Smartphone Burst: ಇಂತಹ ಸಂದರ್ಭಗಳಲ್ಲಿ ಮೊಬೈಲ್ ಸ್ಪೋಟವಾಗವುದು 100% ಖಚಿತ, ಎಚ್ಚೆತ್ತುಕೊಳ್ಳಿ

ಮೊಬೈಲ್ ಫೋನ್ ಗಳು ಸ್ಪೋಟಗೊಳ್ಳಲು ಕಾರಣ.

Reason For Smartphone Burst: ಸಾಮಾನ್ಯವಾಗಿ ಎಲ್ಲರು ಮೊಬೈಲ್ ಫೋನ್ (Mobile Phone) ಗಳನ್ನೂ ಬಳಸುತ್ತಾರೆ. ಅತಿಯಾದ ಮೊಬೈಲ್ ಫೋನ್ ಬಳಕೆಯು ಬಳಕೆದಾರರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇನ್ನು ಮೊಬೈಲ್ ಫೋನ್ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ದಿನದಿಂದ ದಿನಕ್ಕೆ ಮೊಬೈಲ್ ಫೋನ್ ಬಳಕೆದಾರರು ಹೆಚ್ಚಾಗುತ್ತಿದ್ದಾರೆ.

Reason For Smartphone Burst
Image Credit: pcquest

ಮೊಬೈಲ್ ಫೋನ್ ಬಳಕೆ ಸಾಕಷ್ಟು ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಹೆಚ್ಚು ಕಾಲ ಮೊಬೈಲ್ ಬಳಸುದರಿಂದ ಮೊಬೈಲ್ ಹೆಚ್ಚು ಬಿಸಿಯಾಗಿ ಸ್ಪೋಟಗೊಳ್ಳುವ (Smartphone Burst) ಸಂಭವನೀಯತೆ ಕೂಡ ಹೆಚ್ಚಿದೆ. ಇನ್ನು ಮೊಬೈಲ್ ಫೋನ್ ಗಳು ಬಿಸಿಯಾಗಿ ಸ್ಪೋಟಗೊಳ್ಳಲು ಕೆಲವು ಕಾರಣಗಳಿವೆ. ಈ ಕಾರಣಗಳ ಬಗ್ಗೆ ಮಾಹಿತಿ ತಿಳಿಯೋಣ.

ಮೊಬೈಲ್ ಫೋನ್ ಗಳು ಸ್ಪೋಟಗೊಳ್ಳಲು ಕಾರಣಗಳು
*ಮೊಬೈಲ್ ಫೋನ್ ಗಳನ್ನೂ ಬಳಸುವ ಮುನ್ನ ಸಾಕಷ್ಟು ಕಾಳಜಿಯನ್ನು ವಹಿಸಬೇಕು. ಫೋನ್ ಬಳಸಿದ ನಂತರ ಉಪಯೋಗಿಸಿದ ಎಲ್ಲ ಅಪ್ಲಿಕೇಶನ್ ಗಳನ್ನೂ ಮುಚ್ಚಬೇಕು.

*ಫೋನ್ ಬಳಸದೆ ಇದ್ದ ಸಮಯದಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಅನೇಕ ಅಪ್ಲಿಕೇಶನ್ ಗಳು ಚಾಲನೆಯಲ್ಲಿರುತ್ತದೆ. ಬ್ಯಾಕ್ ಗ್ರೌಂಡ್ ನಲ್ಲಿ ಅಪ್ಲಿಕೇಶನ್ ಗಳು ರನ್ ಆಗುವ ಕಾರಣ ಫೋನ್ ಬೇಗನೆ ಬಿಸಿಯಾಗುತ್ತವೆ. ಇದನ್ನು ತಡೆಯಲು ನಿಮ್ಮ ಸಾಧನದಲ್ಲಿ ಟಾಸ್ಕ್ ಮ್ಯಾನೇಜರ್ ಅಥವಾ ಅಪ್ಲಿಕೇಶನ್ ಮ್ಯಾನೇಜರ್ ಅನ್ನು ಬಳಸಬಹುದು.

*ಮೊಬೈಲ್ ಫೋನ್ ಗಳನ್ನೂ ಬಳಸುವಾಗ ಸ್ಕ್ರಿನ್ ಟೈಮ್ ಔಟ್ ಸೆಟ್ ಮಾಡುಕೊಳ್ಳುವುದು ಅಗತ್ಯ. ಈ ಸೆಟ್ಟಿಂಗ್ ನಿಮ್ಮ ಫೋನ್ ಬೇಗ ಬಿಸಿಯಾಗುವುದನ್ನು ತಡೆಯುತ್ತದೆ.

Join Nadunudi News WhatsApp Group

Mobile phones can also explode due to overcharging the phone.
Image Credit: scoopwhoop

*ಸಾಫ್ಟ್ ವೆರ್ ಸಮಸ್ಯೆಯಿಂದಾಗಿ ಮೊಬೈಲ್ ಫೋನ್ ಗಳು ಅತಿಯಾಗಿ ಬಿಸಿಯಾಗುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಸಿಸ್ಟಮ್ ರಿಸೆಟ್ ಅನ್ನು ಬಳಸುವುದು ಸಹಾಯಕಾರಿಯಾಗಿದೆ.

*ಫೋನ್ ಅನ್ನು ಹೆಚ್ಚು ಚಾರ್ಜ್ ಮಾಡುದರಿಂದ ಕೂಡ ಮೊಬೈಲ್ ಫೋನ್ ಗಳು ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಫೋನ್ ಗಳು 100 ಶೇ. ಪೂರ್ಣಗೊಳ್ಳುವ ಮುನ್ನವೇ ಚಾರ್ಜ್ ನಿಂದ ಹೊರತೆಗೆಯುವುದು ಉತ್ತಮ.

Join Nadunudi News WhatsApp Group