Sonu Gowda Shoping: ಸೋನು ಗೌಡ ಶಾಪಿಂಗ್ ಬಿಲ್ ಕಂಡು ದಂಗಾದ ಜನರು, ಮಾಲ್ ನಲ್ಲಿ ಭರ್ಜರಿ ಶಾಪಿಂಗ್.
ತನ್ನ ಶಾಪಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸೋನು ಗೌಡ.
Sonu Srinivas Gowda Shopping: ರೀಲ್ಸ್ ಮೂಲಕ ಸಖತ್ ಫೇಮಸ್ ಆದ ಸೋನು ಗೌಡ (Sonu Gowda) ನಂತರ ಬಿಗ್ ಬಾಸ್ ಸೀಸನ್ 9 ರಲ್ಲಿ ಸ್ಪರ್ಧಿಸಿದರು. ಬಿಗ್ ಬಾಸ್ ನಿಂದ ಸೋನು ಗೌಡ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಸೋನು ಗೌಡ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ.
ಇದರಲ್ಲಿ ತಮ್ಮ ದಿನಚರಿ, ಮನೆ, ರೀಲ್ಸ್ ಮತ್ತು ಲೈಫ್ ಸ್ಟೈಲ್ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಸೋನು ಗೌಡ ತಮ್ಮ ಶಾಪಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ.
ತನ್ನ ಶಾಪಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸೋನು ಗೌಡ
ಕೆಲವು ದಿನಗಳ ಹಿಂದೆ ಸೋನು ಗೌಡ ಬರ್ತ್ಡೇ ಆಚರಿಸಿಕೊಂಡರು. ಸದಾ ಬ್ರಾಂಡ್ ಬಟ್ಟೆಗಳನ್ನು ಹಾಕುವುದು ನಾನು ಎನ್ನುವ ಸೋನು ಈ ಬಾರಿ ವಿಡಿಯೋ ಮಾಡುವ ಮೂಲಕ ತಮ್ಮ ಶಾಪಿಂಗ್ ನ ಜನರಿಗೆ ತೋರಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ನಲ್ಲಿ H&M ಎನ್ನುವ ಬ್ರಾಂಡ್ ನಲ್ಲಿ ಬಟ್ಟೆ ಖರೀದಿಸಿದ್ದಾರೆ.
ಒಂದು ಜೀನ್ಸ್ ಪ್ಯಾಂಟಿಗೆ ಮೂರೂ ಸಾವಿರ ರೂಪಾಯಿ. ಒಮ್ಮೆ ನೋಡಿ ಗಾಬರಿ ಆದ ಸೋನು ಸುಮ್ಮನಾಗಿ ಬಜೆಟ್ ಶಾಪಿಂಗ್ ಆರಂಭಿಸಿದ್ದಾರೆ. ಮೂರೂ ನಾಲ್ಕು ಬಟ್ಟೆಗಳನ್ನು ಟ್ರಯಲ್ ಮಾಡಿ ನೋಡಿ ಸುಮಾರು 6 ಸಾವಿರ ರೂಪಾಯಿ ಬಿಲ್ ಮಾಡುತ್ತಾರೆ. ಜನರು ನಂಬುವುದಿಲ್ಲ ಎಂದು ಕೂಡ ತೋರಿಸಿದ್ದಾರೆ.
ದುಬಾರಿ ಕಾಫಿಯನ್ನು ಕುಡಿದ ಸೋನು ಗೌಡ
ಇದಾದ ಬಳಿಕ ಅತಿ ದುಬಾರಿ ಕಾಫಿಗಳನ್ನು ಮಾರು ಸ್ಟಾರ್ ಬಗ್ಸ್ ಗೆ ಭೇಟಿ ನೀಡಿ ತಮ್ಮ ನೆಚ್ಚಿನ ಕಾಫಿ ಕುಡಿದಿದ್ದಾರೆ. ಸೋನು ಡಯಟ್ ಮಾಡುತ್ತಿರುವ ಕಾರಣ ಅಲ್ಲಿದ್ದ ರುಚಿ ರುಚಿ ಆಹಾರ ತಿನ್ನುವುದಕ್ಕೆ ಆಗುವುದಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾರೆ.
ಕಾಫಿ ಕುಡಿದರೆ ತುಂಬಾ ಖುಷಿಯಾಗುತ್ತದೆ ಆದರೆ ಅದರಲ್ಲಿರುವ ನೊರೆ ಕಂಡರೆ ನನಗೆ ಆಗುವುದಿಲ್ಲ ಎಂದು ಬೇಸರ ಕೂಡ ಮಾಡಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಕಾಮೆಂಟ್ ಬಾಕ್ಸ್ ನಲ್ಲಿ ಯಾರೊಬ್ಬರೂ ನೆಗೆಟಿವ್ ಕಾಮೆಂಟ್ ಮಾಡಿಲ್ಲ. ಬದಲಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.