪ್ರಿಯಾ ಜೆ ಆಚಾರ್ (Priya J Achar)ಮತ್ತು ಪಾರು ಸೀರಿಯಲ್ ನ ಖ್ಯಾತ ನಟಿ ಸಿದ್ದು ಮೂಲಿಮನಿ (Siddu Moolimane)ಸಾಕಷ್ಟು ವರ್ಷಗಳವರೆಗೂ ಪರಸ್ಪರ ಪ್ರೀತಿಸುತ್ತಿದ್ದು ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ಹಸೆಮಣೆ ಏರಿದ್ದಾರೆ.

Siddu Moolimane And Priya Achar Love Story
Image Source: India Today

ಸುವರ್ಣ ಪ್ರೇಮೋತ್ಸವ ಕಾರ್ಯಕ್ರಮದಲ್ಲಿ ಪ್ರೀತಿ ವಿಚಾರ ಹೇಳಿಕೊಂಡ ಸಿದ್ದು ಮತ್ತು ಪ್ರಿಯಾ
ಕನ್ನಡ ಕಿರುತೆರೆಯ ಜೋಡಿ ಸಿದ್ದು ಮತ್ತು ಪ್ರಿಯಾ ನಿನ್ನೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುವರ್ಣ ಪ್ರೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದಾರೆ.

Siddu Moolimane And Priya Achar Love Story
Image Source: India Today

ಪ್ರೀತಿಯ ವಿಚಾರವನ್ನು ಹಂಚಿಕೊಂಡ ಸಿದ್ದು ಮತ್ತು ಪ್ರಿಯಾ
ಮದುವೆ ಮಾತುಕತೆ ಬರುವ ತನಕ ನಾವು ಪ್ರೀತಿ ವಿಚಾರ ಮಾತನಾಡಲಿಲ್ಲ. ಅಟ್ರ್ಯಾಕ್ಷನ್ ಗು ಮೀರಿದ ಪ್ರೀತಿ ಇತ್ತು ಪದಗಳಲ್ಲಿ ಅದನ್ನು ವರ್ಣಿಸಲು ಆಗುತ್ತಿರಲಿಲ್ಲ. ಮನೆಯವರಿಗೆ ಗೊತ್ತಾಗಿ ಮುಂದ್ವರಿದಿದ್ದು ನನಗೆ ನಾಚಿಕೆ ಇತ್ತು ಹೇಳಿಕೊಳ್ಳಲು.

ತಂದೆ ತಾಯಿ ಬಳಿ ನಮಗೆ ನಾಚಿಕೆ ಇರಲಿಲ್ಲ, ನಮ್ಮಿಬ್ಬರ ನಡುವೆಯೇ ನಾಚಿಕೆ ಇತ್ತು. ಮೊದಲು ಸಿದ್ದು ಮನೆಯಲ್ಲಿ ವಿಚಾರ ತಿಳಿಸಿದ್ದು ಅನಂತರ ನಾನು ಮನೆಯಲ್ಲಿ ಮಾತನಾಡಿದೆ. ಆದರೆ ನಾವಿಬ್ಬರು ಮಾತನಾಡಿಕೊಂಡಿರಲಿಲ್ಲ ಎಂದು ಹೇಳುವ ಮೂಲಕ ತಮ್ಮ ಪ್ರೀತಿ ವಿಚಾರವನ್ನು ಸುವರ್ಣ ಪ್ರೇಮೋತ್ಸವ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

Siddu Moolimane And Priya Achar Love Story
Image Source: India Today

ಪ್ರೀತಿ ವಿಚಾರ ಪ್ರಿಯಾ ಮನೆಯವರಿಗೆ ಗೊತ್ತಾಗಿದ್ದು ಹೇಗೆ ಎಂದು ಹೇಳಿದ ಸಿದ್ದು
ನಾನು ಕವಿತೆ ಬರೆದು ಪ್ರಿಯಾಗೆ ಕಳುಹಿಸುತ್ತಿದ್ದೆ. ನಾನೇ ರೆಕಾರ್ಡ್ ಮಾಡಿ ಮ್ಯೂಸಿಕ್ ಹಾಕಿ ಕಳುಹಿಸುತ್ತಿದ್ದೆ. ತಂದೆ ತಾಯಿ ಮತ್ತು ತಂಗಿ ಜೊತೆ ಪ್ರಿಯಾ ಪ್ರಯಾಣ ಮಾಡುವಾಗ ಹಾಡು ಕೇಳಿಸಿಕೊಳ್ಳಬೇಕು ಎಂದು ಮೊಬೈಲ್ ನ ಕಾರಿಗೆ ಕನೆಕ್ಟ್ ಮಾಡಿದ್ದರು. ಆಗ ನಾನು ಕಳುಹಿಸಿದ ಕವಿತೆ ಬಂದಿದೆ. ನನ್ನ ಭಾವನೆಗಳನ್ನು ಅ ಕವಿತೆಯಲ್ಲಿ ಹೇಳಿದೆ. ಇದನ್ನು ಅವರ ತಂದೆ ಕೇಳಿಸಿಕೊಂಡಿದ್ದಾರೆ.

Join Nadunudi News WhatsApp Group

ಎರಡು ಗಂಟೆ ಪ್ರಯಾಣ ಮುಗಿದ ಮೇಲೆ ಈ ಘಟನೆ ಬಗ್ಗೆ ತಂದೆ ಚರ್ಚೆ ಮಾಡಿದ್ದು. ನಮ್ಮ ತಂದೆ ಅವರ ತಂದೆ ಭೇಟಿ ಮಾಡಿದ ಮೇಲೆ ಮದುವೆ ಚರ್ಚೆ ಶುರು ಮಾಡಿದ್ದು ಎಂದು ಸಿದ್ದು ಹೇಳಿದ್ದಾರೆ. ನಮ್ಮಿಬ್ಬರ ಪ್ರೀತಿ ಶುರುವಾಗಿದ್ದು ಧಮಾಕ ಸಿನಿಮಾ ಶೂಟಿಂಗ್ ಸಮಯದಲ್ಲಿ ಎನ್ನುವ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಸಿದ್ದು ಪ್ರಿಯಾ ಹೇಳಿಕೊಂಡಿದ್ದಾರೆ.

Siddu Moolimane And Priya Achar Love Story
Image Source: India Today

Join Nadunudi News WhatsApp Group