Sowjanya Case: ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆಯ ಪ್ರಕರಣದಿಂದ ಇದೀಗ ಮತ್ತೆ ಎಲ್ಲೆಡೆ ಪ್ರತಿಭಟನೆ ಶುರುವಾಗಿದೆ. ಹತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಜ್ಜಿರೆ ಮತ್ತು ಧರ್ಮಸ್ಥಳದ ದೇವಾಲಯದ ಪಟ್ಟಣಗಳಲ್ಲಿ 17 ವರ್ಷದ ಸೌಜನ್ಯಳ ಹತ್ಯೆಯ ಪ್ರಕರಣ ಸಂಭವಿಸಿದೆ. ಸೌಜನ್ಯಳ ಹತ್ಯೆ ಪ್ರಕರಣದ ಸಲುವಾಗಿ ಸಾಕಷ್ಟು ಪ್ರತಿಭಟನೆ ನಡೆದಿದೆ. ಸೌಜ್ಯನ್ಯಾಳ ಸಾವಿಗೆ ನ್ಯಾಯ ದೊರಕಿಸಲು ಅನೇಕ ವರ್ಷಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ.
ಇದೀಗ ಸೌಜ್ಯನ್ಯಾಳ ಸಾವಿನ ಪ್ರಕರಣದ ತನಿಖೆ ವಿಚಾರ ಮತ್ತೆ ಶುರುವಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನ ಬಂಧಿಸಿ ವಿಚಾರಣೆ ಮಾಡಲಾಗಿದೆ. ಸದ್ಯ ಈಗ ಮತ್ತೆ ಈ ಪ್ರಕಾರ ಹೊಸ ತಿರುವನ್ನ ಪಡೆದುಕೊಂಡಿದ್ದು ತನಿಖೆ ಬಹಳ ವೇಗವಾಗಿ ನಡೆಯುತ್ತಿದೆ.
ಸೌಜನ್ಯ ಪ್ರಕರಣದ ಹಿನ್ನಲೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಿದ್ದರಾಮಯ್ಯ (Siddaramaiah)
ಧರ್ಮಸ್ಥಳ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಮರು ತನಿಖೆಗೆ ಎಸ್ ಐ ಟಿ ರಚನೆ ಮಾಡುವ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಸೌಜನ್ಯ ಕೊಲೆ ಪಕರಣವನ್ನು ಎಸ್ ಐ ಟಿ ತನಿಖೆಗೆ ವಹಿಸಬೇಕೆಂದು ವಿವಿಧ ಸಂಘಟನೆಗಳ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾರುತನಿಖೆಗೆ ಎಸ್ ಐಟಿ ರಚನೆ ಮಾಡುವ ಬಗ್ಗೆ ಕಾನೂನು ತಜ್ಞರ ಜೊತೆಗೆ ಹ್ರಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. 2012 ಅಕ್ಟೋಬರ್ 9 ರಂದು ನಡೆದಿದ್ದ ಸೌಜನ್ಯ ಹತ್ಯೆ ಕುರಿತಂತೆ ಇದೀಗ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ 20 ಕ್ಕೂ ಹೆಚ್ಚು ಸಂಘಟನೆಗಳು ಆಗ್ರಹಿಸಿದ್ದಾರೆ.
ಇನ್ನು ಸೌಜನ್ಯ ಹತ್ಯೆ ವಿಚಾರವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು ಇತ್ತೀಚಿಗಷ್ಟೇ ಮಾತನಾಡಿದ್ದಾರೆ. ಅಮಾಯಕ ಹೆಣ್ಣುಮಗಳ ಹತ್ಯೆಯ ತನಿಖೆಗೆ ಮೊದಲು ಆಗ್ರಹಿಸಿದ್ದೆ ನಾನು, ಸಿಬಿಐಗೆ ಒಪ್ಪಿಸಲು ಮುಖ್ಯಮಂತ್ರಿಗಳಿಗೆ ಹೇಳಿದ್ದೆ ನಾನು ಯಾರಿಗೂ ಯಾವುದೇ ಕಾರಣಕ್ಕೂ ಅನ್ಯಾಯವನ್ನು ಮಾಡುವುದಿಲ್ಲ. ಕ್ಷೇತ್ರದ ಹೆಸರನ್ನು ಯಾಕೆ ಎಳೆಯುತ್ತಾರೆ ಎನ್ನುವುದು ಗೊತ್ತಿಲ್ಲ. ಹೇಗಾದರೂ ಕ್ಷೇತ್ರವನ್ನು ಮಲಿನ ಮಾಡಬೇಕೆನ್ನುವುದು ಅವರ ಉದ್ದೇಶ ಎಂದಿದ್ದಾರೆ.