Pregnant Women’s: ಈ ಒಂದು ಕಾರಣಕ್ಕೆ ಯಾವುದೇ ವಿಷಪೂರಿತ ಹಾವು ಗರ್ಭಿಣಿ ಮಹಿಳೆಯನ್ನ ಕಚ್ಚಲ್ಲ, ಯಾಕೆ ಗೊತ್ತಾ…?
ಈ ಒಂದು ಕಾರಣಕ್ಕೆ ಗರ್ಭಿಣಿ ಮಹಿಳೆಯರಿಗೆ ಕಚ್ಚಲ್ಲ ವಿಷಪೂರಿತ ಹಾವು
Snake Bite For Pregnant Women: ಸನಾತನ ಧರ್ಮದಲ್ಲಿ ನಮಗೆ ತಿಳಿದಿರದಂತಹ ಅನೇಕ ವಿಚಾರಗಳಿವೆ. ಜನರು ಅನೇಕ ರೀತಿಯ ಸಂಪ್ರದಾಯ ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ. ಈಗಲೂ ಕೂಡ ಕೆಲವು ಸಂಪ್ರದಾಯ ನಂಬಿಕೆಗಳು ಹಾಗೆಯೇ ಉಳಿದಿವೆ. ಪುರಾಣ ಇರುವಂತಹ ಅನೇಕ ಕಥೆಗಳನ್ನು ಜನರು ನಂಬುತ್ತರೆ.
ಇನ್ನು ವಿಷಪೂರಿತ ಹಾವುಗಳು ಗರ್ಭಿಣಿ ಸ್ತೀಯರನ್ನು ಕಚ್ಚುವುದಿಲ್ಲ ಎನ್ನುವ ಮಾತು ನೀವು ಕೇಳಿರಬಹುದು. ಹೌದು, ಹಾವುಗಳು ಗರ್ಭಿಣಿ ಸ್ತೀಯರನ್ನು ಕಚ್ಚುವುದಿಲ್ಲ ಎನ್ನುವುದು ನಂಬಿಕೆ. ಹಾವುಗಳು ಗರ್ಭಿಣಿ ಸ್ತೀಯರನ್ನು ಕಚ್ಚದಿರಲು ಪುರಾಣದಲ್ಲಿರುವ ಕಥೆಯ ಜೊತೆಗೆ ವೈಜ್ಞಾನಿಕ ಕಾರಣ ಕೂಡ ಇದೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ.
ಈ ಒಂದು ಕಾರಣಕ್ಕೆ ಯಾವುದೇ ವಿಷಪೂರಿತ ಹಾವು ಗರ್ಭಿಣಿ ಮಹಿಳೆಯನ್ನ ಕಚ್ಚಲ್ಲ
ಬ್ರಹ್ಮವೈವರ್ತ ಪುರಾಣದ ಕಥೆಯ ಪ್ರಕಾರ, ಒಮ್ಮೆ ಗರ್ಭಿಣಿ ಮಹಿಳೆಯೊಬ್ಬಳು ದೇವಾಲಯದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದಳು. ಅವಳು ಸಂಪೂರ್ಣವಾಗಿ ತಪಸ್ಸಿನಲ್ಲಿ ಮುಳುಗಿದ್ದಳು. ಆ ವೇಳೆ ಎರಡು ಹಾವುಗಳು ಶಿವಾಲಯಕ್ಕೆ ಬಂದು ಗರ್ಭಿಣಿಗೆ ಕಿರುಕುಳ ನೀಡಲಾರಂಭಿಸಿವೆ. ಇದು ಮಹಿಳೆಯ ಗಮನವನ್ನು ಬೇರೆಡೆಗೆ ತಿರುಗಿಸಿತು.
ತಪಸ್ಸಿನ ಭಂಗದಿಂದ ಹೆಣ್ಣಿನ ಹೊಟ್ಟೆಯಲ್ಲಿ ಬೆಳೆಯುವ ಮಗು, ನಾಗರಹಾವು, ನಾಗ ಕುಲ ಗರ್ಭಿಣಿಯ ಬಳಿ ಹೋದಾಗ ಕುರುಡಾಗುತ್ತದೆ ಎಂದು ಶಾಪ ನೀಡಿತಂತೆ. ಈ ಘಟನೆಯ ನಂತರ ಹಾವುಗಳು ಗರ್ಭಿಣಿಯನ್ನು ಕಂಡ ತಕ್ಷಣ ಕುರುಡಾಗುತ್ತವೆ ಮತ್ತು ಅವಳನ್ನು ಕಚ್ಚುವುದಿಲ್ಲ ಎಂದು ನಂಬಲಾಗಿದೆ. ಅಲ್ಲದೆ ಗರ್ಭಿಣಿಗೆ ಹಾವಿನ ಕನಸು ಕೂಡ ಬರುವುದಿಲ್ಲ ಎನ್ನುತ್ತಾರೆ ಹಿರಿಯರು.
ಹಾವುಗಳು ಗರ್ಭಿಣಿ ಸ್ತೀಯರನ್ನು ಕಚ್ಚದಿರಲು ವೈಜ್ಞಾನಿಕ ಕಾರಣವೂ ಇದೆ
ಗರ್ಭಿಣಿಯನ್ನು ಕಚ್ಚದೆ ಇರುವುದರ ಹಿಂದೆ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ ವೈಜ್ಞಾನಿಕ ಕಾರಣವೂ ಇದೆ. ಗರ್ಭಧಾರಣೆಯ ನಂತರ ಮಹಿಳೆಯ ದೇಹದಲ್ಲಿ ಕೆಲವು ಅಂಶಗಳು ರೂಪುಗೊಳ್ಳುತ್ತವೆ ಮತ್ತು ಅನೇಕ ಬದಲಾವಣೆಗಳು ಸಹ ನಡೆಯುತ್ತವೆ. ಇವುಗಳಲ್ಲಿ ಮುಖ್ಯವಾದದ್ದು ಹಾರ್ಮೋನುಗಳ ಸ್ರವಿಸುವಿಕೆ.
ಹಾಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯ ಸ್ವಭಾವ, ರುಚಿ, ಬಣ್ಣ ಇತ್ಯಾದಿಗಳು ಬದಲಾಗುತ್ತವೆ. ಹಾವು ಮಹಿಳೆಯ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯನ್ನು ಗ್ರಹಿಸುತ್ತದೆ ಮತ್ತು ಅವಳನ್ನು ಸಮೀಪಿಸಲು ಹಿಂಜರಿಯುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಆದರೆ ಇದು ದೃಢಪಟ್ಟಿಲ್ಲ, ಆದರೆ ಇದು ನಿಜವಾಗಿರಬೇಕು ಎಂದು ಹೇಳಲಾಗುತ್ತದೆ.