Phone Alert: ಮೊಬೈಲ್ ಕವರ್ ಹಿಂದೆ ಹಣ ಇಟ್ಟುಕೊಳ್ಳುವವರಿಗೆ ಎಚ್ಚರಿಕೆ, ಹಣ ಇಟ್ಟರೆ ಬ್ಲಾಸ್ಟ್ ಆಗಲಿದೆ ನಿಮ್ಮ ಮೊಬೈಲ್.
ಮೊಬೈಲ್ ಕವರ್ ನಲ್ಲಿ ನೋಟು ಇರಿಸುದು ಸ್ಪೋಟಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ತಿಳಿಯಿರಿ.
Smart Phone Blast: ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಹೆಚ್ಚಾಗಿ ಮೊಬೈಲ್ ಗಳನ್ನ ಬಳಸುತ್ತಾರೆ. ದಿನದ ಹೆಚ್ಚಿನ ಸಮಯಗಳನ್ನು ಸ್ಮಾರ್ಟ್ ಫೋನ್ ನಲ್ಲಿಯೇ ಕಳೆಯುತ್ತಿರುತ್ತಾರೆ. ಮೊಬೈಲ್ ಫೋನ್ ಗಳು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಕೂಡ. ಸ್ಮಾರ್ಟ್ ಫೋನ್ (Smart Phone) ಗಳ್ಳನ್ನು ಮಿತಿಯಲ್ಲಿ ಬಳಸುದು ಉತ್ತಮ.
ಹಾಗೆ ಚಾರ್ಜ್ ಹಾಕಿಕೊಂಡು ಮೊಬೈಲ್ ಬಳಕೆ, ಮೊಬೈಲ್ ಕವರ್ ನಲ್ಲಿ ನೋಟು ಇಡುವುದು ಸ್ಮಾರ್ಟ್ ಫೋನ್ ಸ್ಪೋಟ (Smart Phone Blast)ಗೊಳ್ಳಲು ಕಾರಣವಾಗುತ್ತದೆ. ನಿಮ್ಮ ಫೋನ್ ಸ್ಪೋಟಗೊಳ್ಳುದರಿಂದ ಮಾರಣಾಂತಿಕ ಅಪಾಯ ಸಂಭವಿಸಬಹುದು.
ಸಣ್ಣ ತಪ್ಪುಗಳು ಸಹ ಸ್ಮಾರ್ಟ್ ಫೋನ್ ಸ್ಪೋಟಕ್ಕೆ ಕಾರಣ
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಕವರ್ (Smart Phone Cover)ನಲ್ಲಿ ಕಾಗದ ಅಥವಾ ನೋಟುಗಳನ್ನು ಇಟ್ಟುಕೊಳ್ಳುತ್ತಾರೆ. ಇದು ನಿಮಗೆ ದೊಡ್ಡ ಅಪಾಯವನ್ನು ತಂದೊಡ್ಡಬಹುದು. ಹಾಗೆ ಚಾರ್ಜ್ ಹಾಕಿಕೊಂಡು ಮೊಬೈಲ್ ಬಳಕೆ ಮಾಡುದು ಕೂಡ ಅಪಾಯಕಾರಿ.
ಈ ಹಿಂದೆ ಬಂದಿರುವ ವರದಿಗಳ ಪ್ರಕಾರ ಮೊಬೈಲ್ ಕವರ್ ನಲ್ಲಿ ಹಣ ಅಥವಾ ಇನ್ನಿತರ ಕಾಗದವನ್ನು ಇರಿಸಿದರೆ ಸ್ಮಾರ್ಟ್ ಫೋನ್ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ನೀವು ಮಾಡುವ ಸಣ್ಣ ಸಣ್ಣ ತಪ್ಪುಗಳು ನಿಮ್ಮ ಸ್ಮಾರ್ಟ್ ಫೋನ್ ಸ್ಪೋಟಗೊಳ್ಳಲು ಕಾರಣವಾಗುತ್ತದೆ. ಇದೀಗ ನೀವು ಮೊಬೈಲ್ ಕವರ್ ನಲ್ಲಿ ಹಣ ಇಟ್ಟುಕೊಳ್ಳುದರಿಂದ ಬರುವ ಸಮಸ್ಯೆಗಳು ಹಾಗೂ ಅದರಿಂದಾಗುವ ನಷ್ಟದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಮೊಬೈಲ್ ಕವರ್ ನಲ್ಲಿ ನೋಟು ಇರಿಸುದು ಸ್ಪೋಟಕ್ಕೆ ಹೇಗೆ ಕಾರಣವಾಗುತ್ತದೆ
ಸ್ಮಾರ್ಟ್ ಫೋನ್ ಸ್ಪೋಟಗೊಳ್ಳಲು ಹಲವಾರು ಕಾರಣಗಳಿರುತ್ತವೆ. ನೀವು ನಿಮ್ಮ ಸ್ಮಾರ್ಟ್ ಫೋನ್ ಗಳು ಆಗಾಗ ಬಿಸಿಯಾಗುದನ್ನು ನೋಡಿರಬಹುದು, ಇದರ ಹಿಂದಿನ ಕಾರಣವೆಂದರೆ ಮೊಬೈಲ್ ಕವರ್ ನಲ್ಲಿ ಹಣ ಇಡುವುದು ಅಥವಾ ದಪ್ಪವಾದ ಕವರ್ ಅನ್ನು ಬಳಕೆ ಮಾಡುವುದು.
ನೀವು ನಿಮ್ಮ ಸ್ಮಾರ್ಟ್ ಫೋನ್ ಗಳನ್ನೂ ನಿರಂತರವಾಗಿ ಬಳಕೆ ಮಾಡಿದಾಗ ನಿಮ್ಮ ಫೋನ್ ಬಿಸಿಯಾಗಲು ಪ್ರಾರಂಭಿಸುತ್ತದೆ, ಫೋನ್ ಕವರ್ ನಲ್ಲಿ ಇಟ್ಟಿದ್ದ ಹಣ ಅಥವಾ ದಪ್ಪವಾದ ಕವರ್ ಅದು ತಣ್ಣಗಾಗಲು ಬಿಡುವುದಿಲ್ಲ, ಇದರಿಂದ ನಿಮ್ಮ ಫೋನ್ ಹೆಚ್ಚು ಬಿಸಿಯಾಗಿ ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ. ಮೊಬೈಲ್ ಕವರ್ ದಪ್ಪವಾಗಿರುದರಿಂದ ವೈಯರ್ ಲೆಸ್ ಚಾರ್ಗಿಂಗ್ ಸಮಸ್ಯೆ ಕೂಡ ಆಗಬಹುದು.
ಹಾಗೆ ಫೋನ್ ಕವರ್ ನಲ್ಲಿ ನೋಟು ಇಡುವುದು ನೆಟ್ವರ್ಕ್ ಸಮಸ್ಯೆಗಳಿಗೂ ಕಾರಣವಾಗಬಹುದು ಮತ್ತು ಚಾರ್ಜ್ ಮಾಡುವಾಗ ಸ್ಮಾರ್ಟ್ ಫೋನ್ ಬಳಸುದರಿಂದ ಅದು ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಸ್ಮಾರ್ಟ್ ಫೋನ್ ಹೆಚ್ಚು ಕಾಲ ಉಳಿಯಲು ಹಾಗೂ ಸ್ಪೋಟಗೊಳ್ಳದಂತೆ ತಡೆಯಲು ಈ ಮೇಲಿನ ಸಲಹೆಗಳನ್ನು ಅನುಸರಿಸುದು ಉತ್ತಮ.