Simple One: ಬಡವರಿಗಾಗಿ ಇನ್ನೊಂದು EV ಲಾಂಚ್ ಮಾಡಿದ ಸಿಂಪಲ್ ಒನ್, ಭರ್ಜರಿ 212 Km ಮೈಲೇಜ್.

ಮಾರುಕಟ್ಟೆಯಲ್ಲಿ 212 Km ಮೈಲೇಜ್ ನೀಡುವ EV ಲಾಂಚ್ ಮಾಡಿದ ಸಿಂಪಲ್ ಒನ್

Simple One Electric Scooter: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಚಾಲಿತ ವಾಹನಗಳಿಗಿಂತ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಭವಿಷ್ಯದಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುವ ಸಾಧ್ಯತೆ ಕೂಡ ಇದೆ. 

ಇನ್ನು ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತಿಷ್ಠಿತ ಕಂಪನಿಗಳು ಹಾಗು ಕೆಲವು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸುತ್ತಿದೆ. ಇನ್ನು ಸಿಂಪಲ್ ಎನರ್ಜಿ (Simple Energy) ಕಂಪನಿ ಇತ್ತೀಚಿಗೆ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಸಿಂಪಲ್ ಎನರ್ಜಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ಸಿಂಪಲ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಸಂಚಲನ ಮೂಡಿಸಿತ್ತು.

Simple One launched an EV offering a mileage of 212 Km.
Image Credit: Bikewale

ಈ ಸ್ಕೂಟರ್ ಉತ್ತಮ ನೋಟ ಮತ್ತು ವಿಶೇಷ ಫೀಚರ್ ನ ಮೂಲಕ ಗ್ರಾಹಕರನ್ನು ಸೆಳೆದಿತ್ತು. ಇದೀಗ ಸಿಂಪಲ್ ಎನರ್ಜಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಈ ಸ್ಕೂಟರ್ ನ ಬಗ್ಗೆ ವಿವರವನ್ನು ತಿಳಿಯೋಣ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ (Simple One Electric Scooter) 
ವೇಗದ ತಂತ್ರಜ್ಞಾನ ಮತ್ತು ಡ್ಯುಯಲ್ ಬ್ಯಾಟರಿಯಂತಹ ವಿಶೇಷ ವೈಶಿಷ್ಟ್ಯಗಳನ್ನು ಈ ಸ್ಕೂಟರ್ ನಲ್ಲಿ ನೀಡಲಾಗಿದೆ. ಸ್ಕೂಟರ್ 1p67 ರೇಟಿಂಗ್ ನೊಂದಿಗೆ 5 K wh ಲೀಥಿಯಂ ಐಯಾನ್ ಡ್ಯುಯಲ್ ಬ್ಯಾಟರಿಯನ್ನು ಹೊಂದಿದ್ದು, 7 ಇಂಚಿನ ಡಿಜಿಟಲ್ ಡಿಸ್ ಪ್ಲೆ ನೀಡಲಾಗಿದೆ. ಈ ಸ್ಕೂಟರ್ ನ ಮತ್ತೊಂದು ವಿಶೇಷತೆ ಏನೆಂದರೆ 0 ರಿಂದ 80 ಪ್ರತಿಶತದಷ್ಟು ಚಾರ್ಜಿಂಗ್ 5.54 ಘಂಟೆಯಲ್ಲಿ ಪೂರ್ಣಗೊಳ್ಳುತ್ತದೆ. ಈ ಸ್ಕೂಟರ್ ನ ಬೆಲೆ 1.45 ಲಕ್ಷ ರೂ. ಆಗಿದೆ.

Simple One Electric Scooter price
Image Credit: Bikedekho

 

Join Nadunudi News WhatsApp Group

ಮಾರುಕಟ್ಟೆಯಲ್ಲಿ 212 Km ಮೈಲೇಜ್ ನೀಡುವ EV ಲಾಂಚ್ ಮಾಡಿದ ಸಿಂಪಲ್ ಒನ್
ಬ್ಯಾಟರಿಯ ಒಂದು ಪೂರ್ಣ ಚಾರ್ಜ್ ನಲ್ಲಿ 212 ಕಿ ಮೀ ವರೆಗೆ ಚಲಿಸಬಹುದು. 2.77 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಮೋಟಾರ್ 8.5 kW ಪವರ್ ಮತ್ತು 72 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಿಂಪಲ್ ಎನರ್ಜಿ ತನ್ನ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕೆಲವು ಹೊಸ ಆವಿಷ್ಕಾರಗಳನ್ನು ಮಾಡುತ್ತದೆ ಎಂದು ವರದಿಯಾಗಿದೆ.

Join Nadunudi News WhatsApp Group