Sonia Gandhi Hospitalized: ಆಸ್ಪತ್ರೆಗೆ ದಾಖಲಾದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ತೀವ್ರ ನಿಗಾ ಘಟಕದಲ್ಲಿ ಸೋನಿಯಾ ಗಾಂಧಿ.

Sonia Gandhi Admit Hospital: ಸೋನಿಯಾ ಗಾಂಧಿ (Sonia Gandhi) ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ. ಕಾಂಗ್ರೆಸ್ ಪಕ್ಷದ ಪ್ರಗತಿಯಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿರುವ ಸೋನಿಯಾ ಗಾಂಧಿ ಅವರು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ.

ಸದ್ಯ ಮುಂದಿನ ಚುನಾವಣೆಯ ಪ್ರಚಾರದಲ್ಲಿ ಇರುವ ಸೋನಿಯಾ ಗಾಂಧಿ ಅವರು ಈಗ ಆಸ್ಪತ್ರೆಯನ್ನ ಸೇರಿಕೊಂಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಾಗಿದೆ.

Sonia Gandhi admitted to hospital due to breathing problem
Image Credit: instagram

ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ
ಉಸಿರಾಟದ ಸಮಸ್ಯೆ ಕಾರಣ ಸೋನಿಯಾ ಗಾಂಧಿ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ದಿಡೀರನೆ ಸೋನಿಯಾ ಗಾಂಧಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿದ್ದು ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

Sonia Gandhi admitted to Delhi's Ganga Ram Hospital
Image Credit: instagram

ಜ್ವರ ಕಾರಣ ಉಸಿರಾಟದ ಸಮಸ್ಯೆ
ಸೋನಿಯಾ ಗಾಂಧಿ ಅವರಿಗೆ ಜ್ವರ ಕಾಣಿಸಿಕೊಂಡ ಅವರ ಆರೋಗ್ಯದಲ್ಲಿ ಏರುಪೇರಾಗು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಸೋನಿಯಾ ಗಾಂಧಿ ಅವರನ್ನ ದೆಹಲಿಯ ಗಂಗಾ ರಾಮ್ (Ganga Ram) ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Sonia Gandhi is suffering in the intensive care unit of the hospital
Image Credit: instagram

ಭಯಪಡುವ ಅಗತ್ಯ ಇಲ್ಲ.
ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಸ್ಥಿರತೆ ಇದ್ದು ಯಾರು ಕೂಡ ಭಯಪಡುವ ಅಗತ್ಯ ಇಲ್ಲ ಎಂದು ವೈದ್ಯ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ನಾಳೆ ಅವರನ್ನ ಡಿಸ್ಚಾರ್ಜ್ ಕೂಡ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group

Sonia Gandhi is undergoing treatment at Delhi's Ganga Ram Hospital due to fever and respiratory problems
Image Credit: instagram

ಕೆಲವು ಸಮಯದ ಹಿಂದೆ ಶ್ವಾಸಕೋಶದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು ಸೋನಿಯಾ ಗಾಂಧಿ ಅವರು ಈಗ ಉಸಿರಾಟದ ಸಮಸ್ಯೆಯ ಕಾರಣ ಆಸ್ಪತ್ರೆಗೆ ದಾಖಲು ಆಗಿದ್ದಾರೆ.

Join Nadunudi News WhatsApp Group