Sonu Srinivas Gowda: ದಿಡೀರನೆ ಲೈವ್ ಬಂದು ಗಳಗಳನೆ ಕಣ್ಣೀರು ಹಾಕಿದ್ದು ಯಾಕೆ…? ನೋವು ಹೇಳಿಕೊಂಡ ಸೋನು.
ಟ್ರೊಲ್ ಮಾಡುವವರ ಬಳಿ ಕಣ್ಣೀರಿಟ್ಟು ಮನವಿ ಮಾಡಿಕೊಂಡ ಸೋನು.
Sonu Srinivas Gowda Live: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೈಲೈಟ್ ಆಗುವ ಸೋನು ಶ್ರೀನಿವಾಸ್ ಗೌಡ (Sonu Shrinivas Gowda) ಅವರು ಇತ್ತೀಚಿಗೆ ಹೆಚ್ಚು ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಗುರಿತಿಸಿಕೊಂಡಿದ್ದ ಸೋನು ನಂತರ ಬಿಗ್ ಬಾಸ್ ಕನ್ನಡ ಓಟಿಟಿಯಿಂದ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಕಮೆಂಟ್ ಗಿಂತ ನೆಗೆಟಿವ್ ಬರುವವರ ಪೈಕಿ ಸೋನು ಶ್ರೀನಿವಾಸ್ ಗೌಡ ಅವರು ಮೊದಲ ಸ್ಥಾನದಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಒಂದಲ್ಲ ಒಂದು ವಿಚಾರವಾಗಿ ನೆಟ್ಟಿಗರು ಸೋನು ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಇನ್ನು ಬಿಗ್ ಬೋಸ್ ಓಟಿಟಿಗೆ ಎಂಟ್ರಿ ಕೊಟ್ಟ ಬಳಿಕ ಸೋನು ಶ್ರೀನಿವಾಸ ಗೌಡ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ.
ಇನ್ನು ಎಷ್ಟೇ ಟ್ರೊಲ್ ಮಾಡಿದರು ಕೂಡ ಸೋನು ತಲೆಕೆಡಿಸಿಕೊಳ್ಳದೆ ಹೊಸ ಹೊಸ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಈ ಬಾರಿ ಸೋನು ಶ್ರೀನಿವಾಸ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ತಮ್ಮ ನೋವನು ಹೇಳಿಕೊಂಡಿದ್ದಾರೆ. ಟ್ರೊಲ್ ಮಾಡುವವರ ಬಳಿ ಸೋನು ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದಾರೆ.
ದಿಡೀರನೆ ಲೈವ್ ಬಂದು ಕಣ್ಣೀರು ಹಾಕಿದ ಸೋನು ಶ್ರೀನಿವಾಸ ಗೌಡ
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ನೆಗೆಟಿವ್ ಕಮೆಂಟ್ ಹಾಗೂ ಟ್ರೋಲ್ ನಿಂದಾಗಿ ಸೋನು ಶ್ರೀನಿವಾಸ ಗೌಡ ಅವರು ನಿನ್ನೆ ಫೇಸ್ ಬುಕ್ ಹಾಗು ಯೂಟ್ಯೂಬ್ ನಲ್ಲಿ ಅಳುತ್ತ ವಿಡಿಯೋ ಹಂಚಿಕೊಂಡಿದ್ದಾರೆ. ಬ್ಯಾಡ್ ಕಮೆಂಟ್ಸ್ ಮಾಡುವಂತಹ ತಪ್ಪು ನಾನು ಏನು ಮಾಡಿದ್ದೇನೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನ್ನ ಅಮ್ಮ ಯೂಟ್ಯೂಬ್ ನಲ್ಲಿ ವಿಡಿಯೋ ನೋಡುವಾಗ ನನಗೆ ಮಾಡಿದ ಟ್ರೋಲ್ ವಿಡಿಯೋ ನೋಡಿದ್ದಾರೆ. ಈ ವೇಳೆ ನನ್ನ ಅಮ್ಮ ಅತ್ತಿದ್ದಾರೆ.
ಅದೊಂದು ವಯಸ್ಸಿನಲ್ಲಿ ನಾನು ತಪ್ಪು ಮಾಡಿದ್ದೇನೆ. ಆದರೆ ಅದನ್ನು ತಿದ್ದಿಕೊಳ್ಳೋಕೆ ಅವಕಾಶ ಕೊಡಿ. ಅಮ್ಮನ ಕಣ್ಣೀರು ನೋಡಿ ನನಗೆ ತುಂಬಾ ಬೇಸರವಾಗಿದೆ. ನನ್ನಿಂದ ನನ್ನ ಅಮ್ಮ ಹುಷಾರು ತಪ್ಪಿದ್ದಾರೆ. ಹಾಗಾಗಿ ನನ್ನ ಟ್ರೊಲ್ ಮಾಡಬೇಡಿ ಪ್ಲೀಸ್. ನನ್ನನು ಟ್ರೋಲ್ ಮಾಡಿ ಆದರೆ ನನ್ನ ಫ್ಯಾಮಿಲಿ ಬಗ್ಗೆ ಮಾತನಾಡಬೇಡಿ. ಯಾರ್ಯಾರಿಗೋ ಸಾವು ಬರುತ್ತದೆ ನಿಂಗೆ ಬರುತ್ತಿಲ್ಲ ಎಂದೆಲ್ಲ ಹೇಳುತ್ತೀರಿ.
ನನ್ನನು ಯಾಕೆ ಬೇರೆಯವರಿಗೆ ಹೋಲಿಸುತ್ತಿರಿ
ನಾನು ನಿಮಗೆ ಏನು ಮೋಸ ಮಾಡಿದ್ದೇನೆ. ನನ್ನ ಜೀವನದಲ್ಲಿ ಆದ ತಪ್ಪಿಗೆ ನಾನು ಪಶ್ಚತ್ತಾಪ ಪಡುತ್ತಿದ್ದೆನೇ. ತೀರಾ ಟ್ರೊಲ್ ಆಗೋದನ್ನು ಯಾರು ಸಹಿಸೋಲ್ಲ. ನಾನು ಮನೆಯವರಿಗೋಸ್ಕರ ಸಹಿಸಿಕೊಂಡಿದ್ದೇನೆ. ಇವತ್ತು ನಾನು ಕಣ್ಣೀರು ಹಾಕಿ ವಿಡಿಯೋ ಮಾಡುತ್ತಿರುವುದು ನನ್ನ ಫ್ಯಾಮಿಲಿಗೋಸ್ಕರ. ನನ್ನ ಯಾಕೆ ಬೇರೆಯವರಿಗೆ ಹೋಲಿಸುತ್ತೀರಾ.
ನಾನು ಶೋಕಿ ಮಾಡುತ್ತೇನೆ ಎನ್ನುತ್ತೀರಿ. ನಮ್ಮ ಅಂಗಡಿಯಲ್ಲಿ ಉಳಿದ ಹಣ್ಣು ತರಕಾರಿಗಳನ್ನು ಅನಾಥಾಶ್ರಮಕ್ಕೆ ಕೊಡುತ್ತೇವೆ ಅದನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿಲ್ಲ. ಈ ವಿಡಿಯೋ ನೋಡಿದ ಮೇಲೇ ನನ್ನ ಬಗ್ಗೆ ಟ್ರೋಲ್ ಗಳು ಕಡಿಮೆ ಆಗುತ್ತದೆ ಎಂದು ಭಾವಿಸುತ್ತೇನೆ. ನನ್ನ ನೋವನ್ನು ನಾನು ಹೊರಗೆ ಹಾಕಿಕೊಂಡಿದ್ದೇನೆ. ಇದನ್ನು ನಾಟಕ ಎಂದುಕೊಂಡರೆ ಅದನ್ನು ಸಹಿಸಿಕೊಳ್ಳುತ್ತೇನೆ ಎಂದಿದ್ದಾರೆ.