Priya Achar Haldi Ceremony: ಅರಿಶಿನ ಶಾಸ್ತ್ರ ನೆರವೇರಿಸಿಕೊಂಡ ಸಿದ್ದು-ಪ್ರಿಯಾ, ಫೋಟೋ ವೈರಲ್.

Siddu Moolimani And Priya Achar Marriage: ಇದೀಗ ಕಿರುತೆರೆಯಲ್ಲಿ ಗಟ್ಟಿಮೇಳದ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ. ಇನ್ನು ಪಾರು ಧಾರಾವಾಹಿ ಖ್ಯಾತಿಯ ನಟ ಸಿದ್ದು ಮೂಲಿಮನಿ (Siddu Moolimane) ಹಾಗೂ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಪ್ರಿಯ ಆಚಾರ್ (Priya j Achar) ಇನ್ನೇನು ಹಸೆಮಣೆ ಏರಲಿದ್ದಾರೆ.

Siddu Moolimani And Priya Achar Marriage Program
Image Credit: instagram

ಈ ಜೋಡಿ ಇದೆ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ. ಇನ್ನು ಇದೀಗ ಸಿದ್ದು ಹಾಗೂ ಪ್ರಿಯಾ ಅವರ ಅರಶಿನ ಶಾಸ್ತ್ರ ನೆರವೇರಿದೆ. ಇದೀಗ ಈ ಇಬ್ಬರ ಅರಿಶಿನ ಶಾಸ್ತ್ರದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Priya Achar and Siddu Moolimani at the wedding celebration
Image Credit: instagram

ಸಿದ್ದು – ಪ್ರಿಯಾ ಅರಿಶಿನ ಶಾಸ್ತ್ರ
ಗಟ್ಟಿಮೇಳ (Gattimela Serial) ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಿಯಾ ಹಾಗೂ ಪಾರು (Paru Serial) ಧಾರಾವಾಹಿಯಲ್ಲಿ ನಟಿಸುತ್ತಿರುವ ಸಿದ್ದು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಕಳೆದ ನವೆಂಬರ್ ನಲ್ಲಿ ಈ ಜೋಡಿ ನಿಷ್ಚಿತಾರ್ಥ ಮಾಡಿಕೊಂಡಿದ್ದಾರು.

ಇದೀಗ ಮದುವೆಗೂ ಮುನ್ನ ಈ ಇಬ್ಬರು ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Siddu Moolimani and Priya Achar Mehndi program photos have gone viral
Image Credit: instagram

ಧಾರಾವಾಹಿಯ ಜೊತೆಗೆ ಸಿದ್ದು ಹಾಗೂ ಪ್ರಿಯಾ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಸಿದ್ದು ಹಾಗೂ ಪ್ರಿಯಾ ಧಮಾಕ ಚಿತ್ರದಲ್ಲಿ ನಟಿಸಿದ್ದಾರೆ. ಈ ಇಬ್ಬರು ಧಮಾಕ ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಇನ್ನು ನಿಜ ಜೀವನದಲ್ಲೂ ಕೊಡ ಈ ಇಬ್ಬರು ಜೊತೆಯಾಗಲು ಸಜ್ಜಾಗಿದ್ದಾರೆ.

Join Nadunudi News WhatsApp Group

Priya Achar shared the yellow ceremony photo on Instagram
Image Credit: instagram

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಬೇರೆ ಬೇರೆ ಧಾರಾವಾಹಿಗಳಲ್ಲಿ ಸಿದ್ದು ಹಾಗೂ ಪ್ರಿಯಾ ನಟಿಸುತ್ತಿದ್ದಾರೆ. ಜಿ ವಾಹಿನಿಯಲ್ಲಿ ಒಂದು ಬಾರಿ ಸಿದ್ದು ಪ್ರಿಯಾ ಅವರಿಗೆ ಪ್ರಪೋಸ್ ಮಾಡಿ ತಮ್ಮ ಪ್ರೇಮವನ್ನು ಹೇಳಿಕೊಂಡಿದ್ದರು. ಈ ಜೋಡಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ.

Priya Achar shared a photo of the Mehndi event
Image Credit: instagram

ಇನ್ನು ಸಿದ್ದು ಹಾಗೂ ಪ್ರಿಯಾ ಅವರ ಮದುವೆ ಸಿದ್ದು ಅವರ ಊರು ಧಾರವಾಡದಲ್ಲಿ ನಡೆಯಲಿದೆ. ಸಿದ್ದು ಹಾಗೂ ಪ್ರಿಯಾ ಅವರ ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿಂದೆ ಕುಂದಾಪುರದಲ್ಲಿ ಈ ಜೋಡಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.

ಪ್ರಿ ವೆಡ್ಡಿಂಗ್ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದರು. ಇದೀಗ ಈ ಇಬ್ಬರ ಅರಿಶಿನ ಶಾಸ್ತ್ರ ನೆರವೇರಿದೆ. ಸಿದ್ದು ಹಾಗೂ ಪ್ರಿಯಾ ಅವರ ಅರಿಶಿನ ಶಾಸ್ತ್ರದ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.

Join Nadunudi News WhatsApp Group