Sim Verify: ಸಿಮ್ ಖರೀದಿಸುವಾಗ ಈ ತಪ್ಪು ಮಾಡಿದರೆ 10 ಲಕ್ಷ ದಂಡ, ಕೇಂದ್ರದಿಂದ ಹೊಸ ಪೊಲೀಸ್ ರೂಲ್ಸ್.

ಸಿಮ್ ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ನಿಯಮ ಮೀರಿದರೆ 10 ಲಕ್ಷ ದಂಡವನ್ನು ವಿಧಿಸಲಾಗುದು.

Bulk Sim Card Ban: ದೇಶದಲ್ಲಿ ಮೊಬೈಲ್ ಬಳಕೆದಾರರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಈಗ ಸ್ಮಾರ್ಟ್ ಫೋನ್ ಗಳಲ್ಲಿ ಎರಡು ಸಿಮ್ ಆಯ್ಕೆ ಇರುದರಿಂದ ಜನರು ಹೆಚ್ಚು ಸಿಮ್ ಗಳನ್ನೂ ಖರೀದಿಸಲು ಬಯಸುತ್ತಾರೆ. ದೇಶದಲ್ಲಿ ಸಿಮ್ ಕಾರ್ಡ್ (Sim Card) ಖರೀದಿಗೆ ಮಿತಿಯನ್ನ ಇರಿಸಲಾಗಿದೆ. ಒಬ್ಬ ವ್ಯಕ್ತಿ ಆತನ ಅಧಾರ್ ಕಾರ್ಡ್ (Aadhar Card)ಮೂಲಕ ಕೇವಲ 6 ಸಿಮ್ ಕಾರ್ಡ್ ಗಳನ್ನೂ ಖರೀದಿಸಲು ಮಾತ್ರ ಸಾಧ್ಯ.

ಇತ್ತೀಚಿನ ದಿನಗಳಲ್ಲಿ ಸಿಮ್ ಗಳನ್ನೂ ಜನರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಹಾಗಾಗಿ ಕೇಂದ್ರ ಸರ್ಕಾರ (Central Government) ಸಿಮ್ ಮಾರಾಟಗಾರರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Bulk Sim Card Ban
Image Credit: Zeebiz

 

ಸಿಮ್ ಕಾರ್ಡ್ ನಿಷ್ಕ್ರಿಯ
ಇತ್ತೀಚಿಗೆ ವಂಚನೆಯ ಮೂಲಕ ಪಡೆದ 52 ಲಕ್ಷ ಸಿಮ್ ಕಾರ್ಡ್ ಗಳನ್ನೂ ಸಂಚಾರ ಸಾಥಿ ಪೋರ್ಟಲ್ ಮೂಲಕ ಪತ್ತೆ ಮಾಡಿ ನಿಷ್ಕ್ರಿಯ ಗೊಳಿಸಿದ್ದಾರೆ. ಈ ಕಾರಣದಿಂದಾಗಿ 67 ಸಾವಿರ ಸಿಮ್ ಡೀಲರ್ ಗಳನ್ನ ಕಪ್ಪು ಪಟ್ಟಿಗೆ ಸೇರಿಸಿದ್ದಾರೆ.

2023 ರ ಮೇ ತಿಂಗಳಿನಿಂದ ಇಲ್ಲಿ ತನಕ ಸುಮಾರು 300 ಸಿಮ್ ಕಾರ್ಡ್ ವಿತರಕರ ವಿರುದ್ಧ FIR ಅನ್ನು ದಾಖಲಿಸಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw ) ತಿಳಿಸಿದ್ದಾರೆ. ಈ ಮೊದಲು ಸಿಮ್ ಕಾರ್ಡ್ ಗಳನ್ನ ಬಲ್ಕ್ ಆಗಿ ಖರೀದಿಸಲು ಅವಕಾಶ ಇತ್ತು. ಇದನ್ನು ಜರನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಅವಕಾಶವನ್ನು ಇನ್ನುಮುಂದೆ ನಿಲ್ಲಿಸಲು ತೀರ್ಮಾನಿಸಲಾಗಿದೆ.

Join Nadunudi News WhatsApp Group

10 lakh fine for violating the ban on bulk SIM sale.
Image Credit: Livemint

ಬಲ್ಕ್ ಸಿಮ್ ಮಾರಾಟಕ್ಕೆ ತಡೆ, ನಿಯಮ ಉಲ್ಲಂಘಿಸಿದರೆ 10 ಲಕ್ಷ ದಂಡ
ಜನರು ಮೊದಲು ಸಿಮ್ ಕಾರ್ಡ್ ಅನ್ನು ಬಲ್ಕ್ ಆಗಿ ಖರೀದಿಸುತ್ತಿದ್ದರು. ಅಂದರೆ ಸುಳ್ಳು ಮಾಹಿತಿಯನ್ನ ನೀಡಿ ಹೆಚ್ಚು ಹೆಚ್ಚು ಸಿಮ್ ಗಳನ್ನೂ ಖರೀದಿಸುತ್ತಿದ್ದರು. ಈಗ ಬಲ್ಕ್ ಸಿಮ್ ಮಾರಾಟವನ್ನು ನಿಷೇದಿಸಲಾಗಿದೆ. ಬದಲಿಗೆ ಸರಿಯಾದ ನಿಬಂಧನೆ ಗಳ ಮೂಲಕ ಸಿಮ್ ಖರೀದಿಗೆ ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಮೋಸದ ಕರೆಗಳನ್ನು ತಪ್ಪಿಸಬಹುದು.

ದೂರ ಸಂಪರ್ಕ ಇಲಾಖೆ ಬಲ್ಕ್ ಸಿಮ್ ಖರೀದಿಯನ್ನು ನಿಷೇದಿಸುದ್ದು ಇದರ ಬದಲಾಗಿ ವ್ಯಾಪಾರ ಸಂಪರ್ಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತದೆ. ಬಿಸಿನೆಸ್ KYC ಮಾತ್ರವಲ್ಲದೆ, ಆ ಸಿಮ್ ಪಡೆದುಕೊಂಡ ವ್ಯಕ್ತಿಯ KYC ಕೂಡ ಮಾಡಲಾಗುತ್ತದೆ.

10 lakh fine for violating the ban on bulk SIM sale.
Image Credit: Businesstoday

ಇನ್ನುಮುಂದೆ ಹೊಸ ಫೋನ್ ಸಿಮ್ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಎಲ್ಲಾ ಸೇಲ್ ಡೀಲರ್ ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 10 ಲಕ್ಷ ದಂಡ ವನ್ನು ವಿಧಿಸಲಾಗುತ್ತದೆ ಎಂದು ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group