Details About Son in Law Property Rights: ಭಾರತದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ವಾದ ವಿವಾದಗಳು ಸಾಮಾನ್ಯವಾಗಿದೆ. ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಹಲವಾರು ಹೊಸ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ. ಇದೀಗ ನಾವು ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಸಿಗುತ್ತದೆಯೇ..? ಇಲ್ಲವೇ..? ಭಾರತದ ಕಾನೂನು ಹೇಳುದೇನು..? ಅನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿಯೋಣ.
ಹಿಂದೂ ಉತ್ತರಾಧಿಕಾರ ಕಾಯಿದೆ 1956
ಹಿಂದೂ ಉತ್ತರಾಧಿಕಾರ ಕಾಯಿದೆ 1956 (Hindu Succession Act, 1956) ರ ಪ್ರಕಾರ, ಆಸ್ತಿ ಹಂಚಿಕೆಯಲ್ಲಿ ಎರಡು ವಿಧಾನಗಳು, ಅವುಗಳಲ್ಲಿ ಒಂದು ಪಿತ್ರಾರ್ಜಿತ ಆಸ್ತಿ (Ancestral Property), ಇನ್ನೊಂದು ಸ್ವಯಾರ್ಜಿತ ಆಸ್ತಿ(Self-acquired Property). ಈ ಎರಡು ಆಸ್ತಿಯಲ್ಲಿ ಅಳಿಯನಾದವನಿಗೆ ಯಾವುದೇ ಹಕ್ಕು ಇರುವುದಿಲ್ಲ.
1 ) ಸ್ವಯಾರ್ಜಿತ ಆಸ್ತಿಯಲ್ಲಿ ಅಳಿಯನ ಹಕ್ಕು
ಸ್ವಯಾರ್ಜಿತ ಆಸ್ತಿ ಅಂದರೆ ತಂದೆ ಅಥವಾ ತಾಯಿ ತನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿದಂತಹ ಆಸ್ತಿಯಾಗಿರುತ್ತದೆ. ಅಂದರೆ ಆತನ ಹೆಸರಿನಲ್ಲಿರುವ ಬ್ಯಾಂಕ್ ಹಣ, ಜಮೀನು, ಮನೆ ಇತ್ಯಾದಿ. ಇದರಲ್ಲಿ ಅಳಿಯನಾದವನಿಗೆ ಯಾವುದೇ ಹಕ್ಕು ಇರುವುದಿಲ್ಲ. ಇನ್ನು ಮಾವ ವಿಲ್ ಅಥವಾ ಗಿಫ್ಟ್ ಡಿಡ್ ಮೂಲಕ ಅಳಿಯನಿಗೆ ಅಸ್ತಿ ಬರೆದುಕೊಟ್ಟರೆ ಮಾತ್ರ ಆ ಆಸ್ತಿ ಅಳಿಯನಿಗೆ ಸೇರುತ್ತದೆ. ಒಂದು ವೇಳೆ ವಿಲ್ ಬರೆಯದೆ ಮರಣ ಹೊಂದಿದರೆ, ಆ ಆಸ್ತಿ ಆತನ ಪತ್ನಿ ಮತ್ತು ಮಕ್ಕಳಿಗೆ ಸಿಗುತ್ತದೆ. ಇದರಲ್ಲಿ ಅಳಿಯನಿಗೆ ಯಾವುದೇ ಪಾಲು ಸಿಗುವುದಿಲ್ಲ.
2 ) ಪಿತ್ರಾರ್ಜಿತ ಆಸ್ತಿಯಲ್ಲಿ ಅಳಿಯನ ಹಕ್ಕು
ಪಿತ್ರಾರ್ಜಿತ ಆಸ್ತಿ ಅಂದರೆ, ಪೂರ್ವಜರಿಂದ (4 ತಲೆಮಾರಿಂದ) ಬಂದ ಆಸ್ತಿಯಾಗಿರುತ್ತದೆ. ಗಿಫ್ಟ್ ಅಥವಾ ಬೇರೆ ಮೂಲಗಳಿಂದ ಬಂದ ಆಸ್ತಿಯಾಗಿರುತ್ತದೆ. ಇದರಲ್ಲಿ ಮಾವನ ಮಕ್ಕಳಿಗೆ ಹಕ್ಕು ಇರುತ್ತದೆ. ಅಳಿಯನಿಗೆ ಯಾವುದೇ ಹಕ್ಕು ಇರುವುದಿಲ್ಲ.
3 ) ಮಾವ ವಿಲ್ ಬರೆದಿಟ್ಟಿದ್ದರೆ..?
ಮಾವ ತನ್ನ ಸಂಪೂರ್ಣ ಆಸ್ತಿಯನ್ನು ಅಳಿಯನಿಗೆ ಕೊಡುತ್ತೇನೆ ಎಂದು ವಿಲ್ ಬರೆದಿಟ್ಟಿದ್ದರೆ, ಆ ಆಸ್ತಿ ಸಂಪೂರ್ಣವಾಗಿ ಅಳಿಯನಿಗೆ ಸೇರುತ್ತದೆ. ವಿಲ್ ಬರೆಯದಿದ್ದರೆ ಅಳಿಯನಿಗೆ ಯಾವುದೇ ಹಕ್ಕು ಇರುವುದಿಲ್ಲ.
4 ) ಮಾವ ಗಿಫ್ಟ್ ಡಿಡ್ ಮೂಲಕ ಅಳಿಯನಿಗೆ ಆಸ್ತಿ ನೀಡಬಹುದು
ಮಾವ ಜೀವಂತವಾಗಿರುವಾಗ ಗಿಫ್ಟ್ ಡಿಡ್ ಅಥವಾ ರಿಜಿಸ್ಟರ್ಸ್ ಸೆಟಲ್ಮೆಂಟ್ ಡಿಡ್ ಮೂಲಕ ಅಳಿಯನಿಗೆ ಆಸ್ತಿಯನ್ನು ವರ್ಗಾವಣೆ ಮಾಡಬಹುದು. ಇದನ್ನು ಯಾರು ಪ್ರಶ್ನೆ ಮಾಡಲು ಸಾಧ್ಯವಿರುವುದಿಲ್ಲ.
5 ) ಮದುವೆಯ ಮೂಲಕ ವಾರಸತ್ವ ಬರುವುದಿಲ್ಲ
ಭಾರತ ಕಾನೂನಿನ ಪ್ರಕಾರ, ಮದುವೆಯಿಂದ ಬಂದ ಸಂಬಂಧಕ್ಕೆ ವಾರಸತ್ವದ ಹಕ್ಕು ಇರುವುದಿಲ್ಲ. ಗಿಫ್ಟ್, ವಿಲ್ ಅಥವಾ ಸೆಟಲ್ಮೆಂಟ್ ಡಿಡ್ ಮೂಲಕ ಆಸ್ತಿ ನೀಡಿದರೆ ಮಾತ್ರ ಹಕ್ಕು ಇರುತ್ತದೆ.
6 ) ಮಾವ ಸತ್ತ ನಂತರ ಅಳಿಯ ಯಾವ ರೀತಿ ಕ್ಲೇಮ್ ಮಾಡಬೇಕು..?
ವಿಲ್ ಬರೆದಿಟ್ಟಿದ್ದರೆ, ಗಿಫ್ಟ್ ಡಿಡ್ ಇದ್ದರೆ, ಮಾಮ lifetime ನಲ್ಲಿ gift ಮಾಡಿರುವುದಾದರೆ ಮಾತ್ರ ಅಳಿಯನಾದವನು ಕ್ಲೇಮ್ ಮಾಡಬಹುದಾಗಿದೆ.
ಅಳಿಯನಾದವನಿಗೆ ಮಾವನ ಆಸ್ತಿಯಲ್ಲಿ ಯಾವುದೇ ಕಾನೂನು ಬದ್ದ ಹಕ್ಕು ಇರುವುದಿಲ್ಲ, ಮಾವ ಸ್ವ ಇಚ್ಛೆ ಯಿಂದ ಗಿಫ್ಟ್ ಮಾಡಿದರೆ ಅಥವಾ ವಿಲ್ ಬರೆದಿಟ್ಟಿದ್ದರೆ ಅಳಿಯನಿಗೆ ಹಕ್ಕು ಸಿಗುತ್ತದೆ. ಒಟ್ಟಾರೆಯಾಗಿ ವಂಶಪಾರಂಪರ್ಯ ಅಥವಾ ಸ್ವಯಾರ್ಜಿತ ಆಸ್ತಿಯಲ್ಲಿ ಅಳಿಯನಿಗೆ ಯಾವುದೇ ಹಕ್ಕು ಇರುವುದಿಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

