Sim Portability: ಸಿಮ್ ಮತ್ತು ಮೊಬೈಲ್ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್, ಇದು ಕೇಂದ್ರದ ಆದೇಶ

ನಾಳೆಯಿಂದ ಹೊಸ ಸಿಮ್ ಕಾರ್ಡ್ ಖರೀದಿಗೆ ಕಟ್ಟು ನಿಟ್ಟಿನ ಕ್ರಮ

Sim Portability Rule Change: ಸದ್ಯ ಪ್ರತಿ ತಿಂಗಳ ಆರಂಭದಲ್ಲಿ ಹೊಸ ನಿಯಮಗಳು ಪರಿಚಯವಾಗುತ್ತಿರುತ್ತದೆ. ಇತ್ತೀಚಿಗೆ ದೇಶದಲ್ಲಿ ವಂಚನೆ ಹೆಚ್ಚುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ವಂಚನೆಯನ್ನು ತಡೆಯಲು  ವಿವಿದ ಕ್ರಮ ಕೈಗೊಳ್ಳುತ್ತಿದೆ.

ಇನ್ನು ಫೋನ್ ಕರೆಯ ಮೂಲಕ ವಂಚನೆ ಹೆಚ್ಚುತ್ತಿರುವ ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಹಿನ್ನಲೆ, ಸರ್ಕಾರ ದೇಶದಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಈ ನಿಯಮಗಳು ನಾಳೆಯಿಂದ (ಜುಲೈ 1) ಜಾರಿಗೆ ಬರಲಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Sim Portability Rule Change
Image Credit: TV9hindi

ನಾಳೆಯಿಂದ ಹೊಸ ಸಿಮ್ ಕಾರ್ಡ್ ಖರೀದಿಗೆ ಕಟ್ಟು ನಿಟ್ಟಿನ ಕ್ರಮ
ಆನ್‌ ಲೈನ್ ವಂಚನೆ ತಡೆಯಲು TRAI ಮಹತ್ವದ ಹೆಜ್ಜೆ ಇಟ್ಟಿದ್ದು ನಾಳೆಯಿಂದ ಸಿಮ್ ಕಾರ್ಡ್‌ ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಹೊಸ ನಿಯಮದಿಂದಾಗಿ ಸಾಮಾನ್ಯ ಮೊಬೈಲ್ ಬಳಕೆದಾರರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಟ್ರಾಯ್ ಪ್ರಕಾರ, ತಮ್ಮ ಸಿಮ್ ಕಾರ್ಡ್‌ ಗಳನ್ನು ಬದಲಾಯಿಸಿದ ಮೊಬೈಲ್ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ.

ಹೌದು ಕಳ್ಳತನ ಅಥವಾ ಹಾನಿಯಿಂದಾಗಿ ತಮ್ಮ ಸಿಮ್ ಕಾರ್ಡ್ ಅನ್ನು ಬದಲಾಯಿಸಬೇಕಾದ ಮತ್ತು ಹೊಸ ಸಿಮ್ ಕಾರ್ಡ್ ಖರೀದಿಸಿದ ಬಳಕೆದಾರರು ಮುಂದಿನ 7 ದಿನಗಳಲ್ಲಿ ತಮ್ಮ ಸಂಖ್ಯೆಯನ್ನು ಮತ್ತೊಂದು ಸಿಮ್ ಕಾರ್ಡ್‌ ಗೆ ಪೋರ್ಟ್ ಮಾಡಲು ಅನುಮತಿಸುವುದಿಲ್ಲ. ದೂರಸಂಪರ್ಕ ಇಲಾಖೆಯ (DoT) ಸಲಹೆಗಳನ್ನು ಪರಿಗಣಿಸಿ ಮತ್ತು ವಿವಿಧ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಹೊಸ ನಿಯಮಗಳನ್ನು ಮಾಡಲಾಗಿದೆ ಎಂದು TRAI ಹೇಳಿದೆ.

Sim Card New Rules
Image Credit: Informalnewz

Join Nadunudi News WhatsApp Group

Join Nadunudi News WhatsApp Group