Sonalika: ಒಮ್ಮೆ ಚಾರ್ಜ್ ಮಾಡಿದರೆ ದಿನಪೂರ್ತಿ ಉಳುಮೆ ಮಾಡಬಹುದು, ರೈತರಿಗಾಗಿ ಬಂತು ಅಗ್ಗದ Ev ಟ್ರ್ಯಾಕ್ಟರ್.

Sonalika ಕಂಪನಿ ತನ್ನ ನೂತನ ಮಾದರಿಯ ಟ್ರಾಕ್ಟರ್ ಅನ್ನು ಮಾರುಕಟ್ಟೆಯಲ್ಲಿ ರೈತರಿಗಾಗಿ ಪರಿಚಯಿಸಿದೆ.

Sonalika Electric Tractor 2023: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳು ಪಾರುಪತ್ಯ ಸಾಧಿಸಿವೆ ಎನ್ನಬಹುದು. Electric Car ಗಳು, ಬೈಕ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಕ್ರೇಜ್ ಮೂಡಿಸಿದ್ದು, ಬೇಡಿಕೆ ಕೊಡ ಇಂಧನ ಚಾಲಿತ ವಾಹನಗಳಿಗಿಂತ ಹೆಚ್ಚಿದೆ ಎನ್ನಬಹುದು. ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ರೂಪಾಂತರದಲ್ಲಿ Tractor ಕೂಡ ಬಿಡುಗಡೆಯಾಗಿದೆ.

ಡೀಸೆಲ್ ಮತ್ತು ಪೆಟ್ರೋಲ್ ಅಗತ್ಯವನ್ನು ಕಡಿಮೆ ಮಾಡಲು ಇದೀಗ ಹೊಸ ಮಾದರಿಯಲ್ಲಿ Tractor ಬಿಡುಗಡೆಯಾಗಿದೆ. Tractor ಗಳು ಮುಖ್ಯವಾಗಿ ರೈತಸ್ನೇಹಿಯಾಗಿದೆ. ಸದ್ಯ ದೇಶದಲ್ಲಿ ಕಚ್ಚಾ ತೈಲಗಳ ವೆಚ್ಚ ಹೆಚ್ಚುತ್ತಿದೆ ಹಿನ್ನಲೆ ರೈತಲೂ ಕಡಿಮೆ ವೆಚ್ಚದ Tractor ಖರೀದಿಗೆ ಮನಸ್ಸು ಮಾಡುವುದಂತೂ ಖಂಡಿತ. ಟ್ರಾಕ್ಟರ್ ತಯಾರಿಕೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿರುವ Sonalika ಕಂಪನಿ ತನ್ನ ನೂತನ ಮಾದರಿಯ ಟ್ರಾಕ್ಟರ್ ಅನ್ನು ಮಾರುಕಟ್ಟೆಯಲ್ಲಿ ರೈತರಿಗಾಗಿ ಪರಿಚಯಿಸಿದೆ.

sonalika electric tractor
Image Credit: Economictimes

ಮಾರುಕಟ್ಟೆಯಲ್ಲಿ ರೈತ ಸ್ನೇಹಿ ಅಗ್ಗದ EV ಟ್ರ್ಯಾಕ್ಟರ್ ಬಿಡುಗಡೆ
Sonalika Electric Tractor ITL ಹೆಸರಿನಲ್ಲಿ ಇದೀಗ Inter National Tractor limited ಅತ್ಯಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ Tractor ಅನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಅನ್ನು ಮುಂದಿನ ಮೂರು ವರ್ಷಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಕಂಪನಿ ಯೋಜನೆಯನ್ನು ರೂಪಿಸಿದೆ. ಐಟಿಎಲ್‌ ಸದ್ಯದಲ್ಲಿಯೇ ಐದು ಹೊಸ ಟ್ರ್ಯಾಕ್ಟರ್‌ ಗಳನ್ನು ಬಿಡುಗಡೆ ಮಾಡಲಿದ್ದು ಎಲೆಕ್ಟ್ರಿಕ್‌ ಟ್ರ್ಯಾಕ್ಟರ್‌ ಗಳನ್ನು ಎಸ್‌ ಬಿ ಮಾದರಿಯಲ್ಲಿ ಬಿಡುಗಡೆ ಮಾಡಲಿದೆ.

Sonalika Electric Tractor
ಸದ್ಯ Sonalika Electric Tractor America, Europe, Africa and South America ದಲ್ಲಿ ಲಭ್ಯವಿದೆ. ITL ಸೋಲಿಸ್ ಮಾದರಿಯಲ್ಲಿ Electric Tractor ಲಭ್ಯವಿದ್ದು, S series, C series, H series and N series ಟ್ರ್ಯಾಕ್ಟರ್‌ ಬಿಡುಗಡೆ ಆಗಲಿದೆ. SV ಸರಣಿಯಲ್ಲಿ ಟ್ರಾಕ್ಟರ್ ಗಳು ಅತ್ಯಂತ ವೇಗದ ಚಾರ್ಜಿಂಗ್ ಸಪೋರ್ಟ್ ನೀಡಲಿದೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ಟ್ರಾಕ್ಟರ್ ಸಂಪೂರ್ಣ ಚಾರ್ಜ್ ಮಾಡಲು ಕನಿಷ್ಠ 8 ಗಂಟೆಯ ಸಮಯವನ್ನು ತೆಗೆದುಕೊಳ್ಳುತ್ತದೆ.

Sonalika Electric Tractor price
Image Credit: Economictimes

Sonalika Electric Tractor price
ಆದರೆ Sonalika SV ಟ್ರ್ಯಾಕ್ಟರ್‌ ಕೇವಲ 3 ರಿಂದ 3 .5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಜರ್ಮನ್ ವಿನ್ಯಾಸ ಎಟ್ರಾಕ್ ಮೋಟಾರ್ ಹೆಚ್ಚಿನ ಶಕ್ತಿ ಸಾಂದ್ರತೆ ಮತ್ತು ಗರಿಷ್ಠ ಟಾರ್ಕ್ ಅನ್ನು 24.93 kmph ಮತ್ತು 8 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೊಂದಿಗೆ ನೀಡುತ್ತದೆ. ಸೋನಾಲಿಕಾ ಎಲೆಕ್ಟ್ರಿಕ್ ಟ್ರಾಕ್ಟರ್ 5 ವರ್ಷಗಳ ವಾರಂಟಿಯನ್ನು ನೀಡುತ್ತದೆ. ರೈತರಿಗೆ ಈ ಎಲೆಕ್ಟ್ರಿಕ್ ಟ್ರಾಕ್ಟರ್ ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಮಾರುಕಟ್ಟೆಯಲ್ಲಿ Sonalika Electric Tractor ರೈತರಿಗೆ 5 .91 ರಿಂದ 6 .22 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group