BBK 10 Snehith: ನೇರವಾಗಿ ತಾನು ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಹೇಳಿಕೊಂಡ ಸ್ನೇಹಿತ, ಬಿಗ್ ಬಾಸ್ ಮನೆಯಲ್ಲಿ ಇನ್ನೊಂದು ಲವ್ ಸ್ಟೋರಿ.

ನಮ್ರತಾ ಮೇಲಿನ ಪ್ರೀತಿಯನ್ನು ನೇರವಾಗಿ ಹೇಳಿಕೊಂಡ ಸ್ನೇಹಿತ್

Snehith Gowda And Namratha Gowda: ಕಲರ್ಸ್ ಕನ್ನಡದಲ್ಲಿ ಕಿರುತರೆಯ ಬಿಗ್ ರಿಯಾಲಿಟಿ ಶೋ(Reality Show) ಬಿಗ್ ಬಾಸ್(Bigg Boss) ಕನ್ನಡ ಸೀಸನ್ 10 ಈಗಾಗಲೇ ಆರಂಭವಾಗಿ 7 ವಾರದಲ್ಲಿದ್ದರೆ. ಇನ್ನು ಪ್ರತಿನಿತ್ಯ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ವಿಷಯ ನಡೆಯುತ್ತಲೇ ಇರುತ್ತದೆ.

ಬಿಗ್​ ಬಾಸ್​ ರಿಯಾಲಿಟಿ ಶೋನ ಪ್ರತಿ ಸೀಸನ್​ನಲ್ಲಿ ಪ್ರೇಮಕಥೆಗಳು ಹುಟ್ಟಿಕೊಳ್ಳುತ್ತವೆ. Bigg Boss Kannada Season 10 ಕೂಡ ಇದಕ್ಕೆ ಹೊರತಾಗಿಲ್ಲ. ಇದೀಗ ಸ್ನೇಹಿತ್​ ಗೌಡ ಅವರು ನಮ್ರತಾ ಗೌಡ ಮೇಲೆ ಇಟ್ಟುಕೊಂಡ ಫಿಲ್ಲಿಂಗ್ಸ್ ಬಗ್ಗೆ ಹೇಳಿಕೊಂಡಿದ್ದಾರೆ.

Snehith Gowda And Namratha Gowda
Image Credit: TV9 Kannada

ಬಿಗ್ಗ್ ಬಾಸ್ ಸೀಸನ್ 10 ಸ್ನೇಹಿತ್ ಗೌಡ
ಬಿಗ್​ ಬಾಸ್​ ಮನೆಯಲ್ಲಿ ಸ್ನೇಹಿತ್ ಗೌಡ ಅವರು ನಿರೀಕ್ಷಿತ ಮಟ್ಟದಲ್ಲಿ ಪರ್ಫಾರ್ಮೆನ್ಸ್​ ನೀಡುತ್ತಿಲ್ಲ. ಆಟದ ವಿಚಾರದಲ್ಲಿ ಸ್ನೇಹಿತ್​ ಗೌಡ ಹಿಂದುಳಿದಿದ್ದಾರೆ. ಸದ್ಯಕ್ಕಂತೂ ಅವರು ಡೇಂಜರ್​ ಜೋನ್​ನಲ್ಲಿ ಇದ್ದಾರೆ. ಹಾಗಿದ್ದರೂ ಕೂಡ ಅವರು ಹೆಚ್ಚು ಗಮನ ಪ್ರೀತಿ-ಪ್ರೇಮದ ಕಡೆಗೆ ಕೊಡುತ್ತಿದ್ದಾರೆ. ಇದೀಗ ಸ್ನೇಹಿತ್ ಗೌಡ ಅವರು ತಮ್ಮ ಪ್ರೀತಿಯ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ.

ಸ್ನೇಹಿತ್​ ಗೌಡ ಹೇಳಿದ್ದೇನು…?
ಸ್ನೇಹಿತ್​ ಗೌಡ ಅವರು ವಿನಯ್​ ಗೌಡ ಅವರ ಬಳಿ ನಮ್ರತಾ ಗೌಡ ಮೇಲೆ ಇರುವ ಫೀಲಿಂಗ್​ ಬಗ್ಗೆ ಹೇಳಿಕೊಂಡಿದ್ದಾರೆ. “ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕ್​ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್​ ಬಾಸ್​ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜೊತೆ ನಾನು ಫ್ರೆಂಡ್​ಗಿಂತಲೂ ಚೂರು ಜಾಸ್ತಿ ಅಟ್ಯಾಚ್​ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು. ಆಮೇಲೆ ಒಂದು ಹಂತದ ನಂತರ ಅನಿಸಿತು. ನನಗೆ ಇವರ ಮೇಲೆ ಸ್ಟ್ರಾಂಗ್​ ಫೀಲಿಂಗ್ಸ್ ಇದೆ. ಅದಾದ ಬಳಿಕ ಅವರಿಗೆ ನಾನು ಹೇಳಿದೆ. ಅವರ ಜೊತೆ ನನಗೆ ಮುಂದಿನ ಹತ್ತು ವರ್ಷಗಳು ಕಾಣುತ್ತಿವೆ. ನಮ್ಮ ಅಪ್ಪ-ಅಮ್ಮನ ಜೊತೆ ಅವರು ಕೂಡ ಕಾಣುತ್ತಾರೆ” ಎಂದು ಸ್ನೇಹಿತ್​ ಹೇಳಿದ್ದಾರೆ.

BBK 10 Snehith Latest News
Image Credit: Public TV

ನಮ್ರತಾ ಕಡೆಯಿಂದಲೇ ಇದಕ್ಕೆಲ್ಲ ಇನ್ನು ಗ್ರೀನ್​ ಸಿಗ್ನಲ್​ ಸಿಕ್ಕಿಲ್ಲ
ಬಿಗ್​ ಬಾಸ್​ನಲ್ಲಿ ಹುಟ್ಟುವ ಪ್ರೀತಿಯನ್ನು ಕೆಲವೊಮ್ಮೆ ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನೂ ಕೆಲವೊಮ್ಮೆ ಅದೇ ಪ್ರೀತಿಯು ಮದುವೆ ಹಂತಕ್ಕೆ ಹೋಗಿದ್ದು ಕೂಡ ಉಂಟು. ಸ್ನೇಹಿತ್ ಗೌಡ ಅವರು ತಮ್ಮ ಫೀಲಿಂಗ್ಸ್ ಅನ್ನು ಹೇಳಿಕೊಂಡಿದ್ದಾರೆ ಆದ್ರೆ ಇನ್ನು ನಮ್ರತಾ ಕಡೆಯಿಂದಲೇ ಇದಕ್ಕೆಲ್ಲ ಇನ್ನು ಗ್ರೀನ್​ ಸಿಗ್ನಲ್​ ಸಿಕ್ಕಿಲ್ಲ. ನಮ್ರತಾ ಅವರು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group

Join Nadunudi News WhatsApp Group