ನಟಿ ಕತ್ರಿನಾ ಕೈಫ್ ದೇಶದ ಚಿತ್ರರಂಗದ ಕಂಡ ಖ್ಯಾತ ನಟಿ. ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ನಟಿ ಕತ್ರಿನಾ ಕೈಫ್. ಇನ್ನು ಇಷ್ಟು ವರ್ಷಗಳ ಕಾಲ ಮದುವೆಯಿಂದ ದೂರ ಉಳಿದುಕೊಂಡಿದ್ದ ನಟಿ ಕತ್ರಿನಾ ಕೈಫ್ ಈಗ ಮದುವೆಯನ್ನ ಮಾಡಿಕೊಳ್ಳಲು ನಿರ್ಧಾರವನ್ನ ಮಾಡಿದ್ದು ನಟ ವಿಕ್ಕಿ ಕೌಶಲ್ ಜೊತೆ ಹಸೆಮಣೆಯನ್ನ ಏರಲಿದ್ದಾರೆ. ಇನ್ನು ಇವರಿಬ್ಬರ ನಡುವೆ ಸುಮಾರು ಐದು ವರ್ಷಗಳ ಕಾಲ ವಯಸ್ಸಿನ ಅಂತರ ಇದ್ದು ಕತ್ರಿನಾ ಕೈಫ್ ಮುಸ್ಲಿಂ ಆದರೆ ವಿಕ್ಕಿ ಕೌಶಲ್ ಹಿಂದೂ. ಇನ್ನು ಹಿಂದೂ ಮತ್ತು ಮುಸ್ಲಿಂ ಎರಡು ಸಂಪ್ರದಾಯದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮದುವೆಯನ್ನ ಬಹಳ ಗ್ರಾಂಡ್ ಆಗಿ ಮಾಡಿಕೊಳ್ಳಲು ಇಬ್ಬರು ನಿರ್ಧಾರವನ್ನ ಮಾಡಿದ್ದು ಮದುವೆಯ ಭದ್ರತೆಗಾಗಿ ಮದುವೆಗೆ ಬರುವ ಅಥಿತಿಗಳ ಮೊಬೈಲ್ ಗಳನ್ನ ಆಫ್ ಮಾಡಲು ಸೂಚನೆ ನೀಡಲಾಗಿದೆ. ಇನ್ನು ಕತ್ರಿನಾ ಕೈಫ್ ಮದುವೆಯಾಗುತ್ತಿದ್ದಾರೆ ಎಂದು ಸುದ್ದಿ ಹೊರ ಬರುತ್ತಿದ್ದಂತೆ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಈಗ ಕತ್ರಿನಾ ಕೈಫ್ ಮದುವೆಗೆ ಮದುಮಗಳು ಬಳಸುವ ಮೆಹೆಂದಿಯ ವಿಷಯ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು.
ಹೌದು ಕತ್ರಿನಾ ಕೈಫ್ ಮೆಹೆಂದಿಗೆ ಬಳಸುತ್ತಿರುವ ಸೋಜತ್ ಮೆಹೆಂದಿಯ ಬೆಲೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಮಾಡಿದೆ ಎಂದು ಹೇಳಬಹುದು. ಹಾಗಾದರೆ ಕತ್ರಿನಾ ಕೈಫ್ ಮೆಹೆಂದಿಗೆ ಬಳಸುತ್ತಿರುವ ಸೋಜತ್ ಮೆಹೆಂದಿಯ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಅವರು ತಮ್ಮ ಮದುವೆಯ ಮೆಹೆಂದಿಗೆ ಸಾವಯುವ ಮೆಹೆಂದಿಯ ಮೊರೆ ಹೋಗಿದ್ದಾರೆ. ಹೌದು ಈ ಜೋಡಿ ತಮ್ಮ ಮದುವೆ ಮೆಹೆಂದಿ ಕಾರ್ಯಕ್ರಮಕ್ಕೆ ಅಂತಿಂತ ಗೋರಂಟಿ ಆಯ್ಕೆ ಮಾಡಿಕೊಂಡಿಲ್ಲ, ಬದಲಿಗೆ ಇವರು ಆಯ್ಕೆ ಮಾಡಿಕೊಂಡಿರುವುದು ರಾಜಸ್ಥಾನದ ವಿಶೇಷ ಸೋಜತ್ ಮೆಹೆಂದಿ.
ದೇಶದಲ್ಲಿ ಇರುವ ಅತ್ಯಂತ ದುಬಾರಿ ಮೆಹೆಂದಿಯಲ್ಲಿ ಇದು ಒಂದಾಗಿದ್ದು ಇದರ ಒಂದು ಪ್ಯಾಕೆಟ್ ನ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಆಗಿದೆ. ಸೋಜತ್ ಮೆಹೆಂದಿ ತನ್ನದೇ ಆದ ಪ್ರಾಮುಖ್ಯತೆಯನ್ನ ಹೊಂದಿದ್ದು ಈ ಮೆಹೆಂದಿ ತಯಾರಿಕೆಯಲ್ಲಿ ಯಾವುದೇ ರೀತಿಯ ರಾಸಾಯನಿಕವನ್ನ ಬಳಕೆ ಮಾಡಲಾಗುವುದಿಲ್ಲ ಮತ್ತು ಇದನ್ನ ನೈಸರ್ಗಿಕವಾಗಿ ತಯಾರಿಸಲಾಗುತ್ತದೆ. ನೈಸರ್ಗಿಕವಾಗಿ ತಯಾರಿಸುವ ಕಾರಣ ಈ ಗೋರಂಟಿಯ ಬೆಲೆ ಬಹಳ ಜಾಸ್ತಿ ಎಂದು ಹೇಳಬಹುದು. ಈ ಗೋರಂಟಿ ರಾಜಸ್ಥಾನದಲ್ಲಿ ಜನಪ್ರಿಯ ಮತ್ತು ಇವರ ಮದುವೆಗೆ ಅಲ್ಲಿಂದಲೇ ಗೋರಂಟಿ ತಯಾರಾಗಿ ಬರಲಿದೆ ಎಂದು ತಿಳಿದುಬಂದಿದೆ. ಸ್ನೇಹಿತರೆ ಈ ಮೆಹೆಂದಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.