Smart Phone: 18 ವರ್ಷಕ್ಕಿಂತ ಕೆಳಗಿನವರು 2 ಗಂಟೆಗಿಂತ ಹೆಚ್ಚು ಮೊಬೈಲ್ ಬಳಸುವಂತಿಲ್ಲ, ಜಾರಿಗೆ ಬಂತು ಹೊಸ ನಿಯಮ.
ಅಪ್ರಾಪ್ತ ವಯಸ್ಸಿನ ಮಕ್ಕಳು ಬಳಸುವ ಮೊಬೈಲ್ ಗಳು ಈ ವಿಷಯಗಳನ್ನು ಒಳಗೊಂಡಿರಬೇಕು.
Smart Phone Rule For Minor’s: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳನ್ನೂ ಬಳಸುತ್ತಾರೆ. ದಿನದ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಫೋನ್(Smart Phone) ಅಲ್ಲಿಯೇ ಕಳೆಯುತ್ತಾರೆ. ಈ ಮೊಬೈಲ್ ಫೋನ್ ಗಳು ಎಷ್ಟು ಉಪಯೋಕಾರಿಯೋ, ಅಷ್ಟೇ ಅಪಾಯಕಾರಿ ಕೂಡ.
ಸ್ಮಾರ್ಟ್ ಫೋನ್ ನಿಂದ ನಮ್ಮ ಎಷ್ಟೋ ಕೆಲಸಗಳು ಸುಲಭವಾಗುತ್ತದೆ. ಚಿಕ್ಕ ಮಕ್ಕಳು ಮೊಬೈಲ್ ಫೋನ್ ಗಳನ್ನೂ ಹೆಚ್ಚು ಬಳಕೆ ಮಾಡಿದರೆ ಅವರ ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಉಂಟಾಗುತ್ತದೆ. ಸ್ಮಾರ್ಟ್ ಫೋನ್ ನಿಂದ ನಾವು ಕೆಲವು ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಮಾಡಬಹುದು.
ಇನ್ನುಮುಂದೆ ದಿನಕ್ಕೆ 2 ಗಂಟೆ ಮಾತ್ರ ಸ್ಮಾರ್ಟ್ ಫೋನ್ ಬಳಕೆ
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಪ್ಲಿಕೇಶನ್ ಗಳು ಮತ್ತು ಸ್ಮಾರ್ಟ್ ಫೋನ್ ಗಳ ತಡೆಯುದು ಚೀನಿ ಅಧಿಕಾರಿಗಳ ಪ್ರಯತ್ನವಾಗಿದೆ. ಈ ಹಿನ್ನೆಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸ್ಮಾರ್ಟ್ ಫೋನ್ ಬಳಕೆಯ ಸಮಯವನ್ನು ದಿನಕ್ಕೆ ಗರಿಷ್ಠ 2 ಗಂಟೆಗಳವರೆಗೆ ಸೀಮಿತಗೊಳಿಸುವ ನಿಯಮವನ್ನು ಪ್ರಸ್ತಾಪಿಸಿದ್ದಾರೆ.
ಚೀನಾದ ಶಕ್ತಿಶಾಲಿ ಸೈಬರ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ ಈ ಕರಡು ನಿಯಮವನ್ನು ರೂಪಿಸಿದ್ದು,ದೇಶದ ಡಿಜಿಟಲ್ ಜೀವನದ ಮೇಲೆ ನಿಯಂತ್ರಣವನ್ನು ಬೀರುವ ಕ್ಸಿ ಜಿನ್ ಪಿಂಗ್ ಸರ್ಕಾರದ ಬಯಕೆ ನಿಜವಾಗುತ್ತಿದೆ. ಹಾಗೆ ಈ ನಿಯಮಗಳನ್ನು ಜಾರಿಗೆ ತಂದರೆ, ಅವು ಟೆನೆಂಟ್ಸ್ ಮತ್ತು ಬೈಟ್ ಡ್ಯಾನ್ಸನಂತಹ ಕಂಪನಿಗಳ ಮೇಲೆ ಪರಿಣಾಮ ಬೀರುತ್ತದೆ.
CAC ಯ ಕರಡು ನಿಯಮಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಪ್ಲಿಕೇಶನ್ ಗಳು ಮತ್ತು ಸ್ಮಾರ್ಟ್ ಫೋನ್ ಗಳ ತಡೆಯುವುದು ಚೀನಿ ಅಧಿಕಾರಿಗಳ ಪ್ರಯತ್ನವಾಗಿದೆ. 2021 ರಲ್ಲಿ ಚೀನಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ವಾರಕ್ಕೆ ಮೂರೂ ಗಂಟೆಗಳಿಗಿಂತ ಹೆಚ್ಚು ಆನ್ಲೈನ್ ವಿಡಿಯೋ ಗೇಮ್ ಆಡುವುದನ್ನು ನಿರ್ಬಂಧಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳು ಬಳಸುವ ಮೊಬೈಲ್ ಗಳು ಈ ವಿಷಯಗಳನ್ನು ಒಳಗೊಂಡಿರಬೇಕು
ಅಪ್ರಾಪ್ತ ವಯಸ್ಸಿನ ಮಕ್ಕಳು ಬಳಸುವ ಮೊಬೈಲ್ ಗಳು ಮೈನರ್ ಮೋಡ್ ಅನ್ನು ಹೊಂದಿರಬೇಕು. ಫೋನ್ ಆನ್ ಆಗಿರುವಾಗ ಹೋಂ ಸ್ಕ್ರೀನ್ ಐಕಾನ್ ಅಥವಾ ಸದನದ ಸಿಸ್ಟಮ್ ಗಳು ಸೆಟ್ಟಿಂಗ್ ಗಳಲ್ಲಿ ಪ್ರವೇಶಿಸುವಾಗ ಸುಲಭವಾಗಿರಬೇಕು ಎಂದು ಕರಡು ನಿಯಮ ಹೇಳುತ್ತದೆ.
ಅಪ್ರಾಪ್ತ ವಯಸ್ಸಿನ ಮಕ್ಕಳು ಏನು ನೋಡಬೇಕು ಎಂಬುದನ್ನು ಮೈನರ್ ಮೋಡ್ ಸೂಚಿಸುತ್ತದೆ. ಮೂರೂ ವರ್ಷದೊಳಗಿನ ಮಕ್ಕಳಿಗೆ ಹಾಡು ಆಡೀಯೋ ಕೇಂದ್ರೀಕೃತ ವಿಷಯವನ್ನು ತೋರಿಸಬೇಕು. 12 ರಿಂದ 16 ವರ್ಷ ವಯಸ್ಸಿನ ಮಕ್ಕಳು ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಮಾತ್ರ ನೋಡಬೇಕು.