Gold Bond Scheme RBI: ಜನರಿಗೆ ಅಗ್ಗದ ಬೆಲೆಯಲ್ಲಿ ಚಿನ್ನವನ್ನ ನೀಡಲು ಮುಂದಾದ RBI, ಜಾರಿಗೆ ಬಂದಿದೆ ಹೊಸ ಯೋಜನೆ.

Gold Bond Scheme RBI: ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಚಿನ್ನ ಖರೀಧಿಸುವವರಲ್ಲಿ ಆತಂಕ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿತ್ತು.

ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಕೂಡ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿಯು ಕೂಡ ದುಬಾರಿಯಾಗುತ್ತಿದೆ. ಇದೀಗ ಸರ್ಕಾರದಿಂದ ಅಗ್ಗದ ಬೆಲೆಯಲ್ಲಿ ಚಿನ್ನದ ಮಾರಾಟವಾಗುತ್ತಿದೆ.

Government Gold Bond Scheme launched by RBI
Image Credit: indiatvnews

ಸರಕಾರಿ ಗೋಲ್ಡ್ ಬಾಂಡ್ ಯೋಜನೆ (Gold Bond Scheme) 
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಮತ್ತೆ ಸರಕಾರಿ ಗೋಲ್ಡ್ ಬಾಂಡ್ ಯೋಜನೆಯನ್ನು ಆರಂಭಿಸಲಿದೆ. ಎರಡು ಹಂತಗಳಲ್ಲಿ ಸರಕಾರಿ ಗೋಲ್ಡ್ ಬಾಂಡ್ ಯೋಜನೆಯನ್ನು ಬಿಡುಗಡೆ ಮಾಡಲಿದೆ.

ಚಿನ್ನದ ಬೆಲೆ ದಿನೇ ದಿನೇ ಏರಿಕೆ ಇಳಿಕೆಯಾಗುತ್ತಲೇ ಇದೆ. ಆದರೂ ಚಿನ್ನ ಹೆಚ್ಚಾಗಿ ಏರಿಕೆಯತ್ತ ಸಾಗುತ್ತಿದೆ. ಇದರ ಮದ್ಯೆ ಕೇಂದ್ರ ಸರಕಾರ ಗ್ರಾಹಕರಿಗೆ ಉತ್ತಮ ಆಫರ್ ನೀಡುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಸರಕಾರಿ ಗೋಲ್ಡ್ ಬಾಂಡ್ ಯೋಜನೆಯನ್ನು ಆರಂಭಿಸಲಿದೆ ಎರಡು ಹಂತಗಳಲ್ಲಿ ಸರಕಾರಿ ಗೋಲ್ಡ್ ಬಾಂಡ್ ಯೋಜನೆಯನ್ನು ಬಿಡುಗಡೆ ಮಾಡಲಿದೆ. ಈ ಹೂಡಿಕೆಯ ಯೋಜನೆಯನ್ನು ಡಿಸೆಂಬರ್ ಮತ್ತು ಮಾಎಚ್ ನಲ್ಲಿ ತೆರೆಯಲಾಗುತ್ತದೆ.

Join Nadunudi News WhatsApp Group

If you invest in Sovereign Gold Bond Scheme, you will get a lot of profit in the price of gold
Image Credit: dnaindia

ಸಾವರಿನ್ ಗೋಲ್ಡ್ ಬಾಂಡ್ ಯೋಜನೆ (Sovereign Gold Bond Yojana) 
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಡಿಸೆಂಬರ್ 19 ರಿಂದ 23 ರವರೆಗೆ ಹೂಡಿಕೆ ಮಾಡಬಹುದು. ಎರಡನೇ ಹಂತದಲ್ಲಿ ಮಾರ್ಚ್ 6 ರಿಂದ 10 ರವರೆಗೆ ಹೂಡಿಕೆ ಮಾಡಲು ಅವಕಾಶವಿದೆ.

ಭಾರತ ಸರಕಾರದ ಪರವಾಗಿ ಆರ್ ಬಿಐ ಈ ಬಾಂಡ್ ಅನ್ನು ಬಿಡುಗಡೆ ಮಾಡುತ್ತದೆ. ಗೋಲ್ಡ್ ಬಾಂಡ್ ಅನ್ನು ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (Stock Holding Corporation Of India Limited), ಕ್ಲಿಯರಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (Clearing Corporation Of India Limited), ಆಯ್ದ ಅಂಚೆ ಕಛೇರಿಗಳು ಮತ್ತು ಬಿಎಸ್ಇ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (National Stock Exchange) ಸಣ್ಣ ಹಣಕಾಸು ಬ್ಯಾಂಕ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ.

If you invest in a gold scheme, you can buy gold at a low price.
Image Credit: livemint

ಚಿನ್ನದ ಮೇಲಿನ ಹೂಡಿಕೆ 
ಚಿನ್ನದ ಬಾಂಡ್ ಅವಧಿ 8 ವಶ ಇರುತ್ತದೆ. ಹೂಡಿಕೆ ದಾರನು ಅರ್ಧ ವಾರ್ಷಿಕ ಆಧಾರದ ಮೇಲೆ ವಾರ್ಷಿಕ 2.50 ಪ್ರತಿಶತದಷ್ಟು ಬಡ್ಡಿಯನ್ನು ಪಡೆಯುತ್ತಾರೆ. ಇ ಯೋಜನೆಯಲ್ಲಿ ಹೂಡಿಕೆದಾರರು ಗರಿಷ್ಠ 4 ಕೇಜಿವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

ಸಾವರಿನ್ ಗೋಲ್ಡ್ ಬಾಂಡ್ ಬೆಳೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಲಾಗುತ್ತದೆ. ಆನ್ಲೈನ್ ನಲ್ಲಿ ಚಂದಾದಾರರಾಗುವ ಮತ್ತು ಡಿಜಿಟಲ್ ಮೂಲಕ ಅನ್ನು ಯೋಜನೆಯಲ್ಲಿ ಪಾವತಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂ ಚಿನ್ನದ ಬೆಲೆಯಮೇಲೆ 50 ರೂಪಾಯಿಯಷ್ಟು ಕಡಿತ ನೀಡಲಾಗುತ್ತದೆ. ಹಿಂದೂ ಅವಿಭಜಿತ ಕುಟುಂಬಕ್ಕೆ 4 ಕೆಜಿ ಮತ್ತು ಸಂಸ್ಥೆಗಳಾದರೆ 20 ಕೆಜಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

Join Nadunudi News WhatsApp Group