SGB Interest: ಕೇಂದ್ರದಿಂದ ಅತೀ ಕಡಿಮೆ ಬೆಲೆ ಚಿನ್ನದ ಮಾರಾಟ, ಕೇಂದ್ರದ ಯೋಜನೆಯಲ್ಲಿ ಚಿನ್ನದ ಬೆಲೆ ಆಕರ್ಷಕ ಆಫರ್.
ಕೇಂದ್ರದಿಂದ ಚಿನ್ನದ ಮೇಲಿನ ಹೂಡಿಕೆಗೆ ಉತ್ತಮ ಅವಕಾಶ.
Sovereign Gold Bond Interest : ಸಾಮಾನ್ಯವಾಗಿ ವಿವಿಧ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಚಿನ್ನದ ಮೇಲಿನ ಹೂಡಿಕೆ ಒಂದು ವಿಧದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ ಏನಾದರೆ ತಪ್ಪಾಗಲಾರದು. ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವ ಕಾರಣ ದಿನೇ ದಿನೇ ಚಿನ್ನದ ಬೆಲೆ ಹೆಚ್ಚು ಏರಿಕೆ ಕಾಣುತ್ತಿದೆ. ಇನ್ನು ಚಿನ್ನದ ಮೇಲಿನ ಹೂಡಿಕೆಯು ಉತ್ತಮ ಹೂಡಿಕೆಯ ವಿಧಾನವಾಗಿದ್ದು, ಸದ್ಯ ಕೇಂದ್ರ ಚಿನ್ನದ ಮೇಲಿನ ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸಿಕೊಡಲು ಮುಂದಾಗಿದೆ.
ಕೇಂದ್ರ ಸರ್ಕಾರ SGB ಯೋಜನೆ
ಕಳೆದ ಕೆಲವು ವರ್ಷದಿಂದ ಡಿಜಿಟಲ್ ಚಿನ್ನದ ಬೇಡಿಕೆ ಹೆಚ್ಚಿದೆ ಎನ್ನಬಹುದು. ಚಿನ್ನದ ಮೇಲೆ ಡಿಜಿಟಲ್ ಹೂಡಿಕೆ ಮಾಡುವ ಮೂಲಕ ನೀವು ಸರ್ಕಾರದಿಂದ ಬಡ್ಡಿಯನ್ನು ಗಳಿಸಬಹುದು. ಇದಕ್ಕಾಗಿ ಸರ್ಕಾರ Sovereign Gold Bond (SGB) ಯೋಜನೆಯನ್ನು ನೀಡಿದೆ. ಸರ್ಕಾರ ಈ ಯೋಜನೆಯ ಬಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ನೀವು ಸ್ಕೀಮ್ ನಲ್ಲಿ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಿ ಲಭ್ಯವನ್ನು ಗಳಿಸಬಹುದು ಎನ್ನುವ ಅಂದಾಜು ನಿಮಗಿದೆಯಾ..? ಇದೀಗ Sovereign Gold Bond ನ ಹೂಡಿಕೆಯ ಲಾಭ ಮತ್ತು ಹೂಡಿಕೆಯ ವಿಧಾನದ ಬಗ್ಗೆ ತಿಳಿಯೋಣ.
Sovereign Gold Bond
ಕೇಂದ್ರ ಸರ್ಕಾರವು 2015 ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯು ಚಿನ್ನದ ಹೂಡಿಕೆಯಾಗಿದ್ದು, ಅದರ ಮೇಲೆ ಬಡ್ಡಿಯನ್ನು ಗಳಿಸಲಾಗುತ್ತದೆ. ಕಾಲಕಾಲಕ್ಕೆ ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಮಾನ್ಯ ಜನರಿಗೆ ಅವಕಾಶ ನೀಡುತ್ತದೆ. ಇದರ ಅಡಿಯಲ್ಲಿ ನೀವು ಒಂದು ಗ್ರಾಂ ನಿಂದ 4 ಕೆಜಿ ವರೆಗೆ ಚಿನ್ನವನ್ನು ಖರೀದಿಸಬಹುದು. ಇದರ ಬೆಲೆಯನ್ನು ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ. ಸಾಮಾನ್ಯವಾಗಿ ಈ ಚಿನ್ನದ ಬೆಲೆ ಸಾಮಾನ್ಯ ಮಾರುಕಟ್ಟೆಗಿಂತ ಅಗ್ಗವಾಗಿದೆ. ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಿದರೆ ಪ್ರತಿ ಗ್ರಾಂ ಗೆ 50 ರೂ. ರಿಯಾಯಿತಿ ಸಹ ಲಭ್ಯವಿದೆ.
1 ಗ್ರಾಂ ಚಿನ್ನ ಖರೀದಿಯಲ್ಲಿ 2.5 ಬಡ್ಡಿ ಪಡೆಯಿರಿ
ಚಿನ್ನವನ್ನು ಬ್ಯಾಂಕ್ ಗಳು, ಅಂಚೆ ಕಚೇರಿಗಳು, ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಾದ STOCK HOLDING CORPORATION OF INDIA LIMITED (SHCIL), Clearing Corporation of India Limited (CCIL), NSI ಮತ್ತು BSE ಗಳಿಂದ ಖರೀದಿಸಬಹುದು.
ಈ ಬಾಂಡ್ ಗಳು ಎಂಟು ವರ್ಷಗಳ ಅವಧಿಗೆ ಇರುತ್ತವೆ. ಅರ್ಥ ಪ್ರಬುದ್ಧತೆ ಎಂಟು ವರ್ಷಗಳ ಅವಧಿಯಲ್ಲಿ ಸಂಭವಿಸುತ್ತದೆ. ಇನ್ನು ನಿರ್ಗಮನ ಆಯ್ಕೆಗಳು 5, 6 ಮತ್ತು 7 ನೇ ವರ್ಷಗಳಲ್ಲಿ ಲಭ್ಯವಿದೆ. ಸರ್ಕಾರವು ಹೂಡಿಕೆಯ ಮೇಲೆ 2.50 ರಷ್ಟು ವಾರ್ಷಿಕ ಬಡ್ಡಿಯನ್ನು ನಿಗದಿಪಡಿಸಿದೆ. ಆರು ತಿಂಗಳುಗಳ ಮಧ್ಯಂತರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ.