Sim Card: ದೇಶದಲ್ಲಿ ಬದಲಾಯಿತು ಸಿಮ್ ಕಾರ್ಡ್ ನಿಯಮ, ಇದಕ್ಕಿಂತ ಹೆಚ್ಚು ಸಿಮ್ ಬಳಸುವಂತಿಲ್ಲ.
ಸಿಮ್ ಕಾರ್ಡ್ ಖರೀದಿಸುವವರಿಗೆ ಮಹತ್ವದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ.
Sim Card Limits: ಇತ್ತೀಚಿಗೆ ಆನ್ ಲೈನ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರಲ್ಲಿ ಸಿಮ್ ಕಾರ್ಡ್ ಅನ್ನು ಬಳಸಲಾಗುತ್ತಿದೆ. ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು ಮಿತಿಗೊಳಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ.
ಸಿಮ್ ಕಾರ್ಡ್ ಖರೀದಿಸುವವರಿಗೆ ಹೊಸ ಮಾಹಿತಿ
ಇಲ್ಲಿಯವರೆಗೆ ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್ ಗಳನ್ನೂ ಖರೀದಿ ಮಾಡಬಹುದಿತ್ತು. ಆದರೆ ಈಗ ಒಂದು ಐಡಿಯಲ್ಲಿ ಕಂಡುಬರುವ ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು 9 ರಿಂದ 4 ಕ್ಕೆ ಇಳಿಸಲು ಸರ್ಕಾರ ಯೋಚಿಸುತ್ತಿದೆ. ಕೇಂದ್ರ ಸರ್ಕಾರವು ಆನ್ ಲೈನ್ ವಂಚನೆಯನ್ನು ತಡೆಯಲು ಮಹತ್ವದ ಕ್ರಮ ಕೈಗೊಂಡಿದೆ.
ಇನ್ನುಮುಂದೆ ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು 9 ರ ಬದಲು 4 ಕ್ಕೆ ಇಳಿಸಲು ಸರ್ಕಾರ ಯೋಚಿಸುತ್ತಿದೆ. ಸರ್ಕಾರ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣ ವಂಚಕರಿಗೆ ಒಂದೇ ಐಡಿಯಲ್ಲಿ ಅನೇಕ ಸಿಮ್ ಕಾರ್ಡ್ ಗಳನ್ನೂ ಪಡೆಯಲು ಮತ್ತು ಅವುಗಳನ್ನು ಆನ್ ಲೈನ್ ವಂಚನೆಗೆ ಬಳಸಲು ಕಷ್ಟವಾಗುತ್ತದೆ.
ಸಂಪರ್ಕ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಂದ ಹೊಸ ಆದೇಶ
ದೂರ ಸಂಪರ್ಕ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಸಿಮ್ ಕಾರ್ಡ್ ಗಳ ಸಂಖ್ಯೆಯನ್ನು ಒಂದೇ ಐಡಿಗೆ ಸೀಮಿತಗೊಳಿಸುವ ಮಾರ್ಗಸೂಚಿಗಳನ್ನು ಅನುಮೋದಿಸಿದ್ದಾರೆ ಎಂದು ವರದಿಯಾಗಿದೆ. ಈ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದು. ಇದಲ್ಲದೆ, ಗ್ರಾಹಕರ ಪರಿಶೀಲನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಸರ್ಕಾರ ಯೋಜಿಸುತ್ತಿದೆ. ಇದು ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ರಾಜ್ಯ ಸರ್ಕಾರವು ಜನರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಇದರಿಂದ ನಿಮ್ಮ ಐಡಿಯಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನೂ ನೀಡಬಹುದು ಎನ್ನುವುದನ್ನು ನೀವು ಕಂಡುಹಿಡಿಯಬಹುದು. ಸಂಚಾರ್ ಸಾಥಿ ಪೋರ್ಟಲ್ ನಲ್ಲಿ ಈ ಸೌಲಭ್ಯ ನೀಡಲಾಗಿದೆ. ನಿಮ್ಮ ಸಂಖ್ಯೆಗೆ ಮೋಸದ ಸಿಮ್ ನೀಡಲಾಗಿದೆ ಎಂದು ತಿಳಿದರೆ ನೀವು ಸಂಚಾರ್ ಸಾಥಿ ಪೋರ್ಟಲ್ಗೆ ಹೋಗಿ ಅದನ್ನು ಹುಡುಕಬಹುದು ಮತ್ತು ಅದನ್ನು ನಿರ್ಬಂಧಿಸಬಹುದು.
ಆನ್ ಲೈನ್ ವಂಚನೆಯಿಂದ ಜನರನ್ನು ರಕ್ಷಿಸಲು ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದು ಜನರಿಗೆ ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳನ್ನು ನೀಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಮೋಸದ ಸಿಮ್ ನೀಡಿದ್ದರೆ ಅವರು ಅದನ್ನು ನಿರ್ಬಂಧಿಸಬಹುದು.