Siddu Moolimani And Priya J Achar Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಮಾಕ ಜೋಡಿ, ಫೋಟೋಗಳು ವೈರಲ್

Siddu Moolimani And Priya J Achar Marriage Photos: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯ ಖ್ಯಾತ ನಟ ಸಿದ್ದು ಮೂಲಿಮನಿ (Siddu Moolimani) ಮತ್ತು ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಪ್ರಿಯಾ ಜೆ ಆಚಾರ್ (Priya J Achar) ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಈಗ ಹಸೆಮಣೆ ಏರಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಸಿದ್ದು ಮತ್ತು ಪ್ರಿಯಾ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಸಿದ್ದು ಮತ್ತು ಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Paru serial actor Siddu Moolimani and Gattimela serial actress Priya J Achar got married.
Image Credit: instagram

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ದು ಮತ್ತು ಪ್ರಿಯಾ
ಡಾನ್ಸ್ ಕರ್ನಾಟಕ ಡಾನ್ಸ್ ಕಿರುತೆರೆ ಶೋ ನಲ್ಲಿ ಪರಸ್ಪರ ಸ್ನೇಹಿತರಾದ ಸಿದ್ದು ಮತ್ತು ಪ್ರಿಯಾ ಇಬ್ಬರು ಧಮಾಕ ಸಿನಿಮಾದ ಚಿತ್ರೀಕರಣದ ವೇಳೆ ಪ್ರೀತಿಸಲು ಶುರು ಮಾಡುತ್ತಾರೆ. ಹಲವು ವರ್ಷಗಳವರೆಗೂ ಪ್ರೀತಿಸಿ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ. ಕಿರುತೆರೆಯಲ್ಲೂ ಸಹ ಮದುವೆಯ ದಿಬ್ಬಣ್ಣ ಜೋರಾಗಿ ಕೇಳಿ ಬರುತ್ತದೆ. ಇದೀಗ ಈ ಜೋಡಿ ಹಸೆಮಣೆ ಏರುವುದರ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

Priya J achar got married with Siddu Moolimani
Image Credit: instagram

ಧಮಾಕ ಜೋಡಿಯ ಮದುವೆ ಸಂಭ್ರಮ
ಸಾಕಷ್ಟು ವರ್ಷಗಳ ಪ್ರೀತಿಗೆ ಸಿದ್ದು ಮತ್ತು ಪ್ರಿಯಾ ಇಬ್ಬರು ಮದುವೆ ಎಂಬ ಮುದ್ರೆ ಒತ್ತಿದ್ದು ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ನಿನ್ನೆ ಹಸೆಮಣೆ ಏರಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ, ಕುಟುಂಬದವರ ಆಶೀರ್ವಾದದ ಮೇರೆಗೆ ಈ ಜೋಡಿ ಮದುವೆಯಾಗಿದ್ದಾರೆ.

Join Nadunudi News WhatsApp Group

Priya J achar got married with Siddu Moolimani
Image Credit: instagram

ಈ ಮದುವೆ ಸಂಭ್ರಮಕ್ಕೆ ಗಟ್ಟಿಮೇಳ ಮತ್ತು ಪಾರು ಸೀರಿಯಲ್ ತಂಡ ಸಾಕ್ಷಿಯಾಗಿದೆ. ಈ ಜೋಡಿ ಕಿರುತೆರೆ ಮಾತ್ರವಲ್ಲದೆ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಧಮಾಕ ಸಿನಿಮಾದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

Join Nadunudi News WhatsApp Group