Speaker: ಅತೀ ಕಡಿಮೆ ಬೆಲೆಗೆ ಅತೀ ಚಿಕ್ಕ ಸ್ಪೀಕರ್ ಬಿಡುಗಡೆ ಮಾಡಿದ ಸೋನಿ, ಜೇಬಿನಲ್ಲಿ ಇಟ್ಟುಕೊಂಡು ತಿರುಗಾಡಿ.

ಎಲ್ಲಾ ಹವಾಮಾನದಲ್ಲಿಯೂ ಸಹ ಉತ್ತಮ ಬಾಳಿಕೆ ಬರುವ ವೈರ್ ಲೆಸ್ ಸ್ಪೀಕರ್ ಬಿಡುಗಡೆ.

Sony SRS XB 100 Wireless Speaker: ಇದೀಗ ಸೋನಿ (Sony) ಸಂಸ್ಥೆಯಿಂದ ಸಣ್ಣ ವೈರ್ ಲೆಸ್ ಸ್ಪೀಕರ್ ಒಂದು ಬಿಡುಗಡೆಯಾಗಿದೆ. ಆಡಿಯೋ ಹಾಗು ಟೆಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಸೋನಿ ಸಂಸ್ಥೆಯು ಹೊಸದಾಗಿ ಈಗ ಪುಟ್ಟ ವೈರ್ ಲೆಸ್ ಸ್ಪೀಕರ್ ಅನ್ನು ಲಾಂಚ್ ಮಾಡಿದೆ. ಇದೀಗ SRS XB 100 ವೈರ್ ಲೆಸ್ ಸ್ಪೀಕರ್ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

Sony SRS XB 100 Wireless Speaker Price
Image Credit: Digit

ಸೋನಿ SRS XB 100 ವೈರ್ ಲೆಸ್ ಸ್ಪೀಕರ್
SRS XB 100 ವೈರ್ ಲೆಸ್ ಸ್ಪೀಕರ್ 16 ಗಂಟೆಯವರೆಗೆ ಪ್ರಬಲ ಬ್ಯಾಟರಿ ಬ್ಯಾಕಪ್ ಅವಧಿಯನ್ನು ಹೊಂದಿದೆ. ಇನ್ನು ಈ ಸ್ಪೀಕರ್ IP67 ರೇಟಿಂಗ್ ಒಳಗೊಂಡಿದೆ. ಈ ಸ್ಪೀಕರ್ ಯಾವುದೇ ಹವಾಮಾನದಲ್ಲಿಯೂ ಸಹ ಉತ್ತಮ ಬಾಳಿಕೆ ಮತ್ತು ಜನ ಮತ್ತು ಧೂಳು ನಿರೋಧಕ ವಿನ್ಯಾಸ ಹೊಂದಿದೆ.

ಹಾಗೆಯೇ ಇದು ಕಾಂಪ್ಯಾಕ್ಟ್ ಆಗಿದ್ದು, ಪರ್ಟೆಬಲ್ ವಿನ್ಯಾಸ ಸಹ ಪಡೆದಿದೆ. ಸೋನಿ SRS-XB100 ಸ್ಪೀಕರ್ ಶಕ್ತಿಶಾಲಿ ಧ್ವನಿಗಾಗಿ ಪ್ಯಾಸಿವ್ ರೇಡಿಯೇಟರ್ ಅಳವಡಿಸಲಾಗಿದೆ. ವಾಲ್ಯೂಮ್ ಹೆಚ್ಚಿಗೆ ಮಾಡಿದಾಗಲೂ ಸ್ಪಷ್ಟ ಧ್ವನಿ ಮಾಧುರ್ಯ ಒದಗಿಸುವ ಸೌಲಭ್ಯವನ್ನು ಈ ಸ್ಪೀಕರ್ ಪಡೆದಿದೆ. ಇದು ಸೌಂಡ್ ಡಿಪ್ಯೂಷನ್ ಪ್ರೊಸೆಸರ್ ಸೌಅಭ್ಯ ಹೊಂದಿದೆ.

Sony SRS XB 100 Wireless Speaker Price
Image Credit: Firenews

ಸೋನಿ SRS XB 100 ವೈರ್ ಲೆಸ್ ಸ್ಪೀಕರ್ ನ ಬೆಲೆ
ಈ ಸ್ಪೀಕರ್ ಕಾಂಪ್ಯಾಕ್ಟ್ ಆಗಿದ್ದು ಮತ್ತು ಹಗುರವಾದ ವಿನ್ಯಾಸ ಹೊಂದಿದೆ. ಹೀಗಾಗಿ ಇದನ್ನು ಸುಲಭವಾಗಿ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದೆ. ಅಧಿಕ ಸ್ಟಿರಿಯೊ ಸೌಂಡ್ ಗಾಗಿ 2 ನೇ ಸ್ಪೀಕರ್ ಜೋಡಿಸುವ ಆಯ್ಕೆಯಾನ್ ಸಾ ಸೋನಿಯಾ ಈ ಸ್ಪೀಕರ್ ಪಡೆದುಕೊಂಡಿದೆ.

ಇನ್ನು ಈ ಸ್ಪೀಕರ್ ಗೆ ಸ್ಮಾರ್ಟ್ ಫೋನ್ ಅಥವಾ ಅಥವಾ ಟ್ಯಾಬ್ಲೆಟ್ ನಂತಹ ಬ್ಲೂಟೂಥ್ ಸಕ್ರಿಯಗೊಳಿಸಿದ ಡಿವೈಸ್ ಗಳನ್ನೂ ಸುಲಭವಾಗಿ ಓಡಿಸಬಹುದಾಗಿದೆ. ಹಾಗೆಯೇ ಈ ಸ್ಪೀಕರ್ ಅಂತರ್ನಿರ್ಮಿತ ಮೈಕ್ರೊಫೋನ್ ಸೌಲಭ್ಯ ಕೂಡ ಪಡೆದಿದೆ. ಇನ್ನು ಈ ಸ್ಪೀಕರ್ ನ ಬೆಲೆ 4,990 ರೂಪಾಯಿ ಆಗಿದೆ.

Join Nadunudi News WhatsApp Group

Join Nadunudi News WhatsApp Group