Ads By Google

Site Loan: ಸೈಟ್ ಖರೀದಿಗೆ ಸಾಲ ಸಿಗುತ್ತಾ…? ಸಿಕ್ಕಿದರೆ ಬಡ್ಡಿ ಎಷ್ಟಿರುತ್ತದೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

loan for site purchase

Image Credit: Original Source

Ads By Google

Site Loan APPLICATION: ದುಬಾರಿಯಾಗುತ್ತಿರುವ ದೈನಂದಿನ ಬದುಕಿನಲ್ಲಿ ಯಾವುದೇ ನಾಗರಿಕನಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಏಕೈಕ ಆಸ್ತಿ ಎಂದರೆ ಅದು ಮನೆ ಮಾತ್ರ. ಪ್ರತಿಯೊಬ್ಬರಿಗೂ ಸ್ವಂತ ಸೂರು ಕಟ್ಟಬೇಕು ಎಂಬ ಕನಸು ಮನದ ಮೂಲೆಯಲ್ಲಿ ಇದ್ದೆ ಇರುತ್ತದೆ. ಅನೇಕ ಮಂದಿ ಉದ್ಯೋಗಕ್ಕೆ ಸೇರಿ ಒಂದೆರಡು ವರ್ಷಗಳಾದ ಬಳಿಕ ವೇತನ ಏರಿಕೆ ಆಗುತ್ತದೆ. ಆಗ ಅವರಲ್ಲಿ ಸೈಟ್ ಖರೀದಿಸಬೇಕು ಸೂರು ಕಟ್ಟಬೇಕು ಎಂಬ ಆಸೆ ಮೂಡುವುದು ಸಹಜ.

ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ಸಾಲ ಪಡೆಯದೆ ಕನಸಿನ ಗೂಡು ಕಟ್ಟಿಕೊಳ್ಳುವುದು ಅಸಾಧ್ಯ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಸೈಟ್ ಖರೀದಿಸುದು ಅಗ್ಗವಲ್ಲ, ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಬ್ಯಾಂಕ್ ನಲ್ಲಿ ಗೃಹ ಸಾಲ, ವಾಹನ ಸಾಲ ಸಿಗುತ್ತದೆ ಆದರೆ ಸೈಟ್ ಖರೀದಿಗೆ ಸಾಲ ಸಿಗುತ್ತಾ…? ಸಿಕ್ಕಿದರೆ ಬಡ್ಡಿ ಎಷ್ಟಿರುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ 

Image Credit: Housing

HDFC ಸೈಟ್ ಲೋನ್
ಇದೀಗ ನಿಮ್ಮ ಮಾಸಿಕ ಆದಾಯ 25000 ಎಂದು ಭಾವಿಸೋಣ. ನಿಮಗೆ 15 ವರ್ಷಗಳ ಮರು ಪಾವತಿ ಅವಧಿಗೆ ಎಷ್ಟು ಸಾಲ ಸಿಗಬಹುದು…? HDFC ವೆಬ್ ಸೈಟ್ ಪ್ರಕಾರ ನಿಮಗೆ 1015497 ರೂ. ಸಾಲ ಸಿಗಬಹುದು. ಮಾಸಿಕ EMI 10000 ರೂ. ಇರುತ್ತದೆ. ಬಡ್ಡಿ ದರ 8.50% ರಿಂದ 9.15% ತನಕ ಇರುತ್ತದೆ.

ಸೈಟ್‌ ಲೋನ್‌ ಪಡೆಯಲು ಯಾವೆಲ್ಲ ದಾಖಲೆಗಳು ಬೇಕು…?
*ಆದಾಯ ದಾಖಲಾತಿಗಳು
*ಪ್ರಾಪರ್ಟಿ ಸಂಬಂಧಿತ ದಾಖಲೆಗಳು
*ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ, ಕಳೆದ ಮೂರು ತಿಂಗಳಿನ ಸ್ಯಾಲರಿ ಸ್ಲಿಪ್‌, ಕಳೆದ 6 ತಿಂಗಳಿನ ಬ್ಯಾಂಕ್‌ ಸ್ಟೇಟ್‌ ಮೆಂಟ್‌, ಇತ್ತೀಚಿನ ಫಾರ್ಮ್-‌16 ಮುಖ್ಯವಾಗಿರುತ್ತದೆ.
*ಸ್ವಂತ ಉದ್ಯೋಗಿಯಾಗಿದ್ದರೆ, ಕಳೆದ ಎರಡು ವರ್ಷಗಳ ಆದಾಯದ ರಿಟರ್ನ್‌, ಎರಡು ವರ್ಷಗಳ ಬ್ಯಾಲೆನ್ಸ್ ಸೀಟ್, 12 ತಿಂಗಳಿನ ಕರೆಂಟ್‌ ಅಕೌಂಟ್‌ ಸ್ಟೇಟ್‌ ಮೆಂಟ್‌ ಮುಖ್ಯವಾಗಿರುತ್ತದೆ.

Image Credit: Propertygeek

ಸೈಟ್ ಲೋನ್ ಬಗ್ಗೆ ಸಂಪೂರ್ಣ ವಿವರ
ಇದೀಗ HDFC ಬ್ಯಾಂಕ್ ಮಾತ್ರವಲ್ಲದೆ, ಅನೇಕ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್ ಗಳು ಹೋಂ ಲೋನ್ ಮಾತ್ರವಲ್ಲದೆ ಪ್ಲಾಟ್ ಲೋನ್ ನೀಡುತ್ತವೆ. ಪ್ಲಾಟ್‌ ಲೋನ್‌ ಅನ್ನು ಆಕರ್ಷಕ ಬಡ್ಡಿ ದರದಲ್ಲಿ ಪಡೆಯಬಹುದು. ಆಫ್ಫೊರ್ಡಬಲ್ ರಿಪೇಮೆಂಟ್‌ ಅವಧಿ ಇರುತ್ತದೆ. ಪ್ರಿ-ಪೇಮೆಂಟ್ ಪೆನಾಲ್ಟಿ ಇರಲ್ಲ. ಪ್ರೊಸೆಸಿಂಗ್‌ ಫೀ ಕಡಿಮೆ ಇರುತ್ತದೆ. 18 ರಿಂದ 65 ವರ್ಷದವರು ಮಾತ್ರ ಈ ಲೋನ್ ಪಡೆಯಲು ಅರ್ಹರಾಗಿರುತ್ತಾರೆ. ಸೈಟ್‌ ನ ಕುರಿತ ಮೂಲ ದಾಖಲಾತಿಗಳನ್ನು ಬ್ಯಾಂಕ್‌ ಗೆ ನೀಡಬೇಕಾಗುತ್ತದೆ. ಸಾಲ ಮರುಪಾವತಿಯ ಬಳಿಕ ಬ್ಯಾಂಕ್‌ ಅವುಗಳನ್ನು ನಿಮಗೆ ಮರಳಿಸುತ್ತದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field