Price Hike: ಗ್ಯಾಸ್ ಬೆಲೆ ಇಳಿಕೆ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ, ಈ ವಸ್ತುಗಳ ಬೆಲೆ ಭರ್ಜರಿ ಏರಿಕೆ.
ಬೆಲೆ ಏರಿಕೆಗೆ ತತ್ತರಿಸಿರುವ ಜನರಿಗೆ ಇನ್ನೊಂದು ಬೇಸರದ ಸುದ್ದಿ.
Sorghum Price Hike Update: ಜನಸಾಮಾನ್ಯರು 2023 ರ ಆರಂಭದಿಂದಲೂ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇನ್ನು ಏಪ್ರಿಲ್ 1, 2023 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಈ ಬಾರಿಯ ಹಣಕಾಸು ವರ್ಷ ಹೆಚ್ಚಿನ ಹಣದುಬ್ಬರತೆಯನ್ನು ನೀಡಿದೆ.
ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚು ಏರಿಕೆಯಾಗುತ್ತಿದೆ. ಜನರು ಯಾವುದೇ ವಸ್ತುಗಳನ್ನು ಖರೀದಿಸಬೇಕಿದ್ದರು ಹೆಚ್ಚಿನ ಹಣ ನೀಡಬೇಕಾಗಿದೆ. ಈ ಬಾರಿ ಹಣಕಾಸು ವರ್ಷ ಜನರ ಜೇಬಿಗೆ ಬಾರಿ ಪ್ರಮಾಣದಲ್ಲಿ ಕತ್ತರಿ ಹಾಕಿದೆ.
ಟೊಮೇಟೊ ದರ ಏರಿಕೆಯ ಬೆನ್ನಲ್ಲೇ ಜನತೆಗೆ ಮತ್ತೊಂದು ಶಾಕ್
ಇತೀಚೆಗಷ್ಟೇ ದೇಶದಲ್ಲಿ ಟೊಮೊಟೊ ದರ ಗಣನೀಯ ಏರಿಕೆ ಕಂಡಿದೆ. ಮೊದಲು 20 ರೂ. ಗೆ ಒಂದು ಕೆಜಿ ಟೊಮೊಟೊ ಸಿಗುತ್ತಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ 20 ರೂ. ಗೆ ಒಂದು ಟೊಮೊಟೊ ಕೂಡ ಸಿಗದಂತಾಗಿದೆ. ಟೊಮೊಟೊ ಕೆಜಿಗೆ 200 ರಿಂದ 250 ರೂ. ಆಗಿದ್ದು ನಿಮಗೆಲ್ಲ ತಿಳಿದೇ ಇದೆ. ಟೊಮೊಟೊ ಬೆಲೆಯ ಏರಿಕೆಯ ಬೆನ್ನಲ್ಲೇ ಹೋಟೆಲ್ ತಿನಿಸುಗಳ ಬೆಲೆ ಕೂಡ ಏರಿಕೆಯಾಗಿದೆ.
ಹೋಟೆಲ್ ನಲ್ಲಿ ಹೆಚ್ಚಿನ ಆಹಾರ ಪದಾರ್ಥಗಳ ತಯಾರಿಕೆಗೆ ಟೊಮೇಟೊ ಹೆಚ್ಚು ಬಳಕೆಗೆ ಅಗತ್ಯವಿರುವ ಕಾರಣ ಹೋಟೆಲ್ ತಿನಿಸುಗಳ ದರ ಕೂಡ ಏರಿಕೆಯಾಗಿದೆ. ಸದ್ಯ ಟೊಮೇಟೊ ಬೆಲೆ ಇಳಿಕೆ ಆಗಿದ್ದು ಇದರ ನಡುವೆ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡುವುದರ ಮೂಲಕ ಜನರಿಗೆ ಸಂತಸದ ಸುದ್ದಿಯನ್ನ ನೀಡಿದೆ ಎಂದು ಹೇಳಬಹುದು.
ಜನಸಾಮಾನ್ಯರಿಗೆ ಮತ್ತೊಂದು ಬೇಸರದ ಸುದ್ದಿ
ಇನ್ನು ಈಗಾಗಲೇ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿರುವ ಜನತೆಗೆ ಇದೀಗ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಈ ಎಲ್ಲಾ ನಿತ್ಯ ಬಳಕೆಯ ಆಹಾರ ದಾನ್ಯಗಳ ಬೆಲೆ ಕೂಡ ಏರಿಕೆಯಾಗಿದೆ. ಇತ್ತೀಚಿನ ಹಣದುಬ್ಬರತೆ ಜನರ ಆರ್ಥಿಕ ಪರಿಸ್ಥಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದರೆ ತಪ್ಪಾಗಲಾರದು. ಬೆಲೆ ಏರಿಕೆಯ ಪರಿಣಾಮದಿಂದ ತತ್ತರಿಸುತ್ತಿರುವ ಜನರು ಇದೀಗ ಬೇಳೆಕಾಳುಗಳ ಬೆಲೆಯ ಏರಿಕೆಯನ್ನು ಕೂಡ ಎದುರಿಸಬೇಕಾಗಿದೆ.
ಬೇಳೆಕಾಳುಗಳ ಬೆಲೆಯಲ್ಲಿ ಏರಿಕೆ
ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆ ದಿಡೀರ್ ಏರಿಕೆ ಕಾಣುವ ಸಾಧ್ಯತೆ ಇದೆ. ಬೇಳೆಕಾಳುಗಳ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಅಕಾಲಿಕ ಮಳೆಯೂ ಬೆಳೆಗಳ ಮೇಲೆ ಹೆಚ್ಚಿನ ಅಡ್ಡ ಪರಿಣಾಮವನ್ನು ಬೀರುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಮಧ್ಯಪ್ರದೇಶದಲ್ಲಿ ಬೆಲೆ ಹಾನಿಯಾಗಿದೆ. ಈ ಕಾರಣಕ್ಕೆ ಉದ್ದಿನ ಬೆಲೆ 160 ರೂ., ಕಡಲೆಬೇಳೆ 90 ರಿಂದ 110 ರೂ., ಹೆಸರುಬೇಳೆ 110 ರೂ. ತೊಗರಿಬೇಳೆ 180 ರೂ. ಹೆಸರು ಬೆಲೆ 110 ರೂ. ಕಾಬೂಲ್ ದಾಲ್ 170 ರೂ. ಏರಿಕೆಯಾಗುವ ಸಾಧ್ಯತೆ ಇದೆ.