Ads By Google

Sony Earbuds: ಮಾರುಕಟ್ಟೆಗೆ ಬಂತು ಅಗ್ಗದ ಸೋನಿ ಹೊಸ ಇಯರ್ ಬಡ್ಸ್, ಮಾರುಕಟ್ಟೆಯಲ್ಲಿ ಸಕತ್ ಬೇಡಿಕೆ

Sony INZONE Earbuds Launch In India

Image Credit: Original Source

Ads By Google

Sony INZONE Earbuds Launch In India: ಭಾರತೀಯ ಮಾರುಕಟ್ಟೆಯಲ್ಲಿ Sony ಕಂಪನಿಯು ವಿವಿಧ ಮಾದರಿಯ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಪರಿಚಯಿಸುತ್ತಿದೆ. Sony ಬ್ರಾಂಡ್ ಹೆಚ್ಚಾಗಿ ಮಾರುಕಟ್ಟೆಯಲ್ಲಿ Earbud ಗಳನ್ನೂ ಪರಿಚಯಿಸುತ್ತದೆ.

ಸದ್ಯ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ Earbud ಗಳನ್ನೂ ಬಳಸುತ್ತಾರೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸೋನಿ ಕಂಪನಿಯು ಹೊಸ ಹೊಸ ಇಯರ್ ಬಡ್ ಗಳನ್ನೂ ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ಸೋನಿ ಕಂಪನಿಯ ಈ ಇಯರ್ ಬಡ್ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಸೋನಿ ಕಂಪನಿ ನೂತನವಾಗಿ ಪರಿಚಯಿಸಿರುವ ಇಯರ್ ನ ಬಡ್ ನ ಬಗ್ಗೆ ಮಹಿತಿ ಇಲ್ಲಿದೆ.

Image Credit: Timesnownews

ಹೊಸ ಇಯರ್ ಬಡ್ ಲಾಂಚ್ ಮಾಡಿದ ಸೋನಿ
ಭಾರತೀಯ ಮಾರುಕಟ್ಟೆಯಲ್ಲಿ ವೈಶಿಷ್ಟ್ಯ ವಿನ್ಯಾಸ ಹಾಗೂ ಅತ್ಯಾಧುನಿಕ ಫೀಚರ್ ನೊಂದಿಗೆ ಸೋನಿ ಕಂಪನಿಯು ಸಾಕಷ್ಟು ಇಯರ್ ಬಡ್ ಗಳನ್ನು ಪರಿಚಯಿಸುತ್ತ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ಸೋನಿ ಕಂಪನಿಯು INZONE Buds ಅನ್ನು ಬಿಡುಗಡೆ ಮಾಡಿದೆ. ಗೇಮಿಂಗ್ ಮಾಡುವಾಗ ಅನಗತ್ಯ ಶಬ್ದವನ್ನು ಫಿಲ್ಟರ್ ಮಾಡಲು ಈ ಇಯರ್‌ ಬಡ್‌ ಗಳು ಸಕ್ರಿಯ ಶಬ್ದ ರದ್ದತಿಯೊಂದಿಗೆ ಬರುತ್ತವೆ. ಈ ಗೇಮಿಂಗ್ ಇಯರ್‌ ಬಡ್‌ ಗಳು 12 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುವುದು ವಿಶೇಷವಾಗಿದೆ. ಈ ಇಯರ್ ಬಡ್ ನ ಫೀಚರ್ ನ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Sony INZONE Earbuds
Sony INZONE ಗೇಮಿಂಗ್ ಇಯರ್‌ ಬಡ್‌ ಗಳು ರಬ್ಬರ್ ಇಯರ್ ಟಿಪ್ಸ್‌ ನೊಂದಿಗೆ ಇನ್-ಇಯರ್ ವಿನ್ಯಾಸವನ್ನು ಹೊಂದಿವೆ. ಇದು ಬಳಕೆದಾರರ ಕಿವಿಯ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ಇಯರ್‌ ಬಡ್‌ ಗಳು ಈಗ 8.4mm ಆಡಿಯೊ ಡ್ರೈವರ್‌ ಗಳನ್ನು ಹೊಂದಿವೆ ಮತ್ತು ANC ಅನ್ನು ಬೆಂಬಲಿಸುತ್ತವೆ. ಇದಲ್ಲದೆ ಗೇಮಿಂಗ್ ಸಮಯದಲ್ಲಿ ಯಾವುದೇ ಧ್ವನಿ ವಿಳಂಬವನ್ನು ತಪ್ಪಿಸಲು ಇಯರ್‌ ಬಡ್‌ ಗಳು 30ms ಗಿಂತ ಕಡಿಮೆ ಲೇಟೆನ್ಸಿಯನ್ನು ಹೊಂದಿವೆ.

Image Credit: Engadget

2 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುವ ಇಯರ್ ಬಡ್ ನ ಮಾರುಕಟ್ಟೆ ಬೆಲೆ ಎಷ್ಟು.?
Sony INZONE ಇಯರ್‌ ಬಡ್‌ ಗಳು ಟಚ್ ಕಂಟ್ರೋಲ್ ಗಳಿಗೆ ಬೆಂಬಲವನ್ನು ಹೊಂದಿವೆ. ಇದು ವಾಲ್ಯೂಮ್ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಸರಿಹೊಂದಿಸಲು ಅಥವಾ ಕಸ್ಟಮೈಸ್ ಮಾಡಲು ಸಾಧ್ಯವಾಗಿಸುತ್ತದೆ. ಈ ಇಯರ್‌ ಬಡ್‌ ಗಳು 12 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತವೆ. ಆದರೆ ಚಾರ್ಜಿಂಗ್ ಕೇಸ್‌ ನೊಂದಿಗೆ ಜೋಡಿಸಿದಾಗ ಇಯರ್‌ ಬಡ್‌ ಗಳು 24 ಗಂಟೆಗಳ ವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ. ಇದು ಚಾರ್ಜ್ ಮಾಡಲು USB-C ಪೋರ್ಟ್ ಅನ್ನು ಬೆಂಬಲಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ Sony INZONE Earbuds ಸರಿಸುಮಾರು 17990 ರೂ. ಬೆಲೆಯನ್ನು ಹೊಂದಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in