Sim Card Update: ಸಿಮ್ ಕಾರ್ಡ್ ಖರೀದಿಗೆ ಕೇಂದ್ರದಿಂದ ಹೊಸ ನಿಯಮ, ಬದಲಾದ ನಿಯಮದ ಬಗ್ಗೆ ತಿಳಿದುಕೊಳ್ಳಿ.

ಹೊಸ ಸಿಮ್ ಖರೀದಿ ಮಾಡುವವರು ಕೇಂದ್ರ ಸರ್ಕಾರದ ಈ ನಿಯಮ ತಿಳಿದುಕೊಳ್ಳುದು ಉತ್ತಮ.

Sim Card KYC Update: ಇತ್ತೀಚಿನ ದಿನಗಳಲ್ಲಿ Mobile ಬಳಕೆದಾರರು ಹೆಚ್ಚಾಗುತ್ತಿದ್ದಾರೆ. ಮೊಬೈಲ್ ಗಳ ಮೇಲಿನ ಬೇಡಿಕೆ ಕೂಡ ಹೆಚ್ಚುತ್ತಿದೆ. ಈ ಕಾರಣಕ್ಕೆ ವಿವಿಧ ಕಂಪನಿಗಳು ವಿಭಿನ್ನ ವಿನ್ಯಾಸದ ಹೊಸ ಹೊಸ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇನ್ನು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳು ಡ್ಯುಯಲ್ ಸಿಮ್ ಆಯ್ಕೆಯನ್ನು ಹೊಂದಿರುತ್ತದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಎರಡು ಸಿಮ್ ಗಳನ್ನೂ ಬಳಸುತ್ತಾರೆ.

ಇನ್ನು ಸಿಮ್ (Sim Card) ಗಳನ್ನೂ ಬಳಸಲು ಯಾವುದೇ ಮಿತಿ ಇರುವುದಿಲ್ಲ. ಹಿಂದೆ ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಗಳನ್ನೂ ಬೇಕಾದರೂ ಬಳಸಬಹುದು. ಈಗಂತೂ ಕೇವಲ ಆಧಾರ್ ಕಾರ್ಡ್ ನ ಮಾಹಿತಿಯನ್ನು ನೀಡಿ ಯಾರು ಬೇಕಾದರೂ ಸಿಮ್ ಕಾರ್ಡ್ ಅನ್ನು ಖರೀದಿಸಬವುದಾಗಿದೆ. ಇದೀಗ Central Government ಹೊಸ ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ಹೊಸ ಸಿಮ್ ಖರೀದಿಸುವ ಮುನ್ನ ಕೇಂದ್ರದ ನಿಯಮ ತಿಳಿದುಕೊಳ್ಳುವುದು ಉತ್ತಮ.

New rules for purchasing SIM cards
Image Credit: Hindustantimes

ಸಿಮ್ ಕಾರ್ಡ್ ಖರೀದಿಗೆ ಹೊಸ ನಿಯಮ
ಇತ್ತೀಚಿಗೆ ಜನರು ಸುಳ್ಳು ಮಾಹಿತಿಯನ್ನ ನೀಡಿ ಹೆಚ್ಚು ಹೆಚ್ಚು ಸಿಮ್ ಗಳನ್ನೂ ಖರೀದಿಸುತ್ತಿದ್ದಾರೆ. ದೂರ ಸಂಪರ್ಕ ಇಲಾಖೆ ಬಲ್ಕ್ ಸಿಮ್ ಖರೀದಿಯನ್ನು ನಿಷೇದಿಸುದ್ದು ಇದರ ಬದಲಾಗಿ ವ್ಯಾಪಾರ ಸಂಪರ್ಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತದೆ. ಬಿಸಿನೆಸ್ KYC ಮಾತ್ರವಲ್ಲದೆ, ಆ ಸಿಮ್ ಪಡೆದುಕೊಂಡ ವ್ಯಕ್ತಿಯ KYC ಕೂಡ ಮಾಡಲಾಗುತ್ತದೆ.

ಇನ್ನುಮುಂದೆ ಹೊಸ ಫೋನ್ ಸಿಮ್ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಎಲ್ಲಾ ಸೇಲ್ ಡೀಲರ್ ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 10 ಲಕ್ಷ ದಂಡ ವನ್ನು ವಿಧಿಸಲಾಗುತ್ತದೆ ಎಂದು ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಅಂಗಡಿಗಳು ಸಹ ಸೆಪ್ಟೆಂಬರ್ 30 2024 ರೊಳಗೆ ಹೊಸ ನಿಯಮದ ಪ್ರಕಾರ ತಮ್ಮ KYC ಅನ್ನು ಮಾಡಬೇಕಾಗಿದೆ.

Change in purchase of SIM card
Image Credit: The420

ಸಿಮ್ ಕಾರ್ಡ್ ಖರೀದಿಯಲ್ಲಿ ಬದಲಾವಣೆ
ಈ ಹಿಂದೆ ಒಬ್ಬ ವ್ಯಕ್ತಿಯು ಒಂದು ಐಡಿಯಲ್ಲಿ ಗರಿಷ್ಟ 9 ಸಿಮ್ ಕಾರ್ಡ್ ಗಳನ್ನೂ ಖರೀದಿಸುವ ಅವಕಾಶ ನೀಡಿತ್ತು. ಆದರೆ ದೂರಸಂಪರ್ಕ ಇಲಾಖೆ ಹೊಸ ನಿಯಮದ ಅಡಿಯಲ್ಲಿ ಸಿಮ್ ಕಾರ್ಡ್ ಖರೀದಿಯ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ.

Join Nadunudi News WhatsApp Group

ಈ ಹೊಸ ನಿಯಮಗಳನ್ನು ಮುಂದಿನ 6 ತಿಂಗಳುಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಇಂದು ಒಂದು ಐಡಿಯಲ್ಲಿ ಸಿಮ್ ಕಾರ್ಡ್ ಮಿತಿಯನ್ನು ಕಡಿಮೆ ಮಾಡುವ ಬಗ್ಗೆ ಘೋಷಿಸಿದ್ದಾರೆ. ಇನ್ನುಮುಂದೆ ಒಂದು ಐಡಿಯಲ್ಲಿ ಕೇವಲ 4 ಸಿಮ್ ಕಾರ್ಡ್ ಗಳನ್ನೂ ಮಾತ್ರ ಖರೀದಿಸಲು ದೂರಸಂಪರ್ಕ ಇಲಾಖೆ ಸೂಚನೆಯನ್ನು ನೀಡಿದೆ.

Join Nadunudi News WhatsApp Group