Ads By Google

Slash Bicycle: ಒಮ್ಮೆ ಚಾರ್ಜ್ ಮಾಡಿದರೆ 350 KM ಚಲಿಸುವ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ, ಬೆಲೆ ಕೊಂಚ ಅಧಿಕ.

Slash Electric Bicycle Review

Image Source: HT Auto

Ads By Google

Slash Electric Bicycle Review: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ಹೆಚ್ಚಾಗುತ್ತಿದೆ. ಕಚ್ಚಾ ತೈಲಗಳ ಬೆಲೆಗಳ ಏರಿಕೆಯ ಕಾರಣದಿಂದ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ವಾಲುತ್ತಿದ್ದಾರೆ.

ಜನರ ಬೇಡಿಕೆಗೆ ಅನುಗುಣವಾಗಿ ಕಂಪನಿಗಳು ಕೂಡ ಹೊಸ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಲೇ ಇದ್ದಾರೆ. ಎಲೆಕ್ಟ್ರಿಕ್ ಕಾರುಗಳು, ಎಲೆಕ್ಟ್ರಿಕ್ ಬೈಕ್ ಗಳು ಸೇರಿದಂತೆ ಎಲೆಕ್ಟ್ರಿಕ್ ಬೈಸಿಕಲ್ (Electric Bicycle) ಗಳ ಬೇಡಿಕೆ ಕೂಡ ಹೆಚ್ಚಾಗಿದೆ.

Image Courtesy: TrekBike

ಮಾರುಕಟ್ಟೆಗೆ ಬಂತು ಹೊಸ ಎಲೆಕ್ಟ್ರಿಕ್ ಬೈಸಿಕಲ್
ಕೆಲವು ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ವಿಭಿನ್ನ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಲೇ ಇರುತ್ತವೆ. ಇದೀಗ ಅಮೇರಿಕನ್ ಕಂಪನಿ ಹೊಸ ಎಲೆಕ್ಟ್ರಿಕ್ ಇಬೈಕ್ ಅನ್ನು ಬಿಡುಗಡೆ ಮಾಡಿದೆ. ಯುನೊರಾಟಾಜಾ ಇಬೈಕ್ ಅನ್ನು ಅಮೆರಿಕ್ ಕಂಪನಿ ಶ್ಲಾಶ್ ಎಂಬ ಹೆಸರಿನ ಮೂಲಕ ಪರಿಚಯಿಸಿದೆ.

Image Source: HT Auto

ಎಲೆಕ್ಟ್ರಿಕ್ ಬೈಸಿಕಲ್ ನ ವಿಶೇಷತೆ
ಅಮೇರಿಕನ್ ಕಂಪನಿಯು (American Company) ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಮೂರು ರೂಪಾಂತರಗಳಲ್ಲಿ ಬಿಡಿಗಡೆ ಮಾಡಿದೆ. ಫ್ಲ್ಯಾಶ್ ಲೈಟ್ ರೂಪಾಂತರ 750 ವ್ಯಾಟ್ ಡ್ಯುಯೆಲ್ ಮೋಟಾರ್ ಅನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಬೈಸಿಕಲ್ ನಲ್ಲಿ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಮೊದಲನೆಯ ಆಯ್ಕೆ ಬೈಸಿಕಲ್ ನಲ್ಲಿ ಮೋಟಾರ್ ಇರುವ ಕಾರಣ ಮೋಟಾರ್ ನ ಮೂಲಕ ಕೂಡ ಚಲಿಸಬಹುದು ಅಥವಾ ಎರಡನೆಯ ಆಯ್ಕೆಯಾಗಿ ಪೆಡಲ್ ಮೂಲಕ ಕೂಡ ಚಲಿಸಬಹುದು.

Image Source: BuyCycle

ಎಲೆಕ್ಟ್ರಿಕ್ ಬೈಸಿಕಲ್ ನ ಬ್ಯಾಟರಿ ಸಾಮರ್ಥ್ಯ
ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಒಮ್ಮೆ ಚಾರ್ಜ್ ಮಾಡುವುದರಿಂದ 350 ಕಿಲೋಮೀಟರ್ ಚಲಿಸಬಹುದು. ಎಲ್ ಜಿ ಬ್ಯಾಟರಿ ಅನ್ನು ಹೊಂದಿದ್ದು, 2808WH ಬ್ಯಾಟರಿಯನ್ನು ಹೊಂದಿದೆ. ಈ ಬೈಸಿಕಲ್ ನಲ್ಲಿ ಮೂರು ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 3 ರಿಂದ 4 ಗಂಟೆಗಳು ಬೇಕಾಗುತ್ತದೆ. ಇನ್ನು ಇದರ ಬೆಲೆಯ ಬಗ್ಗೆ ಹೇಳುದಾದರೆ, ಅಮೇರಿಕಾದಲ್ಲಿ 1,499 ಡಾಲರ್ ನಿಂದ ಪ್ರಾರಂಭವಾಗುತ್ತದೆ ಮತ್ತು ಭಾರತದಲ್ಲಿ ಈ ಎಲೆಕ್ಟ್ರಿಕ್ ಬೈಸಿಕಲ್ ಬೆಲೆ 1 .2 ಲಕ್ಷ ಆಗಿದೆ.

Image Source: Ht Auto
Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field