Mobile Affects: ಮೊಬೈಲ್ ಬಳಸುವ ಜನರಲ್ಲಿ ಕಾಡುತ್ತಿದೆ ಈ ಸಮಸ್ಯೆ, ಅಧ್ಯಯನದಿಂದ ತಿಳಿದುಬಂತು ಶಾಕಿಂಗ್ ಸಂಗತಿ.
ಮೊಬೈಲ್ ಹೆಚ್ಚು ಬಳಸುವ ಜನರು ಹೆಚ್ಚಾಗುತ್ತಿದೆ ಇಂತಹ ಸಮಸ್ಯೆ, ಅಧ್ಯಯನದಿಂದ ಬಹಿರಂಗ.
Smartphone Affect: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (Smart Phone) ಗಳ ಬಳಕೆ ಹೆಚ್ಚಾಗಿದೆ. ಪ್ರತಿಯೊಬ್ಬರ ಕೈಯಲ್ಲೂ ಕೂಡ ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ. ಈ ಹಿಂದೆ ಕರೋನ ಬಂದಿದ್ದ ಕಾರಣ ಶಾಲಾ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಆನ್ಲೈನ್ ಕ್ಲಾಸ್ ಗಳು ಬಂದವು. ಈ ಕಾರಣಕ್ಕೆ ಇದೀಗ ಪ್ರಾಥಮಿಕ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳು ಕೂಡ ಮೊಬೈಲ್ ಬಳಸಲು ಪ್ರಾರಂಭಿಸಿದ್ದಾರೆ.
ಹೆಚ್ಚಾಗಿ ಮೊಬೈಲ್ ಬಳಸುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮೊಬೈಲ್ ಸ್ಕ್ರೀನ್ ಅನ್ನು ಹೆಚ್ಚಾಗಿ ನೋಡುವುದರಿಂದ ಅದೆಷ್ಟೋ ದೈಹಿಕ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಇದೀಗ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಅಧ್ಯಯನದಿಂದ ಮಾಹಿತಿ ತಿಳಿದುಬಂದಿದೆ.
ಸ್ಮಾರ್ಟ್ ಫೋನ್ ನ ಅತಿಯಾದ ಬಳಕೆಯಿಂದಾಗಿ ಉಂಟಾಗುವ ಸಮಸ್ಯೆಗಳು
ಸ್ಮಾರ್ಟ್ ಫೋನ್ ನ ಅತಿಯಾದ ಬಳಕೆ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಮೊಬೈಲ್ ಸ್ಕ್ರೀನ್ ಗಳನ್ನೂ ನೋಡುದರಿಂದ ಕಣ್ಣಿಗೆ ಕೂಡ ಹೆಚ್ಚಿನ ಪರಿಣಾಮವಾಗುತ್ತದೆ. ಕಣ್ಣಿನ ದ್ರಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆಯೆ ಸ್ಮಾರ್ಟ್ ಫೋನ್ ಬಳಕೆಯಿಂದ ಆಗುವ ಪರಿಣಾಮದ ಬಗ್ಗೆ ಬ್ರೆಜಿಲ್ ನಲ್ಲಿ ಅಧ್ಯಯನ ಮಾಡಲಾಗಿದೆ.
ಸ್ಮಾರ್ಟ್ ಫೋನ್ ಬಳಕೆ ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರಲಿದೆ
ಅಧ್ಯಯನದ ಪ್ರಕಾರ ಮೊಬೈಲ್ ಬಳಕೆದಾರರ ಎದೆಗೂಡಿನ ಬೆನ್ನುಮೂಳೆಯ (TSP) ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹೆಚ್ಚಾಗಿ ಮೊಬೈಲ್ ಬಳಸುದರಿಂದಾಗುವ ಪರಿಣಾಮದ ಬಗ್ಗೆ ಸಂಶೋಧಕರು ತನಿಖೆ ನಡೆಸಿದ್ದಾರೆ. ಸಂಶೋಧನೆಯ ಪ್ರಕಾರ, ಸ್ಮಾರ್ಟ್ ಫೋನ್ ಬಳಕೆಯು ಬೆನ್ನು ಮೂಳೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.
ಒಂದು ದಿನದಲ್ಲಿ ಮೂರು ಗಂಟೆಗಳಿಗಿಂತ ಅಧಿಕವಾಗಿ ಮೊಬೈಲ್ ನೋಡುವುದರಿಂದ ಅಥವಾ ಒಂದೇ ಕಡೆಯಲ್ಲಿ ಕುಳಿತುಕೊಳ್ಳುದರಿಂದ ಹೆಚ್ಚಾಗಿ ಬೆನ್ನು ಮೂಳೆಯಲ್ಲಿ ನೋವು ಕಾಣಿಸುತ್ತದೆ. ಎದೆಗೂಡಿನ ಬೆನ್ನೆಲುಬು ಹಾಗೂ ಎದೆಯ ಹಿಂಭಾಗದಲ್ಲಿ, ಭುಜಗಳ ನಡುವೆ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ಫೋನ್ ಬಳಕೆಯಿಂದಾಗಿ ಜನರು TSP ನಿಂದ ಬಳಲುತ್ತಾರೆ.