Solar Auto: ಇನ್ನುಮುಂದೆ ಆಟೋ ಓಡಿಸಲು ಪೆಟ್ರೋಲ್ ಮತ್ತು ಗ್ಯಾಸ್ ಬೇಕಾಗಿಲ್ಲ, ಈ ಸಾಧನ ಅಳವಡಿಸಿದರೆ 140 Km ಮೈಲೇಜ್.

ಸೌರ ಶಕ್ತಿಯನ್ನ ಆಟೋಗೆ ಅಳವಡಿಸಿಕೊಂಡರೆ ಪೆಟ್ರೋಲ್ ಮತ್ತು ಗ್ಯಾಸ್ ಅಗತ್ಯವಿಲ್ಲ.

Solar Electric Auto: ಸಾಕಷ್ಟು ಜನರು ಆಟೋ(Auto) ಓಡಿಸಿಕೊಂಡು ತಮ್ಮ ಜೀವನವನ್ನ ಮಾಡುತ್ತಿದ್ದಾರೆ. ಸದ್ಯ ದಿನಗಳಲ್ಲಿ ಪೆಟ್ರೋಲ್(Petrol) ಮತ್ತು ಗ್ಯಾಸ್(Gas) ಬೆಲೆ ಏರಿಕೆ ಆಗಿದ್ದು ಆಟೋ ಚಾಲಕರು ಬೇಸರವನ್ನ ಹೊರಹಾಕುತ್ತಿದ್ದಾರೆ.

ಪೆಟ್ರೋಲ್ ಬೆಲೆ ಮತ್ತು ಗ್ಯಾಸ್ ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ಈಗ ಇನ್ನೊಂದು ಗುಡ್ ನ್ಯೂಸ್ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೊಸ ತಂತ್ರಜ್ಞಾನ ಆಟೋ ಚಾಲಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

Solar Electric Auto latest news
Image Credit: Economictimes

ಸೌರ ಶಕ್ತಿ ಚಾಲಿತ ವಾಹನವಾಗಿ ತಯಾರಾದ ಎಲೆಕ್ಟ್ರಿಕ್ ಆಟೋ
ಭುವನೇಶ್ವರದಲ್ಲಿ ಆಟೋ ಚಾಲಕನೊಬ್ಬ ತನ್ನ ಎಲೆಕ್ಟ್ರಿಕ್ ಆಟೋವನ್ನು ಸೌರಶಕ್ತಿ ಚಾಲಿತ ವಾಹನವನ್ನಾಗಿ ಪರಿವರ್ತಿಸಿದ್ದಾನೆ. ಆಟೋ ಚಾಲಕ ಶ್ರೀಕಾಂತ್ ಪಾತ್ರಾ ಯೂಟ್ಯೂಬ್ ನೆರವಿನಿಂದ ಈ ಆವಿಷ್ಕಾರವನ್ನು ಮಾಡಿದ್ದಾರೆ. ಈ ಬಗ್ಗೆ ಆಟೋ ಚಾಲಕ ಶ್ರೀಕಾಂತ್ ಪಾತ್ರಾ ಮಾತನಾಡಿದ್ದಾನೆ. ನಾನು ಕಳೆದ 15 ವರ್ಷಗಳಿಂದ ಆಟೋ ರಿಕ್ಷಾ ಓಡಿಸುತ್ತಿದ್ದೇನೆ.

ಈ ಹಿಂದೆ ನಾನು ಡಿಸೇಲ್ ಇಂಜಿನ್ ನಲ್ಲಿ ಇಂಧನ ತುಂಬಿದ ನಂತರ ದಿನಕ್ಕೆ 300 ರಿಂದ 400 ರೂಪಾಯಿಗಳನ್ನು ಗಳಿಸುತ್ತಿದ್ದೆ. ಇದರಿಂದ ಮನೆ ನಡೆಸುವುದು ನನಗೆ ಕಷ್ಟವಾಗುತ್ತಿತ್ತು. ನನ್ನ ಮಕ್ಕಳಿಗೆ ಬೋಧನಾ ಶುಲ್ಕ ಸಹ ನೀಡಲಾಗುತ್ತಿರಲಿಲ್ಲ. ಸುಮಾರು ಒಂದೂವರೆ ವರ್ಷಗಳ ಹಿಂದೆ ನಾನು ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಖರೀದಿಸಿದೆ. ಆದರೆ, ಕಡಿಮೆ ಬ್ಯಾಟರಿ ಮತ್ತು ಚಾರ್ಜಿಂಗ್ ಸಮಸ್ಯೆ ಪ್ರತಿದಿನವೂ ಒಂದು ದೊಡ್ಡ ಕಾಳಜಿಯನ್ನು ಉಂಟುಮಾಡಿತು. ಆ ಸಮಯದಲ್ಲಿ ರಸ್ತೆಯಲ್ಲಿ ಸರಿಯಾಗಿ ಆಟೋ ಓಡಿಸಲು ಸಾಧ್ಯವಾಗುತ್ತಿರಲಿಲ್ಲ.

Solar Electric Auto latest news
Image Credit: Aninews

ನಂತರ ನನ್ನ ಮಗಳು ಯುಟ್ಯೂಬ್ ನೋಡಿ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೌರ ಶಕ್ತಿಯ ವಾಹನವಾಗಿ ಪರಿಚಾರ್ತಿಸಲು ನನಗೆ ಸಲಹೆ ನೀಡಿದಳು. ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಸೌರ ಚಾಲಿತ ವಾಹನವನ್ನಾಗಿ ಪರಿವರ್ತಿಸುವ ಅವಳ ಆಲೋಚನೆಗಳನ್ನು ನಾನು ಪ್ರಶಂಸಿಸುತ್ತೇನೆ. ಈಗ ನಾನು ಇಂಧನ ತುಂಬುವಿಕೆ, ಬ್ಯಾಟರಿ ಕಡಿಮೆ ಅಥವಾ ಚಾರ್ಜಿಂಗ್ ಸಮಸ್ಯೆಗಳಿಂದ ಮುಕ್ತನಾಗಿದ್ದೇನೆ. ಈ ಆಟೋ ರಿಕ್ಷಾ ಮಾಲಿನ್ಯ ಮುಕ್ತಾಯಾಗಿದೆ ಮತ್ತು ನಮ್ಮ ಪರಿಸರವನ್ನು ಹಸಿರು ಮತ್ತು ಸ್ವಚ್ಛವಾಗಿಡುತ್ತದೆ ಎಂದು ಶ್ರೀಕಾಂತ್ ಪಾತ್ರಾ ಹೇಳಿದ್ದಾರೆ.

Join Nadunudi News WhatsApp Group

ಹೊಸ ಸೌರಶಕ್ತಿ ಚಾಲಿತ ಆಟೋ ರಿಕ್ಷಾ ಸಂಪೂರ್ಣ ಚಾರ್ಜ್ ಆದ ನಂತರ 140 ಕಿ.ಮೀ ಓಡುತ್ತದೆ. ಈ ಸೋಲಾರ್ ಆಟೋ ಪ್ರಯಾಣಿಕರಿಗೆ ಅತ್ಯಂತ ಸುಗಮ ಪ್ರಯಾಣವನ್ನು ಒದಗಿಸುತ್ತದೆ. ನಾನು ದಿನಕ್ಕೆ 1300 ರಿಂದ1500 ರೂ ಗಳಿಸುತ್ತೇನೆ ಎಂದು ಶ್ರೀಕಾಂತ್ ಪಾತ್ರ ಸಂತೋಷ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group