Ads By Google

SGB Scheme: ಚಿನ್ನದ ಗ್ರಾಮ್ ಬೆಲೆ ಭರ್ಜರಿ 500 ರೂ ರಿಯಾಯಿತಿ, ಮತ್ತೆ ಜಾರಿಗೆ ಬಂತು ಕೇಂದ್ರದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್.

Sovereign Gold Bond Latest Update

Image Credit: Original Source

Ads By Google

Sovereign Gold Bond Scheme 2023: ಕೇಂದ್ರ ಸರ್ಕಾರವು 2015 ರಲ್ಲಿ ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯು ಚಿನ್ನದ ಹೂಡಿಕೆಯಾಗಿದ್ದು, ಅದರ ಮೇಲೆ ಬಡ್ಡಿಯನ್ನು ಗಳಿಸಲಾಗುತ್ತದೆ. ಕಾಲಕಾಲಕ್ಕೆ ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಮಾನ್ಯ ಜನರಿಗೆ ಅವಕಾಶ ನೀಡುತ್ತದೆ. ಇದರ ಅಡಿಯಲ್ಲಿ ನೀವು ಒಂದು ಗ್ರಾಂ ನಿಂದ 4 ಕೆಜಿ ವರೆಗೆ ಚಿನ್ನವನ್ನು ಖರೀದಿಸಬಹುದು.

ಕಳೆದ ಕೆಲವು ವರ್ಷದಿಂದ ಡಿಜಿಟಲ್ ಚಿನ್ನದ ಬೇಡಿಕೆ ಹೆಚ್ಚಿದೆ ಎನ್ನಬಹುದು. ಚಿನ್ನದ ಮೇಲೆ ಡಿಜಿಟಲ್ ಹೂಡಿಕೆ ಮಾಡುವ ಮೂಲಕ ನೀವು ಸರ್ಕಾರದಿಂದ ಬಡ್ಡಿಯನ್ನು ಗಳಿಸಬಹುದು. ಇದಕ್ಕಾಗಿ ಚಿನ್ನವನ್ನು Sovereign Gold Bond (SGB) ಮೂಲಕ ಖರೀದಿಸಬಹುದು. ಹಾಗಾದರೆ ಈ ಸ್ಕೀಮ್ ನಲ್ಲಿ ಚಿನ್ನ ಖರೀದಿಸುವುದು ಹೇಗೆ ಮತ್ತು ಬೆಲೆ ಹೇಗಿರಲಿದೆ ಅನ್ನುವುದರ ಬಗ್ಗೆ ತಿಳಿಯೋಣ.

Image Credit: timesbull

ಮತ್ತೆ ಜಾರಿಗೆ ಬಂತು ಕೇಂದ್ರದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್
ಸದ್ಯ 2023 -24 ರ ಹಣಕಾಸು ವರ್ಷದಲ್ಲಿ ಚಿನ್ನದ ಬಾಂಡ್ ಗಳ ಮೂರನೇ ಸರಣಿ ಆರಂಭಗೊಂಡಿದೆ. ಸೆಪ್ಟೆಂಬರ್ ನಲ್ಲಿ ಎರಡನೇ ಸರಣಿಯನ್ನು ಆರಂಭಮಾಡಿದ್ದು, ಮೂರನೇ ಸರಣಿ ಹೂಡಿಕೆ ಇಂದಿಂದ ಆರಂಭಿಸಬಹುದು. RBI ಚಿನ್ನದ ಬಾಂಡ್ ಗಳ ಬೆಳೆನ್ನು ಪ್ರತಿ ಗ್ರಾಂ ಗೆ 6199 ರೂ. ಗಳನ್ನೂ ನಿಗದಿಪಡಿಸಿದೆ. ಬಾಂಡ್ ಗಳ ಮಾರಾಟವು ಡಿ, 22 ರವರೆಗೆ ಒಟ್ಟು ಐದು ದಿನಗಳವರೆಗೆ ಇರುತ್ತದೆ.

ಚಿನ್ನದ ಗ್ರಾಮ್ ಬೆಲೆ ಭರ್ಜರಿ 500 ರೂ ರಿಯಾಯಿತಿ
ರಿಸರ್ವ್ ಬ್ಯಾಂಕ್ ಚಿನ್ನದ ಬೆಲೆಯನ್ನು  ನಿರ್ಧರಿಸುತ್ತದೆ. ಸಾಮಾನ್ಯವಾಗಿ ಈ ಚಿನ್ನದ ಬೆಲೆ ಸಾಮಾನ್ಯ ಮಾರುಕಟ್ಟೆಗಿಂತ ಅಗ್ಗವಾಗಿದೆ. ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಿದರೆ ಪ್ರತಿ ಗ್ರಾಂ ಗೆ 50 ರೂ. ರಿಯಾಯಿತಿ ಸಹ ಲಭ್ಯವಿದೆ. ಏನಂದ್ರೆ 100 ಗ್ರಾಂ ನಲ್ಲಿ 500 ರೂ. ರಿಯಾಯಿತಿಯನ್ನು ಪಡೆದುಕೊಳ್ಳ್ಬಹುದು. ಈ ಚಿನ್ನವನ್ನು ಬ್ಯಾಂಕ್‌ ಗಳು, ಅಂಚೆ ಕಚೇರಿಗಳು, ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಾದ STOCK HOLDING CORPORATION OF INDIA LIMITED (SHCIL), Clearing Corporation of India Limited (CCIL), NSI ಮತ್ತು BSE ಗಳಿಂದ ಖರೀದಿಸಬಹುದು.

Image Credit: Moneylife

ಈ ಬಾಂಡ್‌ ಗಳು ಎಂಟು ವರ್ಷಗಳ ಅವಧಿಗೆ ಇರುತ್ತವೆ. ಅರ್ಥ ಪ್ರಬುದ್ಧತೆ ಎಂಟು ವರ್ಷಗಳ ಅವಧಿಯಲ್ಲಿ ಸಂಭವಿಸುತ್ತದೆ. ಇನ್ನು ನಿರ್ಗಮನ ಆಯ್ಕೆಗಳು 5, 6 ಮತ್ತು 7 ನೇ ವರ್ಷಗಳಲ್ಲಿ ಲಭ್ಯವಿದೆ. ಸರ್ಕಾರವು ಹೂಡಿಕೆಯ ಮೇಲೆ 2.50 ರಷ್ಟು ವಾರ್ಷಿಕ ಬಡ್ಡಿಯನ್ನು ನಿಗದಿಪಡಿಸಿದೆ. ಅರ್ಧ ವಾರ್ಷಿಕ ಮಧ್ಯಂತರದಲ್ಲಿ ಬಡ್ಡಿಯನ್ನು ಪಾವತಿಸಲಾಗುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in