Childrens SIP: ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 50 ಲಕ್ಷ ರೂ. ಮಕ್ಕಳಿಗಾಗಿ ಈ ಯೋಜನೆ.

ಈ ಯೋಜನೆಯಲ್ಲಿ ಕೇವಲ 5 ಸಾವಿರ ಹೂಡಿಕೆ ಮಾಡಿ 50 ಲಕ್ಷ ಗಳಿಸಬಹುದಾಗಿದೆ.

SIP Investment Profit Calculation: ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ SIP ನಲ್ಲಿ ಹೂಡಿಕೆ ಒಂದು ರೀತಿಯಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. SIP ನಲ್ಲಿನ ಹೂಡಿಕೆಯು ಅಪಾಯ ಮುಕ್ತವಾಗಿರುತ್ತದೆ ಎನ್ನಬಹದು. ಸಾಮಾನ್ಯವಾಗಿ ಎಲ್ಲರಿಗು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಇದ್ದೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸವಾಗಲಿ, ಮದುವೆಯಾಗಲಿ ಪೋಷಕರ ಜವಾಬ್ದಾರಿ ಆಗಿರುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಯೋಜನೆಗಳ ಹೂಡಿಕೆ ಹೆಚ್ಚಿನ ಲಾಭವನ್ನು ನೀಡುತ್ತದೆ.

SIP Investment Profit Calculation
Image Credit: Zoomnews

ಮಕ್ಕಳ ಭವಿಷ್ಯಕ್ಕಾಗಿ SIP Investment ಉತ್ತಮ
ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಮಕ್ಕಳ ಮದುವೆಗೆ ನೀವು ಉಳಿತಾಯ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಅನೇಕ ಉಳಿತಾಯ ಯೋಜನೆಗಳಲ್ಲಿ SIP ನಲ್ಲಿನ ಹೂಡಿಕೆಯು ಒಂದು ರೀತಿಯಲ್ಲಿ ಲಾಭವನ್ನು ನೀಡುತ್ತದೆ. ನಿಮ್ಮ ಮನೆಯ ಮಗುವಿನ ಹೆಸರಿನಲ್ಲಿ ಹೂಡಿಕೆಯನ್ನು ಆರಂಭಿಸಿದರೆ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ದೊಡ್ಡ ಲಾಭವನ್ನು ಪಡೆಯಬಹುದು.ಕಡಿಮೆ ಹೂಡಿಕೆಯೊಂದಿದೆ ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಹೂಡಿಕೆಯನ್ನು ಮಾಡಬಹುದು.

ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 5000 ರೂ. ಹೂಡಿಕೆ ಮಾಡಿದರೆ ಸಿಗಲಿದೆ 50 ಲಕ್ಷ ರೂ.
ನಿಮ್ಮ ನಿಮ್ಮ ಮಗುವಿನ ಹೆಸರಿನಲ್ಲಿ 5,000 ಮಾಸಿಕ SIP ಅನ್ನು ಪ್ರಾರಂಭಿಸಿ ಮತ್ತು 20 ವರ್ಷಗಳವರೆಗೆ ನಿರಂತರವಾಗಿ ಹೂಡಿಕೆ ಮಾಡುತಿದ್ದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು 20 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆಯು ರೂ 12,00,000 ಆಗುತ್ತದೆ. ಇನ್ನು 12 ಪ್ರತಿಶತದ ಬಡ್ಡಿದರದ ಪ್ರಕಾರ, ಈ ಹೂಡಿಕೆ ಮೊತ್ತದ ಮೇಲೆ ನೀವು ರೂ 37,95,740 ಬಡ್ಡಿಯನ್ನು ಪಡೆಯುತ್ತೀರಿ.

SIP Investment Profit
Image Credit: Abplive

ಹೀಗೆ 20 ವರ್ಷಗಳಲ್ಲಿ ಹೂಡಿಕೆ ಮಾಡಿದ ಮೊತ್ತ ಮತ್ತು ಬಡ್ಡಿ ಸೇರಿ ಒಟ್ಟು 49,95,740 ಅಂದರೆ ಸುಮಾರು 50 ಲಕ್ಷ ರೂ. ಗಳ ಲಾಭವನ್ನು ಪಡೆಯಬಹುದು. ನೀವು ಈ ಹೂಡಿಕೆಯನ್ನು ಇನ್ನೂ 5 ವರ್ಷಗಳವರೆಗೆ ಅಂದರೆ 25 ವರ್ಷಗಳವರೆಗೆ ಮುಂದುವರಿಸಿದರೆ, ನಿಮಗೆ 94,88,175 ರೂ. ಪಡೆಯುವ ಅವಕಾಶವಿದೆ. ಈ ಯೋಜನೆಯಲ್ಲಿ ನೀವು ಸುಮಾರು 15 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು. ಈ ಹೂಡಿಕೆಯಲ್ಲಿ ಅಪಾಯ ಕೂಡ ಇದ್ದು ಹೂಡಿಕೆ ಮಾಡುವ ಮುನ್ನ ಎಚ್ಚರ ವಹಿಸುವುದು ಕೂಡ ಅಗತ್ಯ.

Join Nadunudi News WhatsApp Group

Join Nadunudi News WhatsApp Group