Vayve EVA: ಪೆಟ್ರೋಲ್ ಬೇಡ, ಡೀಸೆಲ್ ಬೇಡ ಮತ್ತು ಚಾರ್ಜ್ ಮಾಡಲು ಕರೆಂಟ್ ಬೇಡ, ಬಂತು ಇನ್ನೊಂದು ಕಾರ್, ಮೈಲೇಜ್ ಲೆಕ್ಕಕ್ಕಿಲ್ಲ.

ಪೆಟ್ರೋಲ್, ಡೀಸೆಲ್, ಚಾರ್ಜಿಂಗ್ ಇವೆಲ್ಲದರ ಖರ್ಚನ್ನು ಉಳಿಸಲು ಹೊಸ ತಂತ್ರಜ್ಞಾನ ಬಿಡುಗಡೆ.

Solar Car Vayve EVA: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಾರು ಖರೀದಿಸುವ ಆಸೆ ಇದ್ದೆ ಇರುತ್ತದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿ ಕಾರುಗಳು ಬಿಡುಗಡೆ ಆಗುತ್ತಾ ಇರುತ್ತದೆ. ದುಬಾರಿ ಬೆಲೆಯ ಕಾರ್ ಗಳಿಂದ ಹಿಡಿದು ಕಡಿಮೆ ಬೆಲೆಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಾರು ಖರೀದಿಸುವ ಆಸೆ ಪ್ರತಿಯೊಬ್ಬರಿಗೆ ಇದ್ದರು ಹಣಕಾಸಿನ ವಿಚಾರದಿಂದ ಸಾಮಾನ್ಯ ಜನರು ಸುಮ್ಮನಿದ್ದು ಬಿಡುತ್ತಾರೆ. ಇನ್ನು ಇತ್ತೀಚಿಗೆ ಪೆಟ್ರೋಲ್ ಡೀಸೆಲ್ ಬೆಲೆಯಂತು ಗಗನಕ್ಕೇರಿದೆ.

ಕಾರ್ ಖರೀದಿಸಿದರು ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಹಾಕುವುದೇ ಕಷ್ಟವಾಗುತ್ತಿದೆ. ಇನ್ನು ಜನರಿಗೆ ಪೆಟ್ರೋಲ್ ಡೀಸೆಲ್ ಖರ್ಚನ್ನು ಕಡಿಮೆ ಮಾಡಲು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ. ಕಚ್ಚಾತೈಲಗಳ ಬೆಲೆಯ ಹೆಚ್ಚಳದಿಂದಾಗಿ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಇದೀಗ ಪೆಟ್ರೋಲ್, ಡೀಸೆಲ್, ಚಾರ್ಜಿಂಗ್ ಇವೆಲ್ಲದರ ಖರ್ಚನ್ನು ಉಳಿಸಲು ಹೊಸ ತಂತ್ರಜ್ಞಾನ ಬಿಡುಗಡೆಯಾಗಿದೆ.

Information about Solar Car Mileage
Image Credit: Aajtak

ಸೋಲಾರ್ ಕಾರ್ ವೇವ್ ಇವಿಎ
ಇದೀಗ ಭಾರತದಲ್ಲಿ ಹೊಸ ಹೊಸ ರೀತಿಯ ಕಾರುಗಳು ಪರಿಚಯ ಆಗುತ್ತಾ ಇದೆ. ಗ್ರೇಟರ್ ರೀತಿಯ ವಾಹನಗಳನ್ನು ಪರಿಚಯಿಸಲಾಗಿದೆ. ಪುಣೆಯ ಸ್ಟಾರ್ಟ್ ಅಪ್ ಕಂಪನಿ ವೇವ್ ಮೊಬಿಲಿಟಿ (Vayve Mobility) ಭಾರತದ ಮೊದಲ ಸೋಲಾರ್ ಕಾರನ್ನು ಲಾಂಚ್ ಮಾಡಿದೆ. ಈ ಕಾರಿನೊಳಗೆ ಮೂವರು ಕುಳಿತುಕೊಳ್ಳಬಹುದಾಗಿದೆ. ಈ ಕಾರಿನ ವಿಶೇಷ ಏನೆಂದರೆ ಕಾರನ್ನು 45 ನಿಮಿಷಗಳಲ್ಲಿ ಫುಲ್ ಚಾರ್ಜ್ ಮಾಡಿ 250 ಕೀ ಮೀ ಓಡಿಸಬಹುದು. ಇದು ಬ್ಯಾಟರಿ ಚಾಲಿತ ಸಿಂಗಲ್ ಡೋರ್ ಕಾರು.

ಸೋಲಾರ್ ಕಾರಿನ ಮೈಲೇಜ್ ಬಗ್ಗೆ ಮಾಹಿತಿ
ಇದು 6 kW ಲಿಕ್ವಿಡ್ ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತ ಆಗಿದೆ. 14 kWh ಬ್ಯಾಟರಿ ಪ್ಯಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಒಮ್ಮೆ ಫುಲ್‌ ಚಾರ್ಜ್‌ ಮಾಡಿದರೆ 250 ಕಿಮೀ ಚಲಿಸುವ ಸಾಮರ್ಥ್ಯ ಈ ಕಾರಿಗೆ ಇದೆ. ಈ ಕಾರನ್ನು ಮನೆಯ ಸಾಕೆಟ್‌ನಿಂದ 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಸಂಯೋಜಿತ ಚಾರ್ಜಿಂಗ್ ವ್ಯವಸ್ಥೆಯ ಮೂಲಕ 45 ನಿಮಿಷಗಳಲ್ಲಿ 80 ಪ್ರತಿಶತ ಚಾರ್ಜ್ ಮಾಡಬಹುದು. ಗಾತ್ರದಲ್ಲಿ ಟಾಟಾ ನ್ಯಾನೊವನ್ನು ಹೋಲುತ್ತದೆ.

Solar Car vayve EVA Price and Specifications
Image Credit: Moneycontrol

ಸೋಲಾರ್ ಕಾರ್ ವೇವ್ ಇವಿಎ ಬೆಲೆ ಮತ್ತು ವಿಶೇಷತೆ
ಈ ಕಾರ್ ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆಯಬವುದಾಗಿದೆ. ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಮ್ಯೂಸಿಕ್ ಸಿಸ್ಟಂಅನ್ನು ನೀಡಲಾಗಿದೆ. ಅಡ್ಜೆಸ್ಟೆಡ್ ಡ್ರೈವಿಂಗ್ ಸೀಟ್, ವೈಡ್ ಡ್ರೈವರ್ ವಿಸಿಬಿಲಿಟಿ, ರಿಯರ್ ವ್ಯೂ ಕ್ಯಾಮೆರಾ, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಂ ಲಭ್ಯವಿದೆ.

Join Nadunudi News WhatsApp Group

ಈ ಸೋಲಾರ್ ಕಾರ್ ವೇವ್ ಇವಿಎ 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, 3060mm ಉದ್ದ, 1150mm ಅಗಲ, 1590mm ಎತ್ತರ ಮತ್ತು ವಿಲ್ ಬೇಸ್ 22000mm ಅನ್ನು ಹೊಂದಿದೆ. ಈ ಕಾರ್ ಗ್ರಾಹಕರಿಗೆ 6 ಬಣ್ಣಗಳಲ್ಲಿ ಲಭ್ಯವಾಗಲಿದೆ. ಇನ್ನು ಕಂಪನಿಯು 7 ಲಕ್ಷ ಬೆಲೆಯನ್ನು ನಿಗಧಿಪಡಿಸಿದೆ.

Join Nadunudi News WhatsApp Group