Smart Watch: ಕಡಿಮೆ ಬೆಲೆಯ ಹೊಸ ಸ್ಮಾರ್ಟ್ ವಾಚ್, ಐಫೋನ್ ರೀತಿಯ ಫೀಚರ್
ಸ್ಮಾರ್ಟ್ ವಾಚ್ ಗಳಿಗಾಗಿ ಹೊಸ ವಾಟ್ಸಾಪ್ ಅಪ್ಲಿಕೇಶನ್.
Smart Watch And WhatsApp: ಈಗಿನ ಕಾಲದಲ್ಲಿ ಹೆಚ್ಚಿನ ಜನರು ಸ್ಮಾರ್ಟ್ ವಾಚ್(Smart Watch) ಗಳನ್ನೂ ಖರೀದಿ ಮಾಡುತ್ತಾರೆ. ಸ್ಮಾರ್ಟ್ ವಾಚ್ ಗಳಲ್ಲಿ ಸರಾಗವಾಗಿ ವಾಟ್ಸಾಪ್ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಮೆಟಾ ಕಂಪನಿ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ.
ಸ್ಮಾರ್ಟ್ ವಾಚ್ ನಲ್ಲಿ ಹೊಸ ವಾಟ್ಸಾಪ್ ಅಪ್ಲಿಕೇಶನ್
ಸೋಶಿಯಲ್ ಮೀಡಿಯಾದ ದೈತ್ಯ ಮೆಟಾ ಕಂಪನಿ google ನ wear OS ನಲ್ಲಿ ರನ್ ಆಗುವ ಸ್ಮಾರ್ಟ್ ವಾಚ್ ಗಳಿಗಾಗಿ ಹೊಸ ವಾಟ್ಸಾಪ್ ಅಪ್ಲಿಕೇಶನ್ ಪರಿಚಯಿಸಿದೆ. ಇದರಿಂದ ಸ್ಮಾರ್ಟ್ ವಾಚ್ ನಲ್ಲಿ ವಾಟ್ಸಾಪ್ ಬಳಕೆ ಸಾಧ್ಯವಾಗಲಿದೆ. ಸ್ಮಾರ್ಟ್ ವಾಚ್ ಗಳಿಗಾಗಿಯೇ ಮೀಸಲಾದ ಹೊಸ ವಾಟ್ಸಾಪ್ ಅಪ್ಲಿಕೇಶನ್ ಒಂದು ಬಿಡುಗಡೆಯಾಗಿದೆ.
ಇದರ ಬಗ್ಗೆ ಮೆಟಾ ಸಿ ಇ ಓ ಮಾರ್ಕ್ ಜುಕರ್ ಬರ್ಗ್ ತಮ್ಮ ಇನ್ಸ್ಟಾಗ್ರಾಮ್ ಅಕ್ಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸ್ಮಾರ್ಟ್ ವಾಚ್ ನಲ್ಲಿ ವಾಟ್ಸಾಪ್ ಕಾಲ್ ಮತ್ತು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವುದಕ್ಕೆ ಅವಕಾಶ ಸಿಗಲಿದೆ. ಈ ಹೊಸ ವಾಟ್ಸಾಪ್ ಅಪ್ಲಿಕೇಶನ್ ನ ವಿಶೇಷತೆ ಏನು, ಅದರ ಕಾರ್ಯನಿರ್ವಹಣೆ ಹೇಗಿರಲಿದೆ ಅನ್ನುವುದನ್ನು ತಿಳಿದುಕೊಳ್ಳೋಣ.
WearOS ಅಪ್ಲಿಕೇಶನ್
ಮೆಟಾ ಕಂಪನಿಯು ಈಗಾಗಲೇ WearOS ಅಪ್ಲಿಕೇಶನ್ ಅನ್ನು ಹೊರತರಲು ಪ್ರಾರಂಭಿಸಿದೆ. ಇದು Wear OS 3 ನಲ್ಲಿ ರನ್ ಆಗಿರುವ ಸ್ಮಾರ್ಟ್ ವಾಚ್ ಗಳೊಂದಿಗೆ ಹೊಂದಿಕೊಳ್ಳಲಿದೆ. ಇನ್ನು ಈ ಅಪ್ಲಿಕೇಶನ್ ಬಳಕೆದಾರರಿಗೆ ಟೆಕ್ಸ್ಟ್ ಗಳು, ಇಮೋಜಿಗಳು, ಸಂದೇಶಗಳಿಗೆ ರಿಪ್ಲೆ ಕಳುಹಿಸುವುದಕ್ಕಾಗಿ ಹಾಗು ಸಂದೇಶಗಳನ್ನು ಸ್ವೀಕರಿಸುವುದಕ್ಕೆ ಅನುಮತಿಸಲಿದೆ. ಜೊತೆಗೆ ಈ ಅಪ್ಲಿಕೇಶನ್ ಮೂಲಕ ಧ್ವನಿ ಸಂದೇಶಗಳನ್ನು ನೇರವಾಗಿ ಸ್ಮಾರ್ಟ್ ವಾಚ್ ಮೂಲಕವೇ ರೆಕಾರ್ಡ್ ಮಾಡಿ ಕಳುಹಿಸಲು ಅವಕಾಶ ನೀಡಲಿದೆ.