Sim Deactive: ಮುಂದಿನ 90 ದಿನಗಳಲ್ಲಿ ಬಂದ್ ಆಗಲಿದೆ ಇಂತಹ ಜನರ ಸಿಮ್ ಕಾರ್ಡ್, ರಾತ್ರೋರಾತ್ರಿ ಕೇಂದ್ರದ ಹೊಸ ರೂಲ್ಸ್.
ಸಿಮ್ ಕಾರ್ಡ್ ಮೇಲೆ ಕೇಂದ್ರ ಸರ್ಕಾರದ ಹೊಸ ಆದೇಶದ.
Sim Card Deactivate Rules 2023: ದೇಶದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ. ಜಾಗತಿಕವಾಗಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು ಈ ಮೊಬೈಲ್ ಗಳು ಕಾರ್ಯನಿರ್ವಹಿಸಲು ಸಿಮ್ ಕಾರ್ಡ್(Sim Card) ಗಳು ಬೇಕಾಗುತ್ತದೆ. ಇವುಗಳ ಮೇಲು ಕೂಡ ಸರ್ಕಾರ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. ಇದೀಗ ಸಿಮ್ ಕಾರ್ಡ್ ಮೇಲೆ ಕೇಂದ್ರ ಸರ್ಕಾರದ ಹೊಸ ಆದೇಶದ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
ಮುಂದಿನ 90 ದಿನಗಳಲ್ಲಿ ಬಂದ್ ಆಗಲಿದೆ ಇಂತಹ ಜನರ ಸಿಮ್ ಕಾರ್ಡ್
ಮೊಬೈಲ್ ಸಂಖ್ಯೆಯನ್ನು ಬಳಸದೆ ಸಂಪರ್ಕ ಕಡಿತಗೊಂಡ ಕಾರಣ ಅಥವಾ ನಿಷ್ಕ್ರಿಯಗೊಳಿಸಿದ ನಂತರ ಆ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡುವಂತಿಲ್ಲ. ಮೊಬೈಲ್ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದ ನಂತರ ಅದನ್ನು 90 ದಿನಗಳ ವರೆಗೆ ಹೊಸ ಚಂದಾರರಿಗೆ ಹಂಚಿಕೆ ಮಾಡಲಾಗುದಿಲ್ಲ. ಒಮ್ಮೆ ನಿಷ್ಕ್ರಿಯಗೊಂಡ ಮೊಬೈಲ್ ಸಂಖ್ಯೆ ಡೇಟಾದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಅಪ್ ಇಂಡಿಯಾ ಸುಪ್ರೀಮ್ ಕೋರ್ಟ್ ಗೆ ತಿಳಿಸಿದೆ.
ನಿಷ್ಕ್ರಿಯಗೊಳಿಸಿದ ಮೊಬೈಲ್ ಸಂಖ್ಯೆಯ ಮೇಲೆ ಸುಪ್ರೀಮ್ ಕೋರ್ಟ್ ಮಹತ್ವದ ತೀರ್ಪ್
ನಿಷ್ಕ್ರಿಯಗೊಂಡ ಮೊಬೈಲ್ ಸಂಖ್ಯೆ ಡೇಟಾದ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅರ್ಜಿಯ ಕುರಿತು ಸುಪ್ರೀಮ್ ಕೋರ್ಟ್ ವಿಚಾರಣೆ ನೆಡೆಸಿದೆ. ಟ್ರಾಯ್ನ ಪ್ರತಿ ಅಫಿಡವಿಟ್ ಅನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರು ಚಂದಾದಾರರು ಹಿಂದಿನ ಮೊಬೈಲ್ ಸಂಖ್ಯೆಯೊಂದಿಗೆ ಲಗತ್ತಿಸಲಾದ ವಾಟ್ಸಾಪ್ ಖಾತೆಯನ್ನು ಅಳಿಸುವ ಮೂಲಕ ಮತ್ತು ಸ್ಥಳೀಯ ಸಾಧನ ಮೆಮೊರಿ ಕಾರ್ಡ್ ನಲ್ಲಿ ಸಂಗ್ರಹಿಸಿದ ಡೇಟಾವನ್ನು ಅಳಿಸುವ ಮೂಲಕ ವಾಟ್ಸಾಪ್ ಡೇಟಾದ ದುರುಪಯೋಗವನ್ನು ತಡೆಯಬಹುದು ಎಂದು ಹೇಳಿಕೆ ನೀಡಿದೆ.