Gold Investment : 1 ಗ್ರಾಂ ಚಿನ್ನ ಖರೀದಿಸುವ ಮೂಲಕ 2.5 ಬಡ್ಡಿ ಗಳಿಸಿಕೊಳ್ಳಿ, ಮೋದಿ ಸರ್ಕಾರದಿಂದ ಇನ್ನೊಂದು ಹೊಸ ಯೋಜನೆ ಜಾರಿಗೆ.

ಮೋದಿ ಸರ್ಕಾರದ Sovereign Gold Bond ಯೋಜನೆಯಲ್ಲಿ ಸಿಗಲಿದೆ ಸಾಕಷ್ಟು ಲಾಭ.

Sovereign Gold Bond Investment: ಇತ್ತೀಚೆಗಷ್ಟೇ ಕೇಂದ್ರವು ಚಿನ್ನ ಖರೀದಿಯಲ್ಲಿ Hallmark ಅನ್ನು ಕೂಡ ಕಡ್ಡಾಯಗೊಳಿಸಿದೆ. ಸದ್ಯ ದೇಶದಲ್ಲಿ ಹಾಲ್ ಮಾರ್ಕ್ ಇಲ್ಲದ ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಇನ್ನು ಭಾರತೀಯ ಕಾನೂನಿನಲ್ಲಿ ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಲು ಕೂಡ ಮಿತಿಯನ್ನು ಅಳವಡಿಸಲಾಗಿದೆ. ಚಿನ್ನವನ್ನು ಖರೀದಿಸುವವರು ಕಾನೂನಿನ ಪ್ರತಿ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು.

ಸದ್ಯ ಹಬ್ಬದ ಸೀಸನ್ ಪ್ರರಂಭಗೊಂಡಿದೆ. ಈ ಹಬ್ಬದ ಸೀಸನ್ ನಲ್ಲಿ ಹೆಚ್ಚಾಗಿ ಚಿನ್ನದ ಮೇಲೆ ಹೆಚ್ಚಿನ ಬೇಡಿಕೆ ಇರುತ್ತದೆ. ಜನರು ಹೆಚ್ಚು ಹೆಚ್ಚು ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಇನ್ನೇನು ಮುಂದಿನ ವಾರದಲ್ಲಿ ದೀಪಾವಳಿ ಹಬ್ಬ ಎಲ್ಲಡೆ ಮನೆ ಮಾಡಲಿದೆ. ಈ ದೀಪಾವಳಿ ಹಬ್ಬದ ಸಡಗರಕ್ಕೆ ಜನರು ಹೆಚ್ಚು ಹೆಚ್ಚು ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇದೀಗ ಮೋದಿ ಸರ್ಕಾರ ದೀಪಾವಳಿ ಹಬ್ಬದ ವಿಶೇಷಕ್ಕೆ ಜನರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ.

sovereign gold bond
Image Credit: India TV News

ಮೋದಿ ಸರ್ಕಾರದಿಂದ ಇನ್ನೊಂದು ಹೊಸ ಯೋಜನೆ ಜಾರಿ
ಕಳೆದ ಕೆಲವು ವರ್ಷದಿಂದ ಡಿಜಿಟಲ್ ಚಿನ್ನದ ಬೇಡಿಕೆ ಹೆಚ್ಚಿದೆ ಎನ್ನಬಹುದು. ಚಿನ್ನದ ಮೇಲೆ ಡಿಜಿಟಲ್ ಹೂಡಿಕೆ ಮಾಡುವ ಮೂಲಕ ನೀವು ಸರ್ಕಾರದಿಂದ ಬಡ್ಡಿಯನ್ನು ಗಳಿಸಬಹುದು. ಇದಕ್ಕಾಗಿ ಚಿನ್ನವನ್ನು Exchange-traded fund (ETF) ಅಥವಾ Sovereign Gold Bond (SGB) ಇತ್ಯಾದಿಗಳ ಮೂಲಕ ಖರೀದಿಸಬಹುದು. ಇದೀಗ Sovereign Gold Bond ನ ಹೂಡಿಕೆಯ ಬಗ್ಗೆ ತಿಳಿಯೋಣ. ಈ SGB ಹೂಡಿಕೆಯಲ್ಲಿ ನೀವು ಭದ್ರತೆ ಮತ್ತು ಚಿನ್ನದ ಶುದ್ಧತೆಯನ್ನು ಪಡೆಯಬಹುದು. ಈ ಯೋಜನೆಯ ಹೂಡಿಕೆಯ ಬಡ್ಡಿದರವನ್ನು ಸರ್ಕಾರ ನಿರ್ಧರಿಸುತ್ತದೆ.

ಕೇಂದ್ರ ಸರ್ಕಾರದ Sovereign Gold Bond ಯೋಜನೆ
ಕೇಂದ್ರ ಸರ್ಕಾರವು 2015 ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯು ಚಿನ್ನದ ಹೂಡಿಕೆಯಾಗಿದ್ದು, ಅದರ ಮೇಲೆ ಬಡ್ಡಿಯನ್ನು ಗಳಿಸಲಾಗುತ್ತದೆ. ಕಾಲಕಾಲಕ್ಕೆ ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಮಾನ್ಯ ಜನರಿಗೆ ಅವಕಾಶ ನೀಡುತ್ತದೆ. ಇದರ ಅಡಿಯಲ್ಲಿ ನೀವು ಒಂದು ಗ್ರಾಂ ನಿಂದ 4 ಕೆಜಿ ವರೆಗೆ ಚಿನ್ನವನ್ನು ಖರೀದಿಸಬಹುದು.

Sovereign Gold Bond Scheme
Image Credit: Eisamay

1 ಗ್ರಾಂ ಚಿನ್ನ ಖರೀದಿಸುವ ಮೂಲಕ 2.5 ಬಡ್ಡಿ ಗಳಿಸಿಕೊಳ್ಳಿ
ಇದರ ಬೆಲೆಯನ್ನು ರಿಸರ್ವ್ ಬ್ಯಾಂಕ್ ನಿರ್ಧರಿಸುತ್ತದೆ. ಸಾಮಾನ್ಯವಾಗಿ ಈ ಚಿನ್ನದ ಬೆಲೆ ಸಾಮಾನ್ಯ ಮಾರುಕಟ್ಟೆಗಿಂತ ಅಗ್ಗವಾಗಿದೆ. ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಿದರೆ ಪ್ರತಿ ಗ್ರಾಂ ಗೆ 50 ರೂ. ರಿಯಾಯಿತಿ ಸಹ ಲಭ್ಯವಿದೆ. ಈ ಚಿನ್ನವನ್ನು ಬ್ಯಾಂಕ್‌ ಗಳು, ಅಂಚೆ ಕಚೇರಿಗಳು, ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಾದ STOCK HOLDING CORPORATION OF INDIA LIMITED (SHCIL), Clearing Corporation of India Limited (CCIL), NSI ಮತ್ತು BSE ಗಳಿಂದ ಖರೀದಿಸಬಹುದು.

Join Nadunudi News WhatsApp Group

ಈ ಬಾಂಡ್‌ ಗಳು ಎಂಟು ವರ್ಷಗಳ ಅವಧಿಗೆ ಇರುತ್ತವೆ. ಅರ್ಥ ಪ್ರಬುದ್ಧತೆ ಎಂಟು ವರ್ಷಗಳ ಅವಧಿಯಲ್ಲಿ ಸಂಭವಿಸುತ್ತದೆ. ಇನ್ನು ನಿರ್ಗಮನ ಆಯ್ಕೆಗಳು 5, 6 ಮತ್ತು 7 ನೇ ವರ್ಷಗಳಲ್ಲಿ ಲಭ್ಯವಿದೆ. ಸರ್ಕಾರವು ಹೂಡಿಕೆಯ ಮೇಲೆ 2.50 ರಷ್ಟು ವಾರ್ಷಿಕ ಬಡ್ಡಿಯನ್ನು ನಿಗದಿಪಡಿಸಿದೆ. ಅರ್ಧ ವಾರ್ಷಿಕ ಮಧ್ಯಂತರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ.

Join Nadunudi News WhatsApp Group