Slavia: 20 Km ಮೈಲೇಜ್ ಕೊಡುವ ದೇಶದ ಇನ್ನೊಂದು 5 ಸ್ಟಾರ್ ಕಾರ್ ಲಾಂಚ್, ಸಂಕಷ್ಟದಲ್ಲಿ ಮಾರುತಿ ಸ್ವಿಫ್ಟ್.
ಬೆಲೆ ಕೊಂಚ ಅಧಿಕವಾದರೂ 20 KM ಮೈಲೇಜ್ ಮತ್ತು ಶಕ್ತಿಶಾಲಿ ಎಂಜಿನ್, 6 ತಿಂಗಳ ಬುಕಿಂಗ್ ಅಂತ್ಯ.
Skoda Slavia New Model: ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ಇರುವ ಕಾರ್ ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ವಿವಿಧ ಕಂಪನಿಗಳು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ನೂತನ ಸೆಡಾನ್ ಕಾರ್ ಬಿಡುಗಡೆಗೊಂಡಿದೆ. ಹೆಚ್ಚಿನ ಮೈಲೇಜ್ ಮತ್ತು ಕಾರ್ಯಕ್ಷಮತೆ ನೀಡುವ ಕಾರ್ ಇದಾಗಿದ್ದು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ. ಈ ಕಾರ್ ನ ಸಂಪೂರ್ಣ ವಿವರದ ಬಗ್ಗೆ ತಿಳಿಯೋಣ.
ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಸ್ಕೊಡಾ ಸ್ಲಾವಿಯ (Skoda Slavia) ಕಾರ್
ಸ್ಕೊಡಾ ಸ್ಲಾವಿಯ (Skoda) ಕಾರ್ ನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್ ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸಿಂಗಲ್ ಪೇನ್ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಹೊಂದಿದೆ.
5 ಸ್ಟಾರ್ ರೇಟಿಂಗ್ ಸುರಕ್ಷತೆ ಹೊಂದಿರುವ ಸ್ಕೊಡಾ ಸ್ಲಾವಿಯ
ವಾಹನ ಸವಾರರ ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, EBD ಜೊತೆಗೆ ABS, ISOFIX ಚೈಲ್ಡ್ ಸೀಟ್ ಆಂಕಾರೇಜ್ ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಸ್ಕೊಡಾ ಸ್ಲಾವಿಯ ಬೆಲೆ ಮತ್ತು ಮೈಲೇಜ್
ಸ್ಕೊಡಾ ಸ್ಲಾವಿಯ ಎರಡು ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ 1-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಎಂಜಿನ್ ಅನ್ನು ನೀಡಲಾಗಿದೆ. ಈ ಎರಡೂ ಎಂಜಿನ್‌ಗಳು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಸ್ಲಾವಿಯಾದ 1-ಲೀಟರ್ ಮ್ಯಾನುವಲ್ (MT) ಮಾದರಿಯು ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಸ್ಕೊಡಾ ಸ್ಲಾವಿಯ ಕಾರ್ ನ ಬೆಲೆ ಕೊಂಚ ಅಧಿಕವಾಗಿದೆ. ಮಾರುಕಟ್ಟೆಯಲ್ಲಿ ಈ ಸ್ಕೊಡಾ ಸ್ಲಾವಿಯ 11.39 ಲಕ್ಷದಿಂದ 18.68 ಲಕ್ಷದಲ್ಲಿ ಲಭ್ಯವಾಗಲಿದೆ.