Sim Card Rules: ಹೊಸ ಸಿಮ್ ಖರೀದಿಸುವವರಿಗೆ ಇಂದಿನಿಂದ ಹೊಸ ನಿಯಮ, ಕೇಂದ್ರದ ಮಹತ್ವದ ಘೋಷಣೆ.
ಸಿಮ್ ಕಾರ್ಡುಗಳ ಮೇಲೆ ಕೇಂದ್ರ ಸರ್ಕಾರ ಹೊಸ ನಿಯಮವನ್ನ ಜಾರಿಗೆ ತಂದಿದೆ.
Sim Card Purchase Limit: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ಒಂದ್ಕಕಿಂತ ಹೆಚ್ಚಿನ ಸಿಮ್ (Sim Card) ಗಳನ್ನೂ ಬಳಸುತ್ತಾರೆ. ಸಾಮಾನ್ಯವಾಗಿ ಮೊಬೈಲ್ ಫೋನ್ ಗಳಲ್ಲಿ ಡ್ಯುಯೆಲ್ ಸಿಮ್ ಆಯ್ಕೆ ಇರುದರಿಂದ ಹೆಚ್ಚಿನ ಜನರು ಎರಡೆರಡು ಸಿಮ್ ಗಳನ್ನೂ ಬಳಸುತ್ತಾರೆ. ಇನ್ನು ಕೆಲವರು ಒಂದು ಐಡಿ ಬಳಸಿ ಅನೇಕ ಸಿಮ್ ಗಳನ್ನೂ ಖರೀದಿಸುತ್ತಾರೆ.
ಈ ಬಗ್ಗೆ ದೂರಸಂಪರ್ಕ ಇಲಾಖೆ (Telecommunication Department) ಹೊಸ ಕಾನೂನನ್ನು ಜಾರಿಗೆ ತಂದಿದೆ. ಒಂದು ಐಡಿಯಲ್ಲಿ ಎಷ್ಟು ಸಿಮ್ ಗಳನ್ನೂ ಖರೀದಿಸಬಹುದು ಎನ್ನುವ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹಿಂದೆ ನಿಗದಿಪಡಿಸಿದ್ದ ಸಿಮ್ ಕಾರ್ಡ್ ಖರೀದಿಯ ಮಿತಿಯನ್ನು ಕಡಿಮೆ ಮಾಡಲು ಇಲಾಖೆ ನಿರ್ಧರಿಸಿದೆ.
ಸಿಮ್ ಕಾರ್ಡ್ ಖರೀದಿಯಲ್ಲಿ ಬದಲಾವಣೆ
ಈ ಹಿಂದೆ ಒಬ್ಬ ವ್ಯಕ್ತಿಯು ಒಂದು ಐಡಿಯಲ್ಲಿ ಗರಿಷ್ಟ 9 ಸಿಮ್ ಕಾರ್ಡ್ ಗಳನ್ನೂ ಖರೀದಿಸುವ ಅವಕಾಶ ನೀಡಿತ್ತು. ಆದರೆ ದೂರಸಂಪರ್ಕ ಇಲಾಖೆ ಹೊಸ ನಿಯಮದ ಅಡಿಯಲ್ಲಿ ಸಿಮ್ ಕಾರ್ಡ್ ಖರೀದಿಯ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಈ ಹೊಸ ನಿಯಮಗಳನ್ನು ಮುಂದಿನ 6 ತಿಂಗಳುಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಇಂದು ಒಂದು ಐಡಿಯಲ್ಲಿ ಸಿಮ್ ಕಾರ್ಡ್ ಮಿತಿಯನ್ನು ಕಡಿಮೆ ಮಾಡುವ ಬಗ್ಗೆ ಘೋಷಿಸಲಿದ್ದಾರೆ.
ಸಿಮ್ ಕಾರ್ಡ್ ಖರೀದಿಯ ಮಿತಿಯಲ್ಲಿ ಮಹತ್ವದ ಬದಲಾವಣೆ
ಇನ್ನುಮುಂದೆ ಒಂದು ಐಡಿಯಲ್ಲಿ ಕೇವಲ 4 ಸಿಮ್ ಕಾರ್ಡ್ ಗಳನ್ನೂ ಮಾತ್ರ ಖರೀದಿಸಲು ದೂರಸಂಪರ್ಕ ಇಲಾಖೆ ಸೂಚನೆಯನ್ನು ನೀಡಿದೆ. ಈ ಹಿಂದೆ 9 ಸಿಮ್ ಗಳನ್ನೂ ಖರೀದಿಸುವ ಅವಕಾಶ ನೀಡಿತ್ತು. ಹೊಸ ಸಿಮ್ ಕಾರ್ಡ್ ಅನ್ನು ಪಡೆಯಲು ಯಾವುದೇ ದಾಖಲೆಯ ಅಗತ್ಯವಿರುವುದಿಲ್ಲ.
ಡಿಜಿಟಲ್ ಸಿಮ್ ಕಾರ್ಡ್ ಗಳನ್ನೂ ಬಳಕೆದಾರರಿಗೆ ನೀಡಲಾಗುತ್ತದೆ. ಡಿಜಿಟಲ್ ಸಿಮ್ ಕಾರ್ಡ್ ಗಳನ್ನೂ ನೀಡುವುದರಿಂದ ನಕಲಿ ಸಿಮ್ ಕಾರ್ಡ್ ಗಳನ್ನೂ ಗುರುತಿಸಲು ಅನುಕೂಲವಾಗುತ್ತದೆ. ಹಾಗೆಯೆ ಹೊಸ ಸಿಮ್ ಕಾರ್ಡ್ ಪಡೆಯುವಲ್ಲಿ ಬಳಕೆದಾರರ ಫೇಸ್ ಐಡಿ ಬಳಸಲಾಗುತ್ತದೆ. ನಕಲಿ ಸಿಮ್ ಕಾರ್ಡ್ ಗಳ ಸಮಸ್ಯೆಯನ್ನು ಪರಿಹರಿಸಲು ಈ ನಿರ್ಧಾರವನ್ನು ಮಾಡಲಾಗಿದೆ.
ಇತರರ ಐಡಿ ಬಳಸಿ ಸಿಮ್ ಖರೀದಿಸಿ ವಂಚನೆ ಮಾಡುವ ಪ್ರಕ್ರಿಯೆ ಹೆಚ್ಚುತ್ತಿದೆ. ಈಗಾಗಲೇ ಭಾರತ ಸರ್ಕಾರವು ಸಂಚಾರ ಸಾಥಿ ಪೋರ್ಟಲ್ ಅನ್ನು ಜನಸಾಮಾನ್ಯರ ಸಹಾಯಕ್ಕಾಗಿ ಬಿಡುಗಡೆ ಮಾಡಿದೆ. ಈ ಪೋರ್ಟಲ್ ನ ಮೂಲಕ ನಿಮ್ಮ ಕಳೆದುಹೋದ ಫೋನ್ ಗಳ ಬಗ್ಗೆ ದೂರನ್ನು ನೀಡಬಹದು ಹಾಗೆಯೆ ಈ ವೆಬ್ ಸೈಟ್ ನಲ್ಲಿ ನಿಮ್ಮ ಐಡಿಯಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಸಕ್ರಿಯವಾಗಲಿದೆ ಎನ್ನುವ ಬಗ್ಗೆ ತಿಳಿದುಕೊಳ್ಳಬಹುದು.