Sim Card: ಸಿಮ್ ಬಳಸುವವರಿಗೆ ಹೊಸ ಇನ್ನೊಂದು ಮಾರ್ಗಸೂಚಿ ಪ್ರಕಟ, ನಿಯಮ ಬದಲಿಸಿದ TRAI.

ಸಿಮ್ ಪೋರ್ಟ್ ಮಾಡುವವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ, ಸಿಮ್ ಪೋರ್ಟ್ ಮಾಡುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ

Sim Card Port Update: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಾಗುತ್ತಿದ್ದಾರೆ. ಮೊಬೈಲ್ ಗಳ ಮೇಲಿನ ಬೇಡಿಕೆ ಕೂಡ ಹೆಚ್ಚುತ್ತಿದೆ. ಈ ಕಾರಣಕ್ಕೆ ವಿವಿಧ ಕಂಪನಿಗಳು ವಿಭಿನ್ನ ವಿನ್ಯಾಸದ ಹೊಸ ಹೊಸ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇನ್ನು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳು ಡ್ಯುಯಲ್ ಸಿಮ್ ಆಯ್ಕೆಯನ್ನು ಹೊಂದಿರುತ್ತದೆ. ಈ ಕಾರಣಕ್ಕೆ ಜನರು ಹೆಚ್ಚಾಗಿ ಎರಡು ಸಿಮ್ ಗಳನ್ನೂ ಬಳಸುತ್ತಾರೆ.

ಇನ್ನು ಸಿಮ್ (Sim Card) ಗಳನ್ನೂ ಬಳಸಲು ಯಾವುದೇ ಮಿತಿ ಇರುವುದಿಲ್ಲ. ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಗಳನ್ನೂ ಬೇಕಾದರೂ ಬಳಸಬಹುದು. ಈಗಂತೂ ಕೇವಲ ಆಧಾರ್ ಕಾರ್ಡ್ ನ ಮಾಹಿತಿಯನ್ನು ನೀಡಿ ಯಾರು ಬೇಕಾದರೂ ಸಿಮ್ ಕಾರ್ಡ್ ಅನ್ನು ಖರೀದಿಸಬವುದಾಗಿದೆ. ಇನ್ನು ಎರಡು ಸಿಮ್ ಕಾರ್ಡ್ ಗಳ್ನ್ನು ಬಳಸುವವರು ಒಂದೇ ಕಂಪನಿಯ ಸಿಮ್ ಅನ್ನು ಬಳಸುವುದಿಲ್ಲ. ಬೇರೆ ಬೇರೆ ಟೆಲಿಕಾಂ ಕಂಪನಿಗಳ ಆಯ್ಕೆ ಅವರ ಬಳಿ ಇರುತ್ತದೆ.

Important information for sim porters
Image Credit: Navbharattimes

ಸಿಮ್ ಪೋರ್ಟ್ ಮಾಡುವವರಿಗೆ ಮಹತ್ವದ ಮಾಹಿತಿ
ಸಾಮಾನ್ಯವಾಗಿ ಎರಡು ಸಿಮ್ ಕಾರ್ಡ್ ಅನ್ನು ಬಳಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಎರಡು ಸಿಮ್ ಕಾರ್ಡ್ ಬಳಕೆ ಹೆಚ್ಚಿನ ಖರ್ಚು ಮಾಡುಸುತ್ತದೆ. ಏಕೆಂದರೆ ನಿಮ್ಮ ಬಳಿ ಎಷ್ಟೇ ಸಿಮ್ ಕಾರ್ಡ್ ಇದ್ದರು ಕೂಡ ಅದನ್ನು ಸಕ್ರಿಯವಾಗಿರಿಸಿಕೊಳ್ಳಲು ಮಾಸಿಕ ರಿಚಾರ್ಜ್ ಮಾಡುತ್ತಲೇ ಇರಬೇಕಾಗುತ್ತದೆ. ಇನ್ನು ಇತ್ತೀಚಿಗೆ ಸಿಮ್ ಪೋರ್ಟ್ ಪ್ರಕ್ರಿಯೆ ಹೆಚ್ಚು ನಡೆಯುತ್ತಿದೆ. ಬಳಕೆದಾರರು ತಾವು ಬಳಸುತ್ತಿರುವ ಸಿಮ್ ಅನ್ನು ಬೇರೆ ಟೆಲಿಕಾಂ ಕಂಪನಿಗೆ ಬದಲಿಸಿಕೊಳ್ಳುತ್ತಿದ್ದಾರೆ.

ಎಷ್ಟು ಬಾರಿ ಸಿಮ್ ಪೋರ್ಟ್ ಮಾಡಿಕೊಳ್ಳಬಹುದು
ಯಾವುದೇ ಕಂಪನಿಯ ನೆಟ್ವರ್ಕ್ ಉತ್ತಮವಾಗಿಲ್ಲ ಎಂದು ತಿಳಿದ ತಕ್ಷಣ ಅಥವಾ ಬೇರೆ ಟೆಲಿಕಾಂ ಕಂಪೆನಿಗಳಲ್ಲಿ ಅಗ್ಗದ ರಿಚಾರ್ಜ್ ಪ್ಲಾನ್ ಬಿಡುಗಡೆಯಾದರೆ ಬಳಕೆದಾರರು ತಮ್ಮ ನೆಟ್ವರ್ಕ್ ಅನ್ನು ಬದಲಿಸಲು ಇಷ್ಟಪಡುತ್ತಾರೆ. ನೀವು ಸಿಮ್ ಪೋರ್ಟ್ ಮಾಡಲು ಸರ್ಕಾರ ಮಿತಿಯನ್ನು ಅಳವಡಿಸಿಲ್ಲ.

Sim Card Port Update
Image Credit: Groovypost

ಹೊಸ ಎಂಎನ್ಪಿ ಅಥವಾ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ನಿಯಮಗಳು ಗ್ರಾಹಕರಿಗೆ ಯಾವುದೇ ಸಮಸ್ಯೆಗಳಿಲ್ಲದೆ ತಮ್ಮ ಸಂಖ್ಯೆಯನ್ನು ಒಂದು ನೆಟ್ವರ್ಕ್ನಿಂದ ಇನ್ನೊಂದಕ್ಕೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.

Join Nadunudi News WhatsApp Group

ಸಿಮ್ ಪೋರ್ಟ್ ಮಾಡುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ
ನೀವು ಮೊಬೈಲ್ ಸಂಖ್ಯೆಯನ್ನು ಬೇರೆ ನೆಟ್ವರ್ಕ್ ಗೆ ವರ್ಗಾಯಿಸಲು ಬಯಸಿದರೆ ನಿಮ್ಮ ಹಳೆಯ ನೆಟ್ವರ್ಕ್ ನಲ್ಲಿನ ಸಿಮ್ ಕಾರ್ಡ್ ಬಾಕಿಯನ್ನು ಪಾವತಿಸಬೇಕಾಗುತ್ತದೆ. ಪೋಸ್ಟ್ ಫೈಡ್ ಗ್ರಾಹಕರು ತಮ್ಮ ಸಿಮ್ ಮೇಲಿನ ಮಾಸಿಕ ಬಿಲ್ ಮೊತ್ತವನ್ನು ಅಸ್ತಿತ್ವದಲ್ಲಿರುವ ಟೆಲಿಕಾಂ ಸೇವಾ ಕಂಪನಿಗಳಿಗೆ ಪಾವತಿಸುವುದು ಕಡ್ಡಾಯವಾಗಿದೆ. ಹಳೆಯ ಸಿಮ್ ಕಾರ್ಡಿನ ಮಾಸಿಕ ಬಿಲ್ ಬಾಕಿ ಇದ್ದರೆ ಸಿಮ್ ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group